Telugu Cinema Shooting: ಮೇಲುಕೋಟೆ ಶೂಟಿಂಗ್ನಲ್ಲಿ ಅವಾಂತರ; ತೆಲುಗು ಚಿತ್ರತಂಡದ ವಿರುದ್ಧ ಸ್ಥಳೀಯರ ಆಕ್ರೋಶ
ನಟ ನಾಗಚೈತನ್ಯ (Actor Naga Chaitanya) ನಟನೆಯ ಸಿನಿಮಾದ ಚಿತ್ರೀಕರಣಕ್ಕಾಗಿ (Cinema Shooting) ಪ್ರಾಚ್ಯ ಸ್ಮಾರಕವನ್ನು ಬಾರ್ ಆಗಿ ಪರಿವರ್ತನೆ ಮಾಡಿದ್ದಾರೆ ಎಂದು ಮೇಲುಕೋಟೆಯ (Melukote) ಜನರು ಆರೋಪ ಮಾಡಿದ್ದಾರೆ.
ತೆಲುಗು ಚಿತ್ರತಂಡದ ವಿರುದ್ಧ ಮಂಡ್ಯದ ಪಾಂಡವಪುರ ತಾಲೂಕಿನ ಮೇಲುಕೋಟೆ ಗ್ರಾಮದ ಕೆಲವು ನಾಗರೀಕರು ಆಕ್ರೋಶ ಹೊರ ಹಾಕಿದ್ದಾರೆ.
2/ 7
ಮೇಲುಕೋಟೆಯ ಪ್ರಸಿದ್ದ ರಾಯಗೋಪುರ (Rayagopura, Melukote) ಸ್ಥಳದ ಬಳಿ ಚಿತ್ರೀಕರಣ ತಂಡದಿಂದ ಚಿತ್ರೀಕರಣಕ್ಕಾಗಿ ಬಾರ್ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
3/ 7
ಪ್ರಾಚ್ಯವಸ್ತು ಇಲಾಖೆಯ ಸ್ಮಾರಕದ ಬಳಿ ಬಾರ್ ಸೆಟ್ ನಿರ್ಮಿಸಿದ್ದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಾರ್ ಸೆಟ್ ನಿರ್ಮಿಸಿ ಶ್ರೀ ವೈಷ್ಣವ ಕ್ಷೇತ್ರ ಅಪಮಾನ ಮಾಡಲಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.
4/ 7
ತೆಲುಗಿನ ಖ್ಯಾತ ನಟ ನಾಗ ಚೈತ್ಯನ್ಯ ನಟಿಸುತ್ತಿರುವ 3 ನಾಟ್ 2 ಚಿತ್ರದ ಚಿತ್ರೀಕರಣ ಇದಾಗಿತ್ತು. ಚಿತ್ರೀಕರಣಕ್ಕೆ ಅನುಮತಿ ಪಡೆದು ನಿಯಮ ಉಲ್ಲಂಘಿಸಿದ್ದಾರೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡುತ್ತಿದ್ದಾರೆ.
5/ 7
ಚಿತ್ರ ತಂಡದಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಚಿತ್ರೀಕರಣ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಲ ಸ್ಥಳೀಯರು ಒತ್ತಾಯಿಸಿದ್ದಾರೆ.
6/ 7
ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ನಿಜವಾಗಿ ಅಲ್ಲಿ ಯಾವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು ಅನ್ನೋದರ ಬಗ್ಗೆ ಗೊಂದಲಗಳಿವೆ.
7/ 7
ಚಿತ್ರೀಕರಣದ ವೇಳೆಯಲ್ಲಿ ಕೆಲವು ಮದ್ಯದ ಬಾಟೆಲ್ ಇರಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.