ದೇವರಮನೆ ಸ್ಥಳವು ಹೆಸರಿನಂತೆ ಧಾರ್ಮಿಕವಾಗಿಯೂ ಪ್ರಸಿದ್ಧಿಯನ್ನು ಪಡೆದಿದೆ ಇಲ್ಲಿನ ಕಾಲಭೈರೆಶ್ವರ ದೇವಾಲಯ ಇದಕ್ಕೆ ನಿದರ್ಶನವಾಗಿದೆ. ಕಾಲಭೈರೇಶ್ವರ ದೇವಾಲಯದ ದರ್ಶನ ಪಡೆದ ಪ್ರವಾಸಿಗರು 20-25 ಕಿ. ಮೀ. ದೂರ ಟ್ರಕ್ಕಿಂಗ್ ಮಾಡಿ ಗುಡ್ಡವನ್ನೇರುತ್ತಾರೆ. ಮೈ ಕೊರೈಸುವ ಚಳಿ, ಜೋರಾಗಿ ಬೀಸುವ ಗಾಳಿ, ಹಾಲಿನ ಬಣ್ಣದಂತಿರುವ ಮಂಜು ಭೂ ಲೋಕದಲ್ಲಿ ಸ್ವರ್ಗದ ಅನುಭವವನ್ನು ನೀಡುತ್ತದೆ.