ಒಂದು ಕಡೆ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್, 25 ರಿಂದ 30 ಜನ ಹಿಂದೂ ಮುಖಂಡರಿಗೆ ಟಿಕೆಟ್ ನೀಡುವಂತೆ ಆಗ್ರಹಿದ್ದಾರೆ. ಒಂದು ವೇಳೆ ಬಿಜೆಪಿ ಟಿಕೆಟ್ ನೀಡದಿದ್ರೆ ಪಕ್ಷೇತರರಾಗಿ ನಿಲ್ಲಿಸಲಾಗುವುದು ಎಂದು ಹೇಳಿದ್ದಾರೆ.
2/ 8
ಇತ್ತ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಕಂ ಬ್ಯಾಕ್ನಿಂದ ಬಿಜೆಪಿ ಸಂಕಷ್ಟದಲ್ಲಿ ಸಿಲುಕಿದಂತಾಗಿದೆ. 2013ರ ಚುನಾವಣೆ ವೇಳೆ ಇದೇ ಜನಾರ್ದನ ರೆಡ್ಡಿ ವಿರುದ್ಧವೇ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
3/ 8
ಹೀಗಾಗಿ ಮತ್ತೆ ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಟಿಕೆಟ್ ನೀಡಬೇಕಾ ಅನ್ನೋ ಗೊಂದಲದಲ್ಲಿ ಬಿಜೆಪಿ ಇದೆ.
4/ 8
ಈ ಎಲ್ಲಾ ಬೆಳವಣಿಗೆಗಳ ನಡುವೆ ಜನಾರ್ದನ ರೆಡ್ಡಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಇಲ್ಲಿಂದಲೇ ನನ್ನ ಸ್ಪರ್ಧೆ, ಟಿಕೆಟ್ ನೀಡಿ ಎಂಬ ಸಂದೇಶವನ್ನು ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.
5/ 8
ಕಳೆದ ಕೆಲವು ದಿನಗಳಿಂದ ಬಿಜೆಪಿ ಟಿಕೆಟ್ ನೀಡದಿದ್ರೆ ಹೊಸ ಪಕ್ಷ ಸ್ಥಾಪನೆಗೆ ರೆಡ್ಡಿ ಮುಂದಾಗ್ತಾರೆ ಎನ್ನಲಾಗಿತ್ತು. ಆದ್ರೀಗ ವೈಎಸ್ಆರ್ ಪಕ್ಷದಿಂದ ಟಿಕೆಟ್ ಪಡೆದು ಗಂಗಾವತಿಯಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋ ಸುದ್ದಿಯೊಂದು ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ.
6/ 8
ಈ ಬಗ್ಗೆ ವೈಎಸ್ಆರ್ ಪಕ್ಷದಿಂದ ಯಾವುದೇ ಮಾಹಿತಿ ಬಂದಿಲ್ಲ. ಒಂದು ವೇಳೆ ಜನಾರ್ದನ ರೆಡ್ಡಿ ವೈಎಸ್ಆರ್ನಿಂದ ಸ್ಪರ್ಧೆ ಮಾಡಿದ್ರೆ ಬಿಜೆಪಿ ಮತಗಳ ವಿಂಗಡನೆಯಾಗುವ ಸಾಧ್ಯತೆಗಳಿವೆ.
7/ 8
ಜನಾರ್ದನ ರೆಡ್ಡಿ ಅವರು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರಲ್ಲೊಬ್ಬರು. ಅವರು ಈ ಪಕ್ಷವನ್ನು ಬಿಟ್ಟು ಬೇರೆ ಪಕ್ಷ ಕಟ್ಟುವ ಪ್ರಶ್ನೆಯೇ ಇಲ್ಲ. ಪಕ್ಷದೊಳಗೇ ಇರುತ್ತಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.
8/ 8
ಜನಾರ್ದನ ರೆಡ್ಡಿ ಒಂದು ವೇಳೆ ಪಕ್ಷ ಕಟ್ಟಿದರೆ, ಸ್ನೇಹ ಬೇರೆ ಪಕ್ಷ ಬೇರೆ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಸ್ನೇಹ ಮತ್ತು ಪಕ್ಷ ಎರಡನ್ನೂ ಒಟ್ಟಾಗಿಯೇ ಇರುವಂತೆ ಮಾಡುತ್ತೇನೆ ಎಂದು ಶ್ರಿರಾಮುಲು ಹೇಳಿದ್ದಾರೆ.