Yadagiri: ನಕಲಿ ಬೀಜ ಮಾರಾಟ, ಮುಂಗಾರು ಕೃಷಿ ಉತ್ಸಾಹದಲ್ಲಿರೋ ರೈತರಿಗೆ ದೋಖಾ

ಬೀಜ ಖರೀದಿ ಮಾಡುವ ಮುನ್ನ ಹುಷಾರ್..!ಯಾದಗಿರಿಯಲ್ಲಿವ ನಕಲಿ ಬೀಜ ಮಾರಾಟ ದಂಧೆ..!ಓರ್ವ ಆರೋಪಿ ಬಂಧನ..! ಮುಂಗಾರು ಹಂಗಾಮಿನಲ್ಲಿ ರೈತರ ಕೃಷಿ ಚಟುವಟಿಕೆ ಶುರುವಾಗುತ್ತಿದ್ದಂತೆ ನಕಲಿ ಬೀಜದ ಕಾಟವೂ ಶುರುವಾಗಿದೆ.

First published:

  • 18

    Yadagiri: ನಕಲಿ ಬೀಜ ಮಾರಾಟ, ಮುಂಗಾರು ಕೃಷಿ ಉತ್ಸಾಹದಲ್ಲಿರೋ ರೈತರಿಗೆ ದೋಖಾ

    ಮುಂಗಾರು ಹಂಗಾಮಿನಲ್ಲಿ ರೈತರ ಕೃಷಿ ಚಟುವಟಿಕೆ ಗರಿಗೆದರಿದೆ. ರೈತರು ಈ ಬಾರಿ ಉತ್ತಮ ಬೆಳೆ ಬೆಳೆಯಲು ಭೂಮಿ ಹದ ಮಾಡಿ ಬಿತ್ತನೆ ಮಾಡುತ್ತಿದ್ದಾರೆ. ಆದರೆ, ರೈತರು ಬೀಜ ಖರೀದಿ ಮಾಡಬೇಕೆಂದರೆ ಆತಂಕವಾಗಿದ್ದು,ಯಾದಗಿರಿ ಜಿಲ್ಲೆಯಲ್ಲಿ ನಕಲಿ ಬೀಜ ಹಾಗೂ ಅವಧಿ ಮಿರಿದ ಬೀಜ ಮಾರಾಟ ದಂಧೆ ನಡೆಯುತ್ತಿದೆ.

    MORE
    GALLERIES

  • 28

    Yadagiri: ನಕಲಿ ಬೀಜ ಮಾರಾಟ, ಮುಂಗಾರು ಕೃಷಿ ಉತ್ಸಾಹದಲ್ಲಿರೋ ರೈತರಿಗೆ ದೋಖಾ

    ಗುಣಮಟ್ಟದ ಕಂಪನಿಯ ಬೀಜ ಇದ್ದು,ಉತ್ತಮ ಇಳುವರಿ ಬರುತ್ತದೆ ಎಂದು ಅನಧಿಕೃತ ಬೀಜ ಮಾರಾಟಗಾರರು ಹಳ್ಳಿಗೆ ತೆರಳಿ ರೈತರನ್ನು ನಂಬಿಸಿ ಮೋಸ ಮಾಡುವ ಜಾಲ ಈಗ ಪತ್ತೆಯಾಗಿದೆ. ರೈತರು ಅಪ್ಪಿ ತಪ್ಪಿ ಅನಧಿಕೃತ ಮಾರಾಟಗಾರರಿಂದ ಬೀಜ ಖರೀದಿ ಮಾಡಿದರೆ ಮೋಸ ಹೋಗುವದು ಗ್ಯಾರಂಟಿಯಾಗಿದೆ.

    MORE
    GALLERIES

  • 38

    Yadagiri: ನಕಲಿ ಬೀಜ ಮಾರಾಟ, ಮುಂಗಾರು ಕೃಷಿ ಉತ್ಸಾಹದಲ್ಲಿರೋ ರೈತರಿಗೆ ದೋಖಾ

    ಅತ್ತ ಹಣವು ಇಲ್ಲ ಇತ್ತ ಬೆಳೆಯುವ ಬೆಳೆಯದೇ ಅನ್ನದಾತರು ಬೀದಿ ಪಾಲಾಗುವಂತಾಗುತ್ತದೆ. ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ,ಗುರುಮಿಠಕಲ್, ವಡಗೇರಾ ಸೇರಿದಂತೆ ಮೊದಲಾದ ಕಡೆ 1 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಭೂಮಿಯಲ್ಲಿ ರೈತರು ಬಿತ್ತನೆ ಮಾಡುವ ಗುರಿ ಹೊಂದಿದ್ದು,ಇದನ್ನೆ ಬಂಡವಾಳ ಮಾಡಿಕೊಂಡ ನಕಲಿ ಕಂಪನಿಗಳು ರೈತರಿಗೆ ಮೋಸ ಮಾಡಲು ಮುಂದಾಗಿದ್ದಾವೆ.

    MORE
    GALLERIES

  • 48

    Yadagiri: ನಕಲಿ ಬೀಜ ಮಾರಾಟ, ಮುಂಗಾರು ಕೃಷಿ ಉತ್ಸಾಹದಲ್ಲಿರೋ ರೈತರಿಗೆ ದೋಖಾ

    ಮುಂಗಾರು ಬಿತ್ತನೆ ಚುರುಕು ಪಡೆದುಕೊಂಡ ಹಿನ್ನೆಲೆ ರೈತರು ಹತ್ತಿ ಬೀಜ ಬಿತ್ತನೆ ಮಾಡುತ್ತಿದ್ದು,ಯಾದಗಿರಿ ಜಿಲ್ಲೆಯ ಮಾರುಕಟ್ಟೆಯಲ್ಲಿ ಹತ್ತಿ ಬೀಜಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಇದನ್ನೆ ಬಂಡವಾಳಕೊಂಡ ದಂಧೆಕೊರರು ನಕಲಿ ಹಾಗೂ ಅವಧಿ ಮುಗಿದ ಹತ್ತಿ ಬೀಜ ಮಾರಾಟ ಮಾಡಿ ರೈತರಿಗೆ ಮೋಸ ಮಾಡಿ ಹಣ ಸಂಪಾದನೆ ಮಾಡಲು ಮುಂದಾಗಿದ್ದಾರೆ.

    MORE
    GALLERIES

  • 58

    Yadagiri: ನಕಲಿ ಬೀಜ ಮಾರಾಟ, ಮುಂಗಾರು ಕೃಷಿ ಉತ್ಸಾಹದಲ್ಲಿರೋ ರೈತರಿಗೆ ದೋಖಾ

    ಕೃಷಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ನಕಲಿ ಬೀಜ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮೂಡಬೂಳದ ಆಂಧ್ರ ಕ್ಯಾಂಪನ್ ನಲ್ಲಿ ನಕಲಿ ಹಾಗೂ ಅವಧಿ ಮಿರಿದ ಬೀಜ ಮಾರಾಟ ಮಾಡಲು ಸಂಗ್ರಹಿಸಿಡಲಾಗಿತ್ತು.

    MORE
    GALLERIES

  • 68

    Yadagiri: ನಕಲಿ ಬೀಜ ಮಾರಾಟ, ಮುಂಗಾರು ಕೃಷಿ ಉತ್ಸಾಹದಲ್ಲಿರೋ ರೈತರಿಗೆ ದೋಖಾ

    ಈ ವೇಳೆ ಖಚಿತ ಮಾಹಿತಿ ಮೆರೆಗೆ ಅಧಿಕಾರಿಗಳು ದಾಳಿ ನಡೆಸಿ 60 ಸಾವಿರ ಮೌಲ್ಯದ 80 ನಕಲಿ ಹತ್ತಿ ಬೀಜದ ಪ್ಯಾಕೆಟ್ ಗಳನ್ನು ಜಪ್ತಿ ಮಾಡಿ,ಆರೋಪಿ ಶ್ರೀನಿವಾಸರಾವ್ ಅವರನ್ನು ಬಂಧಿಸಲಾಗಿದೆ.

    MORE
    GALLERIES

  • 78

    Yadagiri: ನಕಲಿ ಬೀಜ ಮಾರಾಟ, ಮುಂಗಾರು ಕೃಷಿ ಉತ್ಸಾಹದಲ್ಲಿರೋ ರೈತರಿಗೆ ದೋಖಾ

    ಈ ಬಗ್ಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಮಾತನಾಡಿ, ಅವಧಿ ಮುಗಿದ ಹಾಗೂ ನಕಲಿ ಬೀಜ ಸಂಗ್ರಹ ಮಾಹಿತಿ ತಿಳಿದು ಭೀಮರಾಯನಗುಡಿ ಪೊಲೀಸರು ದಾಳಿ ನಡೆಸಿ ಹತ್ತಿ ಬೀಜ ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.ರೈತರು ಸರಿಯಾದ ಬೀಜ ನೋಡಿ ಖರೀದಿ ಮಾಡಬೇಕು. ಅಧಿಕೃತ ಮಾರಾಟಗಾರರಿಂದ ಬೀಜ ಖರೀದಿ ಮಾಡಬೇಕೆಂದಿದ್ದಾರೆ.

    MORE
    GALLERIES

  • 88

    Yadagiri: ನಕಲಿ ಬೀಜ ಮಾರಾಟ, ಮುಂಗಾರು ಕೃಷಿ ಉತ್ಸಾಹದಲ್ಲಿರೋ ರೈತರಿಗೆ ದೋಖಾ

    ಕೃಷಿ ಹಾಗೂ ಭೀಮರಾಯಗುಡಿ ಪೊಲೀಸರು ದಾಳಿ ನಡೆಸಿ ಬೀಜ ಜಪ್ತಿ ಮಾಡಿ ,ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅನಧಿಕೃತ ಮಾರಾಟಗಾರರ ಬಣ್ಣದ ಬಣ್ಣದ ಮಾತಿಗೆ ಮರಳಾಗಿ ಬೀಜ ಖರೀದಿ ಮಾಡದೇ ಅನ್ನದಾತರು ಎಚ್ಚರ ವಹಿಸುವುದು ಅಗತ್ಯವಾಗಿದೆ.

    MORE
    GALLERIES