ಇನ್ನು ಇತ್ತೀಚೆಗೆ ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿಗೆ ನುಗ್ಗಿತೆಂದು, ಸಿಟ್ಟಿಗೆದ್ದ ಜಮೀನು ಮಾಲೀಕ ಸುರೇಶ್ ಎಂಬಾತ ಆನೆಗೆ ಗುಂಡು ಹಾರಿಸಿದ್ದ. ಈ ಗುಂಡು ಆನೆಯ ತೊಡೆ, ಕಾಲು ಸೇರಿದಂತೆ ದೇಹದ ಅರ್ಧ ಭಾಗಕ್ಕೆ ಹೊಕ್ಕಿತ್ತು. ಗುಂಡು ಹಾರಿಸಿ ಕೃತ್ಯ ಎಸಗಿದ್ದ ಆರೋಪದ ಮೇರೆಗೆ ಆರೋಪಿ ಸುರೇಶ್‌ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು.