Mysore Dasara: ದಸರಾ ಆಚರಣೆಗೆ ಅಂತ ಕೊಟ್ಟ ಹಣದಲ್ಲಿ 25 ಲಕ್ಷ ರೂ ಉಳಿಸಿದ ರಾಜ್ಯ ಸರ್ಕಾರ
ಈ ಬಾರಿ ಮೈಸೂರು ದಸರಾ (Mysuru Dasara 2021) ಖರ್ಚು ವೆಚ್ಚದ ವಿವರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekhar) ನೀಡಿದರು. ಕೊರೊನಾ ಹಿನ್ನೆಲೆ ಕಳೆದ ಬಾರಿಯಂತೆ ಈ ವರ್ಷವೂ ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ಮೈಸೂರಿನ ಅರಮನೆ ಮಂಡಳಿಯಲ್ಲಿ ಸುದ್ದಿಗೋಷ್ಠಿ ವೇಳೆ ಸಚಿವ ಸೋಮಶೇಖರ್ ಲೆಕ್ಕ ಮಂಡನೆ ಮಾಡಿದರು.
ಸರ್ಕಾರದಿಂದ ದಸರಾ ಆಚರಣೆ ಆರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಆರು ಕೋಟಿ ರೂ.ಗಳಲ್ಲಿ ಈ ಬಾರಿ 5,42,07,679 ಕೋಟಿ ಖರ್ಚು ಆಗಿದೆ. ಮೈಸೂರು, ಚಾಮರಾಜನಗರ, ಹಾಸನಕ್ಕೆ 1.20 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
2/ 6
ಉಳಿದಂತೆ ವಿದ್ಯುತ್, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಸ್ತಬ್ಧ ಚಿತ್ರ, ಆನೆಗಳ ನಿರ್ವಹಣೆ ಸೇರಿದಂತೆ ದಸರೆಗೆ 4,22,07,679 ಕೋಟಿ ರೂ ಖರ್ಚು ಆಗಿದೆ ಎಂದು ಮಾಹಿತಿ ನೀಡಿದರು.
3/ 6
ಇದೇ ವೇಳೆ ಉಪಚುನಾವಣೆ ಕುರಿತು ಮಾತನಾಡಿದ ಸಚಿವರು, ಹಾನಗಲ್ ಮತ್ತು ಸಿಂದಗಿಯಲ್ಲಿ (Hangal And Sindagi Byelection) ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಲೀಡ್ ಬಗ್ಗೆ ಹೇಳಲ್ಲ ನಾಳೆ ಹೇಳುತ್ತೇನೆ. ಈ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚನೆ ಅಂತ ಹೇಳಲ್ಲ ಎಂದರು.
4/ 6
ಬಿಜೆಪಿ ಸೇರ್ಪಡೆಯಾದ 17 ಜನರ ಸ್ಥಿತಿ ವಿಚಾರಕ್ಕೆ ಪ್ರತಿಕ್ರಿಯಿಸಿದರು ಅವರು, ಎಲ್ಲಾ ಕ್ಷೇತ್ರಗಳ ಪರಿಸ್ಥಿತಿ ಹೇಗಿರುತ್ತೋ ನಮ್ಮ ಪರಿಸ್ಥಿತಿ ಹಾಗೇ ಇರುತ್ತೆ. ಆದ್ರೆ ಏನನ್ನು ಬೇಕಾದರು ತಿಳಿದುಕೊಳ್ಳಿ. 2023 ರ ಚುನಾವಣೆ ಎಲ್ಲಾ ಕ್ಷೇತ್ರಗಳಲ್ಲಿ ಹೇಗೆ ನಡೆಯುತ್ತೆ ಅದೇ ರೀತಿ ನಮ್ಮ ಕ್ಷೇತ್ರದಲ್ಲೂ ನಡೆಯುತ್ತೆ. ನಾವು 17 ಜನರು ವಿಶೇಷ ಅಲ್ಲ ಎಂದು ಹೇಳಿದರು.
5/ 6
ನಮ್ಮನ್ನು ಯಾರು ಸೋಲಿಸಲು ಆಗಲ್ಲ, ಗೆಲ್ಲಿಸಲೂ ಆಗುವುದಿಲ್ಲ. ಚುನಾವಣೆ ಸೋಲು ಗೆಲುವು ಸಾಮಾನ್ಯ. ಅವಾಗಿನ ಪರಿಸ್ಥಿತಿ ಹೇಗಿರುತ್ತೆ ಆ ರೀತಿ ಆಗುತ್ತೆ. ಈಗ ನಡೆದಿರುವ ಚುನಾವಣೆ ಮಾತ್ರ ವಿಶೇಷ ಅಂತ ಎಂದರು.
6/ 6
ಈ ಬಾರಿ ವಿಶೇಷವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ 75ರ ಹಾಗೂ ಭಾರತಕ್ಕೆ ಒಲಂಪಿಕ್ ನಲ್ಲಿ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಅವರ ದೀಪಾಲಂಕಾರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಗರದ ಪ್ರಮುಖ ರಸ್ತೆಗಳೆಲ್ಲ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು.