ತಮಿಳಿನಾಡಿನ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದೆ. ಇದೀಗ ತಮಿಳುನಾಡಿನ ಹಾಗೇ ರಾಜ್ಯದಲ್ಲಿಯೂ ಮೊಬೈಲ್ ಬ್ಯಾನ್ ಮಾಡಲು ಒತ್ತಾಯ ಕೇಳಿಬಂದಿದೆ.
2/ 8
ದೇವಾಲಯಗಳ ಅಂಗಳದಲ್ಲಿ ಮೊಬೈಲ್ ಬಳಕೆಗೆ ಅನುಮತಿ ಕೊಡಬೇಡಿ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟ ಆಗ್ರಹಿಸಿದೆ.
3/ 8
ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟದ ವತಿಯಿಂದ ಪತ್ರದ ಮೂಲಕ ಮನವಿ ಮಾಡಲಾಗಿದೆ.
4/ 8
ಬ್ಯಾನ್ ಮಾಡದೇ ಇದ್ರೆ ಮುಂದಿನ ದಿನಗಳಲ್ಲಿ ಕೋರ್ಟ್ ಮೆಟ್ಟಿಲೇರೋ ನಿರ್ಧಾರ ಮಾಡಿರುವುದಾಗಿ ಒಕ್ಕೂಟದ ಸದಸ್ಯರು ಹೇಳಿದ್ದಾರೆ.
5/ 8
ಅರ್ಚನೆ ಮಾಡುತ್ತಿರುವಾಗ ಮಂತ್ರಗಳ ಉಚ್ಚಾರಣೆ ಮಾಡುವಾಗ ಮೊಬೈಲ್ನಲ್ಲಿ ಕೆಲವರು ಹಾಡುಗಳನ್ನು ಹಾಕುತ್ತಾರೆ. ಇದ್ರಿಂದ ಧಾರ್ಮಿಕ ಕಾರ್ಯಗಳಿಗೆ ಅಡಚಣೆ ಆಗ್ತಿದೆ ಎಂದು ಅರ್ಚಕರು ದೂರಿದ್ದಾರೆ.
6/ 8
ಅಲ್ಲದೆ ಅಶ್ಲೀಲರಿಂಗ್ ಟೋನ್ ಗಳ ಕಿರಿಕಿರಿ, ಭಕ್ತಾದಿಗಳು ಧ್ಯಾನ ಮಾಡುವಾಗ, ಹೆಣ್ಣು ಮಕ್ಕಳ ಫೋಟೋ ತೆಗೆಯುವುದು ಹೀಗೆ ಕೆಲವರು ಕಿಡಿಗೇಡಿ ಕೆಲಸ ಮಾಡ್ತಿದ್ದಾರೆ.
7/ 8
ದೇಗುಲಕ್ಕೆ ಬರುವ ಭಕ್ತರು ಹೆಚ್ಚಾಗಿ ಮೊಬೈಲ್ ಬಳಸುವುದರಿಂದ ಇತರರಿಗೆ ತೊಂದರೆಯಾಗುತ್ತದೆ. ದೇವರ ಫೋಟೋ ತೆಗೆಯುವುದು, ಸೆಲ್ಫಿ ಹುಚ್ಚಾಟಗಳು ಹೆಚ್ಚಾಗಿದೆ.
8/ 8
ಹೀಗಾಗಿ ದೇಗುಲಗಳಲ್ಲಿ ಮೊಬೈಲ್ ಬಳಕೆಗೆ ಕಡಿವಾಣ ಹಾಕಲೇಬೇಕಿದೆ ಎಂದು ಅರ್ಚಕರ ಒಕ್ಕೂಟ ಆಗ್ರಹಿಸಿದೆ.