ಬಿಸಿಲಿನ ಧಗೆ, ಚುನಾವಣಾ ಪ್ರಚಾರದ ಎಫೆಕ್ಟ್
ಹೌದು, ಚುನಾವಣೆ ಹೊತ್ತಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ದಾಟಿದೆ. ಸುಡು ಬಿಸಿಲಲ್ಲಿ ಎಲೆಕ್ಷನ್ ಪ್ರಚಾರ ಕೂಡಾ ಜೋರಾಗಿದ್ದು, ಜನ ಚಿಲ್ಡ್ ಬಿಯರ್ ಮೊರೆ ಹೋಗುತ್ತಿದ್ದಾರೆ. ಪರಿಣಾಮ ರಾಜಧಾನಿಯಲ್ಲಿ ಬಿಯರ್ ಮಾರಾಟ ಹೆಚ್ಚಾಗಿದೆ. ಇದರಿಂದ ಬಾರ್ ಮಾಲೀಕರು ಫುಲ್ ಖುಷ್ ಆಗಿದ್ದಾರೆ. (ಸಾಂದರ್ಭಿಕ ಚಿತ್ರ) ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ
ಕಳೆದ ಕೆಲ ದಿನಗಳಿಂದ ಬೇಡಿಕೆ ಹೆಚ್ಚಾಗಿದೆ, 10 ಲಕ್ಷ ರೂಪಾಯಿ ಮೌಲ್ಯದ ಬಿಯರ್ ಕೇಳಿದರೆ 2 ಲಕ್ಷ ರೂಪಾಯಿ ಬಿಯರ್ ಮಾತ್ರ ಪೂರೈಕೆಯಾಗುತ್ತಿದೆ. ಬೇಸಿಗೆಯ ತಾಪ ಹೆಚ್ಚಾಗಿರುವ ಕಾರಣ ಬೇಡಿಕೆಯೂ ಹೆಚ್ಚಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಬಿಯರ್ ಸಿಗುತ್ತಿಲ್ಲ. ಅಲ್ಲದೆ, ಒಂದು ಬಾಟಲ್ ಮೇಲೆ 20 ರೂಪಾಯಿ ಜಾಸ್ತಿಯಾಗಿದೆ. ಎಲ್ಲಾ ಕಡೆಯೂ ಬೆಲೆ ಏರಿಕೆ ಆಗಿದೆ ಎಂದು ಬಾರ್ ಮಾಲೀಕ ರವಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ) ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ
ರಾಜ್ಯದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಬಿಯರ್ ಉತ್ಪಾದನೆ, ಮಾರಾಟ ಆರಂಭಿಸಿರುವುದರಿಂದ ಗ್ರಾಹಕರಿಗೂ ಹೆಚ್ಚಿನ ಆಯ್ಕೆಗಳು ಸಿಕ್ಕಂತಾಗಿವೆ. ಬಿಯರ್ ಮಾರಾಟ ಹೆಚ್ಚಲು ಇದೂ ಕೂಡಾ ಕಾರಣವಾಗಿದೆ. ಇನ್ನು ಅಕ್ಕಪಕ್ಕದ ರಾಜ್ಯಗಳಿಂದಲೂ ಜನ ಬಿಯರ್ ತರಿಸಿಕೊಳ್ಳುತ್ತಿದ್ದಾರೆ. ಇದ್ರಿಂದ ಸರ್ಕಾರದ ಖಜಾನೆಗೆ ದೊಡ್ಡ ಮಟ್ಟದ ಲಾಭವಾಗುತ್ತಿದೆ. (ಸಾಂದರ್ಭಿಕ ಚಿತ್ರ) ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (ವರದಿ: ಆಶಿಕ್ ಮುಲ್ಕಿ, ನ್ಯೂಸ್ 18, ಬೆಂಗಳೂರು)