Anekal Karaga: ಕುಲಸ್ಥರು ಹಾಗೂ ಅರ್ಚಕರ ನಡುವಿನ ಜಟಾಪಟಿ: ದೇವಾಲಯದ ಆವರಣಕ್ಕೆ ಸೀಮಿತವಾದ ಆನೇಕಲ್ ಕರಗ!

ಅನೇಕಲ್: ಕರಗ ಹೊರುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ನಡೆದ ಜಟಾಪಟಿಯಿಂದ ವೈಭವದ ಕರಗ ಮಹೋತ್ಸವ ಅರ್ಧದಲ್ಲೇ ನಿಂತಿರುವ ಘಟನೆ ಆನೇಕಲ್‌ನಲ್ಲಿ ನಡೆದಿದೆ.

First published:

  • 17

    Anekal Karaga: ಕುಲಸ್ಥರು ಹಾಗೂ ಅರ್ಚಕರ ನಡುವಿನ ಜಟಾಪಟಿ: ದೇವಾಲಯದ ಆವರಣಕ್ಕೆ ಸೀಮಿತವಾದ ಆನೇಕಲ್ ಕರಗ!

    ಕರಗ ಹೊರುವ ವಿಚಾರದಲ್ಲಿ ಕುಲಸ್ಥರು ಮತ್ತು ಅರ್ಚಕರ ನಡುವಿನ ತಿಕ್ಕಾಟದಿಂದ ಅದ್ಧೂರಿಯಾಗಿ ನಡೆಯಬೇಕಿದ್ದ ಆನೇಕಲ್‌ ಕರಗ ಮಹೋತ್ಸವಕ್ಕೆ ತಾಲೂಕು ಆಡಳಿತ ಬ್ರೇಕ್ ಹಾಕಿದೆ.

    MORE
    GALLERIES

  • 27

    Anekal Karaga: ಕುಲಸ್ಥರು ಹಾಗೂ ಅರ್ಚಕರ ನಡುವಿನ ಜಟಾಪಟಿ: ದೇವಾಲಯದ ಆವರಣಕ್ಕೆ ಸೀಮಿತವಾದ ಆನೇಕಲ್ ಕರಗ!

    ಆನೇಕಲ್‌ನ ಶ್ರೀ ದ್ರೌಪದಮ್ಮ ಹಾಗೂ ಧರ್ಮರಾಯಸ್ವಾಮಿ ದೇವರ ಕರಗ ಮಹೋತ್ಸವ ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ನಡೆಯಬೇಕಿತ್ತು.

    MORE
    GALLERIES

  • 37

    Anekal Karaga: ಕುಲಸ್ಥರು ಹಾಗೂ ಅರ್ಚಕರ ನಡುವಿನ ಜಟಾಪಟಿ: ದೇವಾಲಯದ ಆವರಣಕ್ಕೆ ಸೀಮಿತವಾದ ಆನೇಕಲ್ ಕರಗ!

    ನಿನ್ನೆ ತಡ ರಾತ್ರಿ 2:30 ಸುಮಾರಿಗೆ ಅರ್ಚಕ ರಮೇಶ್ ಅವರು ಕರಗ ಹೊತ್ತು ಹೊರಬಂದಿದ್ದು, ಈ ವೇಳೆ ಕರಗ ಉತ್ಸವ ನೋಡಲು ದೇವಾಲಯದ ಬಳಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದಾರೆ.

    MORE
    GALLERIES

  • 47

    Anekal Karaga: ಕುಲಸ್ಥರು ಹಾಗೂ ಅರ್ಚಕರ ನಡುವಿನ ಜಟಾಪಟಿ: ದೇವಾಲಯದ ಆವರಣಕ್ಕೆ ಸೀಮಿತವಾದ ಆನೇಕಲ್ ಕರಗ!

    ಬೆಂಗಳೂರಿನ ಕರಗದಷ್ಟೇ ಆನೇಕಲ್ ಕರಗ ಕೂಡ ಖ್ಯಾತಿ ಗಳಿಸಿದ್ದು, ದೇವಾಲಯದಿಂದ ಹೊರ ಬರುತ್ತಿದ್ದ ಕರಗ ನಾದಸ್ವರಕ್ಕೆ ಹೆಜ್ಜೆ ಹಾಕಿ ಕುಣಿತ ಮಾಡಿದೆ.

    MORE
    GALLERIES

  • 57

    Anekal Karaga: ಕುಲಸ್ಥರು ಹಾಗೂ ಅರ್ಚಕರ ನಡುವಿನ ಜಟಾಪಟಿ: ದೇವಾಲಯದ ಆವರಣಕ್ಕೆ ಸೀಮಿತವಾದ ಆನೇಕಲ್ ಕರಗ!

    ಈ ಮಧ್ಯೆ ಕರಗ ಹೊರುವ ವಿಚಾರಕ್ಕೆ ಎರಡು ಬಣಗಳ ನಡುವೆ ವಿವಾದ ಉಂಟಾಗಿದ್ದು, ಕಳೆದ ಕೆಲವು ವರ್ಷಗಳಿಂದ ಈ ತಿಕ್ಕಾಟ ಉಂಟಾಗಿದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಲ್ಲಿ ಅದ್ಧೂರಿ ಕರಗಕ್ಕೆ ಬ್ರೇಕ್ ಹಾಕಲಾಗಿದೆ.

    MORE
    GALLERIES

  • 67

    Anekal Karaga: ಕುಲಸ್ಥರು ಹಾಗೂ ಅರ್ಚಕರ ನಡುವಿನ ಜಟಾಪಟಿ: ದೇವಾಲಯದ ಆವರಣಕ್ಕೆ ಸೀಮಿತವಾದ ಆನೇಕಲ್ ಕರಗ!

    ಈ ಬಾರಿಯೂ ಎರಡು ಬಣಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿ ಕಾರಣಕ್ಕಾಗಿ ದೇವಾಲಯದಲ್ಲಿ ಸಾಂಕೇತಿಕ ಕರಗ ಉತ್ಸವ ಮಾಡುವಂತೆ ಸೂಚಿಸಿ ಅದ್ಧೂರಿ ಕರಗ ಮಾಡದಂತೆ ಸೂಚಿಸಲಾಗಿದೆ.

    MORE
    GALLERIES

  • 77

    Anekal Karaga: ಕುಲಸ್ಥರು ಹಾಗೂ ಅರ್ಚಕರ ನಡುವಿನ ಜಟಾಪಟಿ: ದೇವಾಲಯದ ಆವರಣಕ್ಕೆ ಸೀಮಿತವಾದ ಆನೇಕಲ್ ಕರಗ!

    ತಹಶೀಲ್ದಾರ್ ಶಿವಪ್ಪ ಲಮಾಣಿ ಸೂಚನೆಯಂತೆ ದೇವಾಲಯದ ಆವರಣದಲ್ಲಿ ಕರಗ ಉತ್ಸವ ಮಾಡಿದ್ದು, ದೇವಾಲಯದಲ್ಲಿ ಮಾತ್ರ ಕರಗ ನಡೆಸಿ ಸರಳವಾಗಿ ಆಚರಣೆ ಮಾಡಲಾಯಿತು.

    MORE
    GALLERIES