DK Shivakumar: ‘ಡೋಂಟ್ ಡಿಸ್ಟರ್ಬ್’ ವೇದಿಕೆ ಮೇಲೆಯೇ ಎಂಬಿಪಿಗೆ ಗದರಿದ ಡಿಕೆಶಿ! ಅಸಲಿಗೆ ಆಗಿದ್ದೇನು?

ನಾನು ಬಂಗಾರಪ್ಪನ ಶಿಷ್ಯ, ಎಸ್.ಎಂ.ಕೃಷ್ಣರ ಶಿಷ್ಯ ಅಲ್ಲ. ನಾನು ಬಂಗಾರಪ್ಪನವರ ಜೊತೆ ರಾಜಕಾರಣ ಶುರು ಮಾಡಿದವನು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

First published:

  • 17

    DK Shivakumar: ‘ಡೋಂಟ್ ಡಿಸ್ಟರ್ಬ್’ ವೇದಿಕೆ ಮೇಲೆಯೇ ಎಂಬಿಪಿಗೆ ಗದರಿದ ಡಿಕೆಶಿ! ಅಸಲಿಗೆ ಆಗಿದ್ದೇನು?

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಜೊತೆ ಮಾತನಾಡುತ್ತಿದ್ದ ಸಚಿವ ಎಂ.ಬಿ ಪಾಟೀಲ್ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆದ ಘಟನೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು.

    MORE
    GALLERIES

  • 27

    DK Shivakumar: ‘ಡೋಂಟ್ ಡಿಸ್ಟರ್ಬ್’ ವೇದಿಕೆ ಮೇಲೆಯೇ ಎಂಬಿಪಿಗೆ ಗದರಿದ ಡಿಕೆಶಿ! ಅಸಲಿಗೆ ಆಗಿದ್ದೇನು?

    ಇಂದು ಕೆಪಿಸಿಸಿ ಕಛೇರಿಯಲ್ಲಿ ರಾಜೀವ್ ಗಾಂಧಿ ಅವರ ಶ್ರದ್ದಾಂಜಲಿ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಡಿಕೆ ಶಿವಕುಮಾರ್ ವೇದಿಕೆ ಮೇಲೆ ಭಾಷಣದ ಮಾಡುತ್ತಿದ್ದಾಗ ವೇದಿಕೆ ಮೇಲೆ ಕುಳಿತಿದ್ದ ಸಿಎಂ ಸಿದ್ದರಾಮಯ್ಯ ಜೊತೆ ಎಂ ಬಿ ಪಾಟೀಲ್ ಮಾತಾಡುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಡಿಕೆಶಿ, ಡೋಂಟ್ ಡಿಸ್ಟರ್ಬ್ ಎಂದು ಗದರಿದರು.

    MORE
    GALLERIES

  • 37

    DK Shivakumar: ‘ಡೋಂಟ್ ಡಿಸ್ಟರ್ಬ್’ ವೇದಿಕೆ ಮೇಲೆಯೇ ಎಂಬಿಪಿಗೆ ಗದರಿದ ಡಿಕೆಶಿ! ಅಸಲಿಗೆ ಆಗಿದ್ದೇನು?

    ಎಂಬಿ ಪಾಟೀಲ್ ಅವರು ಸಿದ್ದರಾಮಯ್ಯ ಅವರ ಕೈ ನೋಡಿ ಆರೋಗ್ಯ ವಿಚಾರಿಸುತ್ತಿದ್ದರು. ಆದರೆ ಡಿಕೆಶಿ ಮಾತಿಗೆ, ಸಮಜಾಯಿಷಿ ನೀಡಲು ಮುಂದಾದ ಎಂಬಿಪಿ ಮುಂದಾದ ವೇಳೆಯೂ ಇರಲಿ ಡೋಂಟ್ ಡಿಸ್ಟರ್ಬ್ ಇಲ್ಲಿ ಕೆಲವು ಹೊಸ ವಿಚಾರ ಹೇಳುತ್ತಿದ್ದೇನೆ ಎಂದು ಡಿಕೆಶಿ ಹೇಳಿದರು. ಇದರಿಂದ ಮುಜುಗರಕ್ಕೆ ಒಳಗಾದಂತೆ ಕಂಡ ಎಂಬಿಪಿ ಸುಮ್ಮನಾದರು.

    MORE
    GALLERIES

  • 47

    DK Shivakumar: ‘ಡೋಂಟ್ ಡಿಸ್ಟರ್ಬ್’ ವೇದಿಕೆ ಮೇಲೆಯೇ ಎಂಬಿಪಿಗೆ ಗದರಿದ ಡಿಕೆಶಿ! ಅಸಲಿಗೆ ಆಗಿದ್ದೇನು?

    ಆ ಬಳಿಕ ಮಾತನಾಡಿದ ಡಿಕೆಶಿ, ನಾನು ಬಂಗಾರಪ್ಪನ ಶಿಷ್ಯ, ಎಸ್.ಎಂ.ಕೃಷ್ಣರ ಶಿಷ್ಯ ಅಲ್ಲ. ನಾನು ಬಂಗಾರಪ್ಪನವರ ಜೊತೆ ರಾಜಕಾರಣ ಶುರು ಮಾಡಿದವನು. ಎಲ್ಲರು ವೀರೇಂದ್ರ ಪಾಟೀಲ್ ರನ್ನ ಇಳಿಸಿದರು ಹಾಗೆ ಹೀಗೆ ಅಂತಾರೆ. ಆದರೆ ಅವತ್ತು ಅವರ ಆರೋಗ್ಯ ಸ್ಥಿತಿ ಆಗಿತ್ತು. ಆದ್ದರಿಂದ ತೀರ್ಮಾನ ಕೈಗೊಂಡರು ಎಂದು ಸ್ಪಷ್ಟನೆ ನೀಡಿದರು.

    MORE
    GALLERIES

  • 57

    DK Shivakumar: ‘ಡೋಂಟ್ ಡಿಸ್ಟರ್ಬ್’ ವೇದಿಕೆ ಮೇಲೆಯೇ ಎಂಬಿಪಿಗೆ ಗದರಿದ ಡಿಕೆಶಿ! ಅಸಲಿಗೆ ಆಗಿದ್ದೇನು?

    ಅಲ್ಲದೆ, ಅಧಿಕಾರಕ್ಕಾಗಿ ಯಾರು ಯಾರನ್ನು ಭೇಟಿ ಮಾಡಿ ಲಾಬಿ ನಡೆಸಬಾರದು. ಕಾಂಗ್ರೆಸ್‌ ಕಾರ್ಯಕರ್ತರು ಲೀಡರ್ ಶಿಪ್​ ಬೇಕು. ನಾಯಕತ್ವವನನ್ನು ಲೋಕಲ್ ನಲ್ಲಿ ತೋರಿಸಬೇಕು ಎಂದು ಕಾರ್ಯಕರ್ತರು ಕರೆ ನೀಡಿದರು.

    MORE
    GALLERIES

  • 67

    DK Shivakumar: ‘ಡೋಂಟ್ ಡಿಸ್ಟರ್ಬ್’ ವೇದಿಕೆ ಮೇಲೆಯೇ ಎಂಬಿಪಿಗೆ ಗದರಿದ ಡಿಕೆಶಿ! ಅಸಲಿಗೆ ಆಗಿದ್ದೇನು?

    ಸಿದ್ದರಾಮಯ್ಯ ಭೇಟಿ ಮಾಡುವುದು, ಅಲ್ಲಿಂದ ಸಿದ್ದರಾಮಯ್ಯ ಈ ರೀತಿ ಅಂದರು, ಎಂಬಿ ಪಾಟೀಲ್ ಹೀಗೆ ಅಂದರು ಅಂತ ನನ್ನ ಮುಂದೆ ಬಂದು ಅವರು ಈ ರೀತಿ ಹೇಳಿದರು ಎಂದು ಚಾಡಿ ಹೇಳಬೇಡಿ. ನಾನು ಯಾರ್ ಮಾತು ಕೇಳುವುದಿಲ್ಲ ನನಗೆ ಮಂತ್ರಿಯಾಗಿ 30 ವರ್ಷ ಅನುಭವ ಇದೆ. ನನ್ನ‌ದೇ ಆದ ವಿಚಾರಗಳಲ್ಲಿ ನಾನು ತೀರ್ಮಾನ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

    MORE
    GALLERIES

  • 77

    DK Shivakumar: ‘ಡೋಂಟ್ ಡಿಸ್ಟರ್ಬ್’ ವೇದಿಕೆ ಮೇಲೆಯೇ ಎಂಬಿಪಿಗೆ ಗದರಿದ ಡಿಕೆಶಿ! ಅಸಲಿಗೆ ಆಗಿದ್ದೇನು?

    ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಗೂ ವ್ಯತ್ಯಾಸ ಇದೆ. ಅದನ್ನು ತಿಳಿದುಕೊಳ್ಳಬೇಕು, ಮಲ್ಲಿಕಾರ್ಜುನ ಖರ್ಗೆ ಅವರ ತ್ಯಾಗ, ನಾಯಕತ್ವದ ಬಗ್ಗೆ ನಾವು ಮಾತನಾಡೋಕ್ಕಾಗಲ್ಲ. ನಮ್ಮ ಇಬ್ಬರಿಗೂ ಏನು ಹೇಳಬೇಕೋ ಅದನ್ನ ಹೈ ಕಮಾಂಡ್ ನಾಯಕರು ಹೇಳಿದ್ದಾರೆ ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದು ತಿಳಿಸಿದರು.

    MORE
    GALLERIES