PU Admission: ಪಿಯು ದಾಖಲಾತಿಗೆ ಬೇಡಿಕೆ ಹೆಚ್ಚಳ; ಬ್ಲಾಕ್ ನಲ್ಲಿ ಸೀಟ್ ಮಾರಾಟದ ಆರೋಪ?

ಈ ವರ್ಷ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಶೇ.70ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪಿಯು ದಾಖಲಾತಿಗಳು ಆರಂಭಗೊಂಡಿವೆ. ಅದರಲ್ಲಿಯೂ ವಾಣಿಜ್ಯ ವಿಭಾಗದ ಸಿಇಬಿಎ ಕೋರ್ಸ್ ಗಳಿಗೆ ಬೇಡಿಕೆ ಹೆಚ್ಚಾಗಿದೆ.

First published:

 • 18

  PU Admission: ಪಿಯು ದಾಖಲಾತಿಗೆ ಬೇಡಿಕೆ ಹೆಚ್ಚಳ; ಬ್ಲಾಕ್ ನಲ್ಲಿ ಸೀಟ್ ಮಾರಾಟದ ಆರೋಪ?

  ಫಲಿತಾಂಶಕ್ಕೂ ಮುನ್ನ ಕೆಲವರು ತಾವು ಇಷ್ಟಪಟ್ಟಿದ್ದ ಕಾಲೇಜುಗಳಲ್ಲಿ ಆಸನ ಕಾಯ್ದಿರಿಸಿಕೊಂಡಿದ್ದರು. ಇದೀಗ ಬೆಂಗಳೂರಿನ ಹೆಬ್ಬಾಳದ ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಫಲಿತಾಂಶಕ್ಕೂ ಮುನ್ನವೇ ಸೀಟ್ ಬ್ಲಾಕ್ ಮಾಡಲಾಗಿರುವ ಆರೋಪ ಕೇಳಿ ಬಂದಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 28

  PU Admission: ಪಿಯು ದಾಖಲಾತಿಗೆ ಬೇಡಿಕೆ ಹೆಚ್ಚಳ; ಬ್ಲಾಕ್ ನಲ್ಲಿ ಸೀಟ್ ಮಾರಾಟದ ಆರೋಪ?

  ಫಲಿತಾಂಶದ ಬಳಿಕ ಕಾಲೇಜಿಗೆ ಹೋದ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ದಾಖಲಾತಿಯ ಅರ್ಜಿಗಳು ಖಾಲಿಯಾಗಿವೆ ಎಂದು ಆಡಳಿತ ಮಂಡಳಿ ಹೇಳಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 38

  PU Admission: ಪಿಯು ದಾಖಲಾತಿಗೆ ಬೇಡಿಕೆ ಹೆಚ್ಚಳ; ಬ್ಲಾಕ್ ನಲ್ಲಿ ಸೀಟ್ ಮಾರಾಟದ ಆರೋಪ?

  CBSE ಹಾಗೂ ICSEಯ 10ನೇ ತರಗತಿ ಫಲಿತಾಂಶ ಬಂದಿಲ್ಲ. ಅದಕ್ಕೂ ಮುಂಚಿತವಾಗಿ ಕಾಲೇಜು ಆಡಳಿತ ಮಂಡಳಿ ಸೀಟುಗಳನ್ನು ಮಾರಾಟ ಮಾಡಿಕೊಂಡಿರುವ ಆರೋಪಗಳು ಕೇಳಿ ಬಂದಿವೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 48

  PU Admission: ಪಿಯು ದಾಖಲಾತಿಗೆ ಬೇಡಿಕೆ ಹೆಚ್ಚಳ; ಬ್ಲಾಕ್ ನಲ್ಲಿ ಸೀಟ್ ಮಾರಾಟದ ಆರೋಪ?

  ಮಕ್ಕಳನ್ನು ದಾಖಲು ಮಾಡಲು ಹೋದ್ರೆ ಅಪ್ಲಿಕೇಶನ್ ಇಲ್ಲ ಅಂತ ಹೇಳ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ನಾರಾಯಣಸ್ವಾಮಿ ಉದ್ಧಟತನದಿಂದ ಮಾತನಾಡುತ್ತಾರೆ ಎಂದು ಪೋಷಕರು ಹೇಳುತ್ತಾರೆ. ಈ ಸಂಬಂಧ ಪೋಷಕರು ಕಾಲೇಜು ವಿರುದ್ಧ ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 58

  PU Admission: ಪಿಯು ದಾಖಲಾತಿಗೆ ಬೇಡಿಕೆ ಹೆಚ್ಚಳ; ಬ್ಲಾಕ್ ನಲ್ಲಿ ಸೀಟ್ ಮಾರಾಟದ ಆರೋಪ?

  ಇನ್ನೂ ತಮ್ಮ ಕಾಲೇಜಿನ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ನಾರಾಯಣಸ್ವಾಮಿ ನಿರಾಕರಿಸಿದರು. ತಾಂತ್ರಿಕ ಕಾರಣಗಳಿಂದ ಅರ್ಜಿಗಳನ್ನು ನೀಡಲು ಆಗಿಲ್ಲ. ಸಮಸ್ಯೆ ಬಗೆಹರಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡಿದ್ದೇವೆ ಎಂದು ನಾರಾಯಣಸ್ವಾಮಿ ಹೇಳುತ್ತಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 68

  PU Admission: ಪಿಯು ದಾಖಲಾತಿಗೆ ಬೇಡಿಕೆ ಹೆಚ್ಚಳ; ಬ್ಲಾಕ್ ನಲ್ಲಿ ಸೀಟ್ ಮಾರಾಟದ ಆರೋಪ?

  ಮಕ್ಕಳಿಗೆ ಇಷ್ಟಪಟ್ಟ ಕಾಲೇಜಿಗೆ ಸೇರಲು ಆಗುತ್ತಿಲ್ಲ. ಅತಿ ಹೆಚ್ಚು ಅಂಕ ಪಡೆದರೂ ಮಕ್ಕಳ ಆಸೆ ಈಡೇರುತ್ತಿಲ್ಲ ಎಂದು ಪೋಷಕರು ಹೇಳುತ್ತಾರೆ. ಮೂರು ತಿಂಗಳ ಹಿಂದೆಯೇ ಸಿಬಿಎಸ್ಇ ಕೋರ್ಸ್ ವಿದ್ಯಾರ್ಥಿಗಳಿಗೆ ಬ್ಲಾಕ್ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 78

  PU Admission: ಪಿಯು ದಾಖಲಾತಿಗೆ ಬೇಡಿಕೆ ಹೆಚ್ಚಳ; ಬ್ಲಾಕ್ ನಲ್ಲಿ ಸೀಟ್ ಮಾರಾಟದ ಆರೋಪ?

  ಬೆಂಗಳೂರಿನ ಕೆಲ ಪ್ರತಿಷ್ಠಿತ ಕಾಲೇಜುಗಳ ಇದೇ ರೀತಿ ಬ್ಲಾಕ್ ಮಾಡಿಕೊಂಡಿರುವ ಆರೋಪ ಕೇಳಿ ಬಂದಿವೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 88

  PU Admission: ಪಿಯು ದಾಖಲಾತಿಗೆ ಬೇಡಿಕೆ ಹೆಚ್ಚಳ; ಬ್ಲಾಕ್ ನಲ್ಲಿ ಸೀಟ್ ಮಾರಾಟದ ಆರೋಪ?

  ಶಿಕ್ಷಣ ಇಲಾಖೆ ಇಂತಹ ಕಾಲೇಜುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES