Renukacharya: ಹೊನ್ನಾಳಿ ಡಾನ್ ಖ್ಯಾತಿಯ ಹೋರಿ ಸಾವು : ಕಂಬನಿ ಮಿಡಿದ ರೇಣುಕಾಚಾರ್ಯ
ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಖ್ಯಾತಿ ಗಳಿಸಿದಿದ್ದ ಹೊನ್ನಾಳಿ ಡಾನ್ ಎಂಬ ಹೆಸರಿನ ಹೋರಿ ಇಂದು ಸಾವನ್ನಪ್ಪಿದೆ. ಹೋರಿ ಅಂತಿಮ ದರ್ಶನಕ್ಕೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆಗಮಿಸಿದ್ದರು.
ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಖ್ಯಾತಿ ಗಳಿಸಿದಿದ್ದ ಹೊನ್ನಾಳಿ ಡಾನ್ ಎಂಬ ಹೆಸರಿನ ಹೋರಿ ಇಂದು ಸಾವನ್ನಪ್ಪಿದೆ. ಹೋರಿ ಅಂತಿಮ ದರ್ಶನಕ್ಕೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆಗಮಿಸಿದ್ದರು.
2/ 7
ದಾವಣಗೆರೆ, ಶಿವಮೊಗ್ಗ ಹಾವೇರಿ ಸೇರಿದಂತೆ ಹತ್ತಾರು ಜಿಲ್ಲೆಯಲ್ಲಿ ಹೆಸರಾಗಿರುವ ಈ ಹೋರಿ, ಬೇದರಿಸುವ ಸ್ಪರ್ಧೆಯಲ್ಲಿ ಬಾಗಿಯಾಗಿ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಜನಪ್ರಿಯತೆ ಗಳಿಸಿತ್ತು.
3/ 7
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹೊನ್ನಾಳಿ ಡಾನ್, ನಿನ್ನೆ ಸಾವನ್ನಪ್ಪಿದೆ. ಇನ್ನೂ ಡಾನ್ ಹೋರಿಯನ್ನು ತಮ್ಮ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.
4/ 7
ಹೊನ್ನಾಳಿ ಡಾನ್ ಹೋರಿ ಅಂತಿಮ ದರ್ಶನಕ್ಕೆ ಶಾಸಕ ಎಂಪಿ ರೇಣುಕಾಚಾರ್ಯ ಆಗಮಿಸಿದ್ದರು. ಜೊತೆಗೆ ಅಂತಿಮ ದರ್ಶನ ಪಡೆದ ಬಳಿಕ ಮಾಲೀಕರಿಗೆ ರೇಣುಕಾಚಾರ್ಯ ಧೈರ್ಯ ಹೇಳಿದರು.
5/ 7
ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಬಹಳ ಮಹತ್ವ ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುತ್ತದೆ.
6/ 7
ಇಂತಹ ಸಮಯದಲ್ಲಿ ಹೋರಿಗಳನ್ನು ಹಿಡಿದು ನಿಲ್ಲಿಸುವುದಕ್ಕೆ ಪೈಲ್ವಾನರು ತಮ್ಮ ಜೀವದ ಹಂಗು ತೊರೆದು ಕಸರತ್ತು ನಡೆಸುತ್ತಾರೆ.
7/ 7
ಅಲ್ಲದೇ ಅಖಾಡದಲ್ಲಿ ಹೋರಿ ಓಡುವುದನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ಜನ ಸೇರುತ್ತಾರೆ. ಪೈಲ್ವಾನನ ಕೈಗೆ ಸಿಗದೇ ಓಡುವ ಹೋರಿಯ ದೃಶ್ಯ ನೋಡುಗರ ಮೈನವಿರೇಳಿಸುತ್ತದೆ.