Bengaluru: ಚಾಲಕನನ್ನ ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿ ಹಲ್ಲೆಗೈದಿದ್ದ ವೈದ್ಯ ಅರೆಸ್ಟ್

ಚಾಲಕನನ್ನು ವಿವಸ್ತ್ರಗೊಳಿಸಿ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಹಲ್ಲೆಗೈದಿರುವ ವೈದ್ಯನನ್ನು ಬಾಗಲೂರು (Bagaluru) ಪೊಲೀಸರು (Police) ಬಂಧಿಸಿದ್ದಾರೆ. ನವೆಂಬರ್ 4ರ ರಾತ್ರಿ ಈ ಘಟನೆ ನಡೆದಿದೆ. ಚಾಲಕ (Auto Driver) ನೀಡಿದ ದೂರಿನ ಆಧಾರದ ಮೇಲೆ ಪ್ರಖರಣ ದಾಖಲಿಸಿಕೊಂಡಿದ್ದ ಪೊಲೀಸರು (Police), ಓರ್ವನನ್ನು ಬಂಧಿಸಿದ್ದಾರೆ.

First published:

  • 15

    Bengaluru: ಚಾಲಕನನ್ನ ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿ ಹಲ್ಲೆಗೈದಿದ್ದ ವೈದ್ಯ ಅರೆಸ್ಟ್

    ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಯಲಹಂಕ ನಿವಾಸಿ 26 ವರ್ಷದ ಮುರಳಿ ಹಲ್ಲೆಗೊಳಗಾದ ಆಟೋ ಚಾಲಕ. ಬಂಧಿತ ವೈದ್ಯ ಬಾಗಲೂರಿನಲ್ಲಿ ಮಾರುತಿ ಕ್ಲಿನಿಕ್ ನಡೆಸುತ್ತಿದ್ದಾನೆ.

    MORE
    GALLERIES

  • 25

    Bengaluru: ಚಾಲಕನನ್ನ ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿ ಹಲ್ಲೆಗೈದಿದ್ದ ವೈದ್ಯ ಅರೆಸ್ಟ್

    ಹಲ್ಲೆಗೊಳಗಾದ ಆಟೋ ಚಾಲಕ ಮತ್ತು ವೈದ್ಯ ರಾಕೇಶ್ ಇಬ್ಬರಿಗೂ ಮೊದಲಿನಿಂದಲೂ ಪರಿಚಯವಿದ್ದ ಹಿನ್ನೆಲೆ ಜೊತೆಯಾಗಿ ಮದ್ಯ ಸೇವನೆ ಮಾಡಿದೆ. ಮದ್ಯದ ನಶೆಯಲ್ಲಿ ಈ ಗಲಾಟೆ ನಡೆದಿದೆ ಎಂದು ಆಟೋ ಚಾಲಕ ಹೇಳಿಕೊಂಡಿದ್ದಾನೆ.

    MORE
    GALLERIES

  • 35

    Bengaluru: ಚಾಲಕನನ್ನ ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿ ಹಲ್ಲೆಗೈದಿದ್ದ ವೈದ್ಯ ಅರೆಸ್ಟ್

    ನವೆಂಬರ್ 4ರಂದು ಕ್ಲಿನಿಕ್ ಗೆ ರಾಕೇಶ್ ನನ್ನನ್ನು ಕರೆದು, ಪಟಾಕಿ ತರುವಂತೆ ಹೇಳಿದರು. ಪಟಾಕಿ ನೀಡಿದ ನಂತರ ಬಿರಿಯಾನಿ ಮತ್ತು ಫ್ರೈ ಮಾಡಿಸಿದ್ದೇನೆ. ಅದೆಲ್ಲವನ್ನು ಕಂಟ್ರಿ ಕ್ಲಬ್ ಗೆ ತಂದು ಕೊಡುವಂತೆ ಹೇಳಿದರು. ನಾನು ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಜೊತೆ ಊಟ ತೆಗೆದುಕೊಂಡು ಹೋದೆ.

    MORE
    GALLERIES

  • 45

    Bengaluru: ಚಾಲಕನನ್ನ ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿ ಹಲ್ಲೆಗೈದಿದ್ದ ವೈದ್ಯ ಅರೆಸ್ಟ್

    ಊಟದ ನಂತರ ನನಗೂ ಮದ್ಯ ಕುಡಿಸಿ ಅವಾಚ್ಯ ಪದ ಬಳಸಿ, ನೀನು ಕೀಳು ಜಾತಿಯವನು ಎಂದು ನಿಂದಿಸಿದರು. ವಿವಸ್ತ್ರಗೊಳಿಸಿ, ಶೌಚಾಲಯಕ್ಕೆ ಎಳೆದೊಯ್ದು ಮೂತ್ರ ವಿಸರ್ಜನೆ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದರು ಎಂದು ಆಟೋ ಚಾಲಕ ಮುರಳಿ ಹೇಳಿದ್ದಾನೆ.

    MORE
    GALLERIES

  • 55

    Bengaluru: ಚಾಲಕನನ್ನ ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿ ಹಲ್ಲೆಗೈದಿದ್ದ ವೈದ್ಯ ಅರೆಸ್ಟ್

    ಆಟೋ ಚಾಲಕ ಹೇಳುವ ಪ್ರಕಾರ ಅಲ್ಲಿ ಸುಮಾರು 15 ಜನರಿದ್ದರು. ಸದ್ಯ ಓರ್ವನನ್ನು ಬಂಧಿಸಲಾಗಿದೆ. ಸದ್ಯ ಆಟೋ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    MORE
    GALLERIES