

ನೂತನ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಈಶಾನ್ಯ ರಾಜ್ಯಗಳ ಇನ್ನರ್ಲೈನ್ ಪರ್ಮಿಟ್ (ಐಎಲ್ಪಿ) ವ್ಯಾಪ್ತಿಯ ಪ್ರದೇಶಗಳಿಗೆ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ, ಪೌರತ್ವ ತಿದ್ದುಪಡಿ ಮಸೂದೆಯನ್ನು ಬಲವಾಗಿ ವಿರೋಧಿಸುತ್ತಾ ಬಂದಿರುವ ಈಶಾನ್ಯ ರಾಜ್ಯಗಳಿಗೆ ಸಮಾಧಾನ ತಂದಿದೆ. ಇಂದು ಕೇಂದ್ರ ಸಂಪುಟದಲ್ಲಿ ಅನುಮೋದನೆ ಸಿಕ್ಕಿರುವ ಈ ನೂತನ ತಿದ್ದುಪಡಿ ಮಸೂದೆಯಲ್ಲಿ ಈಶಾನ್ಯ ರಾಜ್ಯಗಳ ಹಿತಾಸಕ್ತಿಯನ್ನು ಗಮನಿಸಿ ಬದಲಾವಣೆಗಳನ್ನು ತರಲಾಗಿದೆ


ಚಂದ್ರನ ದಕ್ಷಿಣ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ವೇಳೆ ಸಂಪರ್ಕ ಕಡಿದುಕೊಂಡ ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಪತನಗೊಂಡಿತ್ತು. ವಿಕ್ರಂ ಲ್ಯಾಂಡರ್ ಪತನಗೊಂಡ ಸ್ಥಳವನ್ನು ನಾಸಾ ಗುರುತಿಸಿದ ಒಂದು ದಿನದ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ವಿಕ್ರಂ ಲ್ಯಾಂಡರ್ ಅನ್ನು ನಮ್ಮ ಸ್ವಂತ ಆರ್ಬಿಟರ್ ಇದಕ್ಕೂ ಮುನ್ನವೇ ಪತ್ತೆಮಾಡಿತ್ತು. ಮತ್ತು ಅದನ್ನು ನಾವು ನಮ್ಮ ವೆಬ್ಸೈಟ್ನಲ್ಲೂ ಕೂಡ ನಾವು ಪ್ರಕಟಿಸಿದ್ದೆವು ಎಂದು ತಿಳಿಸಿದ್ದಾರೆ.


ಜಗತ್ತಿನ ಅತಿದೊಡ್ಡ ಟೆಕ್ ಸಂಸ್ಥೆಯಾದ ಗೂಗಲ್ ಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಸಂಸ್ಥೆಯ ದೈನಂದಿನ ಜವಾಬ್ದಾರಿಗಳಿಂದ ದೂರವಾಗುತ್ತಿದ್ದಾರೆ. ಶೇ.51ರಷ್ಟು ಪಾಲುದಾರಿಕೆಯನ್ನು ಉಳಿಸಿಕೊಂಡಿರುವ ಇವರು ಭಾರತ ಮೂಲದ ಗೂಗಲ್ನ ಸಿಇಒ ಸುಂದರ್ ಪಿಚ್ಚೈ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ


ಅತ್ಯಾಚಾರಿಗಳಿಗೆ ಮರಣದಂಡನೆ ಬದಲು ಸಿಂಗಾಪುರ ಮಾದರಿಯಲ್ಲಿ ಶಿಕ್ಷೆಯಾಗಲಿ ಎಂದು ನಟ ಮತ್ತು ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅಭಿಪ್ರಾಯಪಟ್ಟಿದ್ದಾರೆ. ಪ್ರಿಯಾಂಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಈ ವಿಚಾರಕ್ಕೆ ನನ್ನ ಸಹಮತ ಇಲ್ಲ ಎಂದು ಪವನ್ ಕಲ್ಯಾಣ್ ಹೇಳಿದ್ಧಾರೆ.


ಸುಲಿಗೆ ಮತ್ತು ಬ್ಲ್ಯಾಕ್ಮೇಲ್ ಆರೋಪದ ಮೇಲೆ ಎರಡು ತಿಂಗಳ ಹಿಂದೆ ಬಂಧಿತರಾಗಿದ್ದ ಉತ್ತರ ಪ್ರದೇಶದ ಕಾನೂನು ವಿದ್ಯಾರ್ಥಿನಿ ಜಾಮೀನು ಪಡೆದು ಬಿಡುಗೆಯಾಗಿದ್ಧಾರೆ. ಅಲಹಾಬಾದ್ ಉಚ್ಚ ನ್ಯಾಯಾಲಯವು ಈಕೆಗೆ ಬೇಲ್ ನೀಡಿ ಆದೇಶ ಹೊರಡಿಸಿದೆ. ವಿಶೇಷ ತನಿಖಾ ತಂಡವು ಸೆಪ್ಟೆಂಬರ್ ತಿಂಗಳಲ್ಲಿ ಈಕೆಯನ್ನು ಬಂಧಿಸಿತ್ತು.


ಅನರ್ಹ ಶಾಸಕರ ಬೆಂಬಲದಿಂದ ಸರ್ಕಾರ ರಚಿಸಿರುವ ಬಿಜೆಪಿ ಪಾಳೆಯದಲ್ಲಿ ಈಗ ಬಹುಮತ ಭೀತಿ ಶುರುವಾಗಿದೆ. ಉಪಚುನಾವಣೆ ಫಲಿತಾಂಶ ವ್ಯತಿರಿಕ್ತವಾದರೆ ಸರ್ಕಾರ ಬೀಳುವ ಭಯ ಕಮಲಪಾಳೆಯದ ನಾಯಕರಲ್ಲಿ ಮೂಡಿದ್ದು, ಇದಕ್ಕಾಗಿ ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ನಾಯಕರು ಕೈ ಹಾಕಿದ್ದಾರೆ


ಕರ್ನಾಟಕ ವಿಧಾನಸಭಾ ಉಪಚುನಾವಣೆ ಮತದಾನಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿವೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಉಪಚುನಾವಣೆ ಗೆಲ್ಲಲು ಅಂತಿಮ ಸುತ್ತಿನ ಕಸರತ್ತು ನಡೆಸುತ್ತಿವೆ. ಮೂರು ಪಕ್ಷಗಳ ನಾಯಕರ ರಾಜಕೀಯ ಕೆಸರೆರಚಾಟಗಳು ಮುಂದುವರೆದಿವೆ. ಮತದಾರರ ತೀರ್ಪು ನೀಡುವ ಮುನ್ನವೇ ನಾವೇ ಇಷ್ಟು ಸೀಟು ಗೆಲ್ಲುತ್ತೇವೆ ಎಂಬ ಅಭಿಪ್ರಾಯಕ್ಕೆ ಆಯಾ ಪಕ್ಷದ ರಾಜಕೀಯ ನಾಯಕರು ಬಂದಾಗಿದೆ. ಈ ಚರ್ಚೆಗಳ ನಡುವೆ ನಿಂತು ಹೋಗಿದ್ದ ದಲಿತ ಸಿಎಂ ಕೂಗಿಗೆ ಮತ್ತೆ ಚಾಲನೆ ಸಿಕ್ಕಂತಾಗಿದೆ. ಡಿಸೆಂಬರ್ 9ನೇ ತಾರೀಕಿನ ಫಲಿತಾಂಶದ ಬಳಿಕ ಸಿಹಿ ಹಂಚುತ್ತೇನೆ ಎಂಬ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಯಿಂದಲೇ ಈ ಚರ್ಚೆ ಶುರುವಾಗಿದೆ.


ನಾಳೆ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಮೂರು ಪಕ್ಷಗಳು ಭರ್ಜರಿ ತಯಾರಿ ನಡೆಸಿಕೊಂಡಿವೆ. ಈ ನಡುವೆ ಅನರ್ಹ ಶಾಸಕರು ಮತ್ತು ಅವರ ಸಹಕಾರದಿಂದ ಸರ್ಕಾರ ರಚಿಸಿದ ಬಿಜೆಪಿ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪಪಟ್ಟಿಯನ್ನು ಪ್ರಕಟಿಸಿದ್ದಾರೆ.


ಅಮೀರ್ ಖಾನ್ ಮಗಳು ಇರಾ ಖಾನ್ ಸದಾ ತಮ್ಮ ಹಾಟ್ ಮತ್ತು ಬೋಲ್ಡ್ ಫೋಟೋಶೂಟ್ಗಳು ಹಾಗೂ ಬಾಯ್ಫ್ರೆಂಡ್ನಿಂದಾಗಿ ಸುದ್ದಿಯಲ್ಲಿರುತ್ತಾರೆ. ಈಗಲೂ ಸಹ ಇರಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಿಂದಾಗಿ ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ಇರಾ ತಮ್ಮ ಬೋಲ್ಡ್ ಫೋಟೋಶೂಟ್ನ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈಗ ಅವರದ್ದೇ ಒಂದು ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಖುಷಿ ತಾಳಲಾರದೆ ಹುಚ್ಚು ಕುದುರೆಯಂತೆ ಕುಣಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.