Coconut Shell: ತೆಂಗಿನ ಚಿಪ್ಪಿನ ಕಲಾಕೃತಿ, ಮಹಿಳೆಯರು ಮನಸ್ಸು ಮಾಡಿದ್ರೆ ಆದಾಯ ಕೈ ಹಿಡಿಯೋದು ಪಕ್ಕಾ!

ಕಸದಿಂದ ರಸ ಅನ್ನೋ ಪರಿಕಲ್ಪನೆ ಈ ಹಿಂದಿನಿಂದಲೂ ನಮ್ಮಲ್ಲಿದೆ. ಪ್ರಕೃತಿಯಿಂದ ಸಿಗುವ ಪ್ರತಿಯೊಂದು ವಸ್ತುಗಳೂ ಬಳಕೆಗೆ ಯೋಗ್ಯವಾದುದೇ ಆಗಿದೆ. ಆದರೆ ಅದರ ಮಹತ್ವ ಮತ್ತು ಬಳಕೆಯನ್ನು ತಿಳಿಯದೆ ಎಸೆದು ಬಿಡುತ್ತೇವೆ. ಇಲ್ಲೊಂದ್ಕಡೆ ಮಾತ್ರ ತೆಂಗಿನ ಗೆರಟೆಯಿಂದಲೂ ಅಪರೂಪದ ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

First published:

  • 17

    Coconut Shell: ತೆಂಗಿನ ಚಿಪ್ಪಿನ ಕಲಾಕೃತಿ, ಮಹಿಳೆಯರು ಮನಸ್ಸು ಮಾಡಿದ್ರೆ ಆದಾಯ ಕೈ ಹಿಡಿಯೋದು ಪಕ್ಕಾ!

    ಹೌದು.. ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ತೆಂಗಿನ ಗರಟೆಯಿಂದ ವಿವಿಧ ಕಲಾಕೃತಿಗಳನ್ನು ತಯಾರಿಸುವ ಕಾರ್ಯಾಗಾರ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಿತು.

    MORE
    GALLERIES

  • 27

    Coconut Shell: ತೆಂಗಿನ ಚಿಪ್ಪಿನ ಕಲಾಕೃತಿ, ಮಹಿಳೆಯರು ಮನಸ್ಸು ಮಾಡಿದ್ರೆ ಆದಾಯ ಕೈ ಹಿಡಿಯೋದು ಪಕ್ಕಾ!

    ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಮಹಿಳಾ ಸಂಘಗಳು ಮತ್ತು ಸ್ವಸಹಾಯ ಸಂಘಗಳ ಸದಸ್ಯರಿಗೆ ಈ ಕಾರ್ಯಾಗಾರವನ್ನು ನಡೆಸಿ ಸ್ವಯಂ ಉದ್ಯೋಗ ನಡೆಸುವಂತೆ ಪ್ರೇರೇಪಿಸಲಾಯಿತು.

    MORE
    GALLERIES

  • 37

    Coconut Shell: ತೆಂಗಿನ ಚಿಪ್ಪಿನ ಕಲಾಕೃತಿ, ಮಹಿಳೆಯರು ಮನಸ್ಸು ಮಾಡಿದ್ರೆ ಆದಾಯ ಕೈ ಹಿಡಿಯೋದು ಪಕ್ಕಾ!

    ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಸಂಸ್ಥೆಯ ಮುಂದಾಳತ್ವದಲ್ಲಿ ಮತ್ತು ನಬಾರ್ಡ್ ಭಾರತೀಯ ವಿಕಾಸ ಟ್ರಸ್ಟ್ ಇದರ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿದರು.

    MORE
    GALLERIES

  • 47

    Coconut Shell: ತೆಂಗಿನ ಚಿಪ್ಪಿನ ಕಲಾಕೃತಿ, ಮಹಿಳೆಯರು ಮನಸ್ಸು ಮಾಡಿದ್ರೆ ಆದಾಯ ಕೈ ಹಿಡಿಯೋದು ಪಕ್ಕಾ!

    ಅಂದ ಹಾಗೆ ವಿದೇಶಗಳಲ್ಲಿ ತೆಂಗಿನ ಗೆರಟೆಗಳಿಂದ ಮಾಡಿದ ಕಲಾಕೃತಿಗಳಿಗೆ ವ್ಯಾಪಕ ಬೇಡಿಕೆಗಳಿವೆ. ಹೀಗಾಗಿ ಅವುಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಭಾಗದ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಕಲಾಕೃತಿಗಳನ್ನು ತಯಾರಿಸುವ ಕೆಲಸ ಮಾಡಲಾಗ್ತಿದೆ.

    MORE
    GALLERIES

  • 57

    Coconut Shell: ತೆಂಗಿನ ಚಿಪ್ಪಿನ ಕಲಾಕೃತಿ, ಮಹಿಳೆಯರು ಮನಸ್ಸು ಮಾಡಿದ್ರೆ ಆದಾಯ ಕೈ ಹಿಡಿಯೋದು ಪಕ್ಕಾ!

    ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಸಂಸ್ಥೆಯು ತೆಂಗು ಬೆಳೆಗಾರರಿಗೆ ಆಗುವ ನಷ್ಟಗಳನ್ನು ಹಾಗೂ ಆರ್ಥಿಕವಾಗಿ ಸಹಾಯವನ್ನು ಮಾಡಲು ಮತ್ತು ದೇಶ ವಿದೇಶಗಳಲ್ಲಿ ತೆಂಗಿನ ಚಿಪ್ಪುಗಳಿಂದ ಮಾಡಿದ ಕಲಾ ಕೃತಿಗಳಿಗೆ ತುಂಬಾ ಬೇಡಿಕೆ ಇರುವುದನ್ನು ಗಮನಿಸಿ ಇಂತಹ ಸಾಹಸಕ್ಕೆ ಕೈ ಹಾಕಿದೆ.

    MORE
    GALLERIES

  • 67

    Coconut Shell: ತೆಂಗಿನ ಚಿಪ್ಪಿನ ಕಲಾಕೃತಿ, ಮಹಿಳೆಯರು ಮನಸ್ಸು ಮಾಡಿದ್ರೆ ಆದಾಯ ಕೈ ಹಿಡಿಯೋದು ಪಕ್ಕಾ!

    ಅಲ್ಲದೇ, ತೆಂಗಿನ ಕಾಯಿಗಳಿಂದ ಮೌಲ್ಯವರ್ಧನ ಮಾಡಿದ ವಸ್ತುಗಳಿಗೆ ವಿದೇಶಗಳಲ್ಲಿ ಬೇಡಿಕೆ ಇರುವುದರಿಂದ ಸಂಸ್ಥೆಯು ರಾಜ್ಯದ ತೆಂಗು ಬೆಳೆ ಬೆಳೆಯುವ ರೈತರ ಪರವಾಗಿ ಕೆಲಸವನ್ನು ಮಾಡುತ್ತಿದೆ.

    MORE
    GALLERIES

  • 77

    Coconut Shell: ತೆಂಗಿನ ಚಿಪ್ಪಿನ ಕಲಾಕೃತಿ, ಮಹಿಳೆಯರು ಮನಸ್ಸು ಮಾಡಿದ್ರೆ ಆದಾಯ ಕೈ ಹಿಡಿಯೋದು ಪಕ್ಕಾ!

    ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಸಂಸ್ಥೆಯ ತರಬೇತುದಾರರಿಂದ ಕರ್ನಾಟಕ ಸರಕಾರದ ಸಂಜೀವಿನಿ ಒಕ್ಕೂಟಗಳಿಗೆ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡುವ ಕೆಲಸ ನಡೆಯುತ್ತಿದ್ದು, ಪ್ರತಿ ತಿಂಗಳು ಹೆಚ್ಚು ಹೆಚ್ಚು ಜನರನ್ನು ತಲುಪುವ ಇರಾದೆಯನ್ನು ಸಂಸ್ಥೆ ಇಟ್ಟುಕೊಂಡಿದೆ.

    MORE
    GALLERIES