Gol Gumbaz ಸ್ಮಾರಕ ವೀಕ್ಷಿಸಿದ ಡಾ.ವೀರೇಂದ್ರ ಹೆಗ್ಗಡೆ: ಫೋಟೋಗಳಲ್ಲಿ ನೋಡಿ
ಶುಕ್ರವಾರ ವಿಜಯಪುರ ನಗರಕ್ಕೆ ಆಗಮಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಅವರು ಜಗದ್ವಿಖ್ಯಾತ ಗೋಲಗುಂಬಜ ಸ್ಮಾರಕ ವೀಕ್ಷಿಸಿದರು. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಹೆಗ್ಗಡೆ ಅವರು ಆಗಮಿಸಿದ್ದರು,
ಇನ್ನುವೀರೇಂದ್ರ ಹೆಗ್ಗಡೆ ಅವರು ಗುಮ್ಮಟಕ್ಕೆ ಆಗಮಿಸುತ್ತಿದ್ದಂತೆ ಪ್ರವಾಸಿ ಮಾರ್ಗದರ್ಶಿಗಳು ಇತರೆ ಪ್ರವಾಸಿಗರನ್ನು ದೂರ ಹೋಗುವಂತೆ ಹೇಳುತ್ತಿದ್ದರು, ಇದನ್ನು ಕಂಡು ಯಾರಿಗೂ ತಮ್ಮಿಂದ ತೊಂದರೆ ಆಗಬಾರದು ಎಂದು ಹೇಳಿ ಸಾಮಾನ್ಯರಂತೆ ಗೋಲಗುಂಬಜ ವೀಕ್ಷಣೆ ಮಾಡಿದರು.
2/ 5
ಗೋಲಗುಂಬಜ್ ಗೆ ಆಗಮಿಸುತ್ತಿದ್ದಂತೆ ವಿನ್ಯಾಸ ಕಂಡು ಅಚ್ಚರಿ ವ್ಯಕ್ತಪಡಿಸಿದರು. ಯಾರ ಸಹಾಯ ಇಲ್ಲದೇ ಯುವಕರಂತೆ ಗೋಲಗುಂಬಜ್ ಹತ್ತಿ ತಮ್ಮ ಮೊಬೈಲ್ ನಲ್ಲಿ ಚಿತ್ರ ಸೆರೆ ಹಿಡಿದುಕೊಂಡು ಸಂಭ್ರಮಿಸಿದರು.
3/ 5
ಈ ವೇಳೆ ಪ್ರವಾಸಿ ಮಾರ್ಗದರ್ಶಿಗಳಿಂದ ವಿಜಯಪುರದ ಇತಿಹಾಸ, ನಗರದಲ್ಲಿರುವ ಬೇರೆ ಸ್ಮಾರಕಗಳ ಬಗ್ಗೆ ಮಾಹಿತಿ ತಿಳಿದುಕೊಂಡರು. ಗೋಡೆಯ ಗ್ಯಾಲರಿಯ ಕಿಂಡಿಗಳಿಂದ ಹೊರ ಹೊಮ್ಮುವ ಪಿಸು ಮಾತು ಸಹ ಕೇಳಿದರು.
4/ 5
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಬಾಲ್ಯದಲ್ಲಿ ವಿಜಯಪುರಕ್ಕೆ ಭೇಟಿ ನೀಡಿರುವ ನೆನಪುಗಳನ್ನು ಮೆಲಕು ಹಾಕಿಕೊಂಡರು. ಆದ ಒಳಗೆ ಬರುತ್ತಿದ್ದಂತೆ ಸಪ್ತಧ್ವನಿ ಕೇಳಿ ಸಂಭ್ರಮಿಸಿದ್ದೆ ಎಂದು ಹೇಳಿದರು,
5/ 5
ತಮಗೆ ವಿಜಯಪುರದ ವೈಶಿಷ್ಯ ಮತ್ತು ಇತಿಹಾಸದ ವಿವರಣೆ ನೀಡಿದ ಮಾರ್ಗದರ್ಶಿ ರಾಜಶೇಖರ್ ಎಂಬವರನ್ನು ಶ್ಲಾಘಿಸಿದರು. ನಂತರ ಶ್ರೀಮಠದ ಶಾಲು ನೀಡಿ ಗೌರವಿಸಿದರು. ಇನ್ನು ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಹೆಗ್ಗಡೆ ಅವರ ಸರಳತೆ ಕಂಡು ಮೂಕವಿಸ್ಮಿತರಾದರು.