(PHOTOS): ರಿಲ್ಯಾಕ್ಸ್ ಮೂಡಲ್ಲಿ ಕುದುರೆ ಸವಾರಿ ಮಾಡಿದ ವಿನಯ್ ಕುಲಕರ್ಣಿ
ಲೋಕಸಭಾ ಚುನಾವಣೆಗೆ ಸ್ಪರ್ಧಿಸಿಸಿದ್ದ ಅಭ್ಯರ್ಥಿಗಳು ಇಂದು ಕೊಂಚ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ವಿನಯ್ ಕುಲಕರ್ಣಿ ಇಂದು ಬೆಳಿಗ್ಗೆಯಿಂದಲೇ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿದ್ದಾರೆ. ನಗರದ ಹೊರ ವಲಯದಲ್ಲಿರುವ ತಮ್ಮ ಡೈರಿಗೆ ತೆರಳಿದ್ದ ಅವರು ಹಸು, ಎಮ್ಮೆ ಮತ್ತು ಕುದುರೆಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ತಮ್ಮ ಡೈರಿಯಲ್ಲಿ ಖುದ್ದಾಗಿ ತಾವೇ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಹಸುಗಳಿಗೆ ಮೇವು ಹಾಕಿ, ಕೊಟ್ಟಿಗೆ ಸ್ವಚ್ಛಗೊಳಿಸಿದರು. ಕುಂದಗೋಳ ವಿಧಾನಸಭೆಗೆ ಉಪಚುನಾವಣೆ ಕೂಡಾ ಘೋಷಣೆಯಾಗಿದ್ದು, ಮತ್ತೊಂದು ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳುವ ಅವಶ್ಯಕತೆ ವಿನಯ್ ಕುಲಕರ್ಣಿ ಅವರ ಮುಂದಿದೆ. ಕುಂದಗೊಳ ಉಪಚುನಾವಣೆಯನ್ನು ಸಹ ಯಶಸ್ವಿಯಾಗಿ ಎದುರಿಸುವ ವಿಶ್ವಾಸವನ್ನು ವಿನಯ್ ಕುಲಕರ್ಣಿ ಹೊಂದಿದ್ದಾರೆ. ಕೆಲವು ಚಿತ್ರಗಳು ನ್ಯೂಸ್ 18 ಕನ್ನಡದಲ್ಲಿ