ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar

ಇಂದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಸುತ್ತಿದ್ದು, ಇದಕ್ಕೂ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಳಗ್ಗೆ ನಡುಗುವ ಚಳಿಯಲ್ಲಿ ಕಾವೇರಿ ನದಿಗೆ ಇಳಿದು ಸ್ನಾನ ಮಾಡಿದ್ದರು. ಕನಕಪುರ ತಾಲೂಕಿನ ಸಂಗಮದ ದಡದಿಂದ ತೆಪ್ಪದಲ್ಲಿ ಡಿ.ಕೆ.ಶಿವಕುಮಾರ್ ನದಿಯ ಮಧ್ಯ ಭಾಗಕ್ಕೆ ಅರ್ಚಕರ ಜೊತೆ ತೆರಳಿದ್ದರು.

First published:

 • 15

  ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar

  ನದಿಯ ಮಧ್ಯ ಭಾಗದಲ್ಲಿರುವ ಕಲ್ಲು ಬಂಡೆಯ ಮೇಲೆ ಇಳಿದ ಡಿ.ಕೆ.ಶಿವಕುಮಾರ್ ಪುಣ್ಯ ಸ್ನಾನ ಮಾಡಿದರು. ನಂತರ ಕಲ್ಲು ಬಂಡೆಯ ಮೇಲೆ ಕುಳಿತು ಕಾವೇರಿ ತಾಯಿಗೆ ಪೂಜೆ ಸಲ್ಲಿಸಲು ಮುಂದಾಗಿದ್ದರು.

  MORE
  GALLERIES

 • 25

  ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar

  ಈ ವೇಳೆ ಕಲ್ಲು ಬಂಡೆ ಮೇಲೆ ಕುಳಿತು ಕೊಳ್ಳುವಾಗ ಆಯ ತಪ್ಪಿದರು. ಕೂಡಲೇ ಸುಧಾರಿಸಿಕೊಂಡ ಡಿ.ಕೆ,ಶಿವಕುಮಾರ್, ಕಾವೇರಿ ತಾಯಿಗೆ ಪುಷ್ಪಾರ್ಚನೆ ಮಾಡಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  MORE
  GALLERIES

 • 35

  ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar

  ನಮ್ಮ ನಾಯಕರಲ್ಲಿ ರಕ್ತಗತವಾಗಿ ಹೋರಾಟಗಳು ಬಂದಿವೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ನಮ್ಮ ಈ ಹೋರಾಟ ಅಧಿಕಾರಕ್ಕಲ್ಲ. ಈ ರಾಜ್ಯದ ಜನರಿಗಾಗಿ ಹೋರಾಟ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

  MORE
  GALLERIES

 • 45

  ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar

  ಈ ನಮ್ಮ ಹೋರಾಟಕ್ಕೆ ಏನಾದರೂ ಮಾಡಿ ತೊಂದರೆ ಮಾಡಬೇಕು ಅಂದುಕೊಳ್ಳುತ್ತಿದ್ದಾರೆ. ಅನೇಕ ಟೀಕೆಗಳು ಕೇಳಿ ಬಂದಿವೆ. ಈ ಹೋರಾಟಕ್ಕೆ ಸಹಕರಿಸಿದ ಕಲಾವಿದರು, ರೈತರು ಹಾಗೂ ಎಲ್ಲ ಜನತೆಗೆ ಡಿ.ಕೆ.ಶಿವಕುಮಾರ್ ಧನ್ಯವಾದ ಸಲ್ಲಿಸಿದರು.

  MORE
  GALLERIES

 • 55

  ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar

  ಕನಕಪುರದಿಂದ ಆರಂಭವಾಗಿರುವ ಪಾದಯಾತ್ರೆ ಇಂದು ಸಂಜೆ ದೊಡ್ಡಾಲಳ್ಳಿಯನ್ನು ತಲುಪಲಿದೆ. ಅಲ್ಲಿಯೇ ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಲಿದ್ದಾರೆ. ಕಾಂಗ್ರೆಸ್ ನಾಯಕರ ಆಗಮನ ಹಿನ್ನೆಲೆ ದೊಡ್ಡಾಲಳ್ಳಿಯನ್ನು ವಿದ್ಯುತ್ ದೀಪಾಲಂಕರದಿಂದ ಕಂಗೊಳಿಸುತ್ತಿದೆ.

  MORE
  GALLERIES