ರಾಜ್ಯದಲ್ಲಿ ಡಿಸೆಂಬರ್ 15ರವರೆಗೂ ವರುಣಾರ್ಭಟ ಮುಂದುವರಿಯಲಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
2/ 8
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಪ್ರಕಟಿಸಲಾಗಿದೆ.
3/ 8
ನಾಳೆ ಅಂದ್ರೆ ಡಿಸೆಂಬರ್ 14ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ.
4/ 8
ಇಂದು ಕೂಡ ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಗರಿಷ್ಠ ಉಷ್ಣಾಂಶ 24 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಷಿಯಸ್ ಇರುವ ಸಾಧ್ಯತೆ ಇದೆ.
5/ 8
ಮುಂದಿನ 48 ಗಂಟೆ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣವಿರುತ್ತದೆ. ಇಂದು ಉತ್ತರ ಒಳನಾಡು,ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆಗಳಿವೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
6/ 8
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಶೀತ ವಾತಾವರಣ ಹೆಚ್ಚಾಗಿದ್ದು, ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಕ್ಕಳು, ವೃದ್ಧರು, ಗರ್ಭಿಣಿಯರು ಹೆಚ್ಚು ಕಾಳಜಿಯಿಂದ ಇರಲು ಸೂಚನೆ ನೀಡಲಾಗಿದೆ.
7/ 8
ಬೆಚ್ಚಗಿನ ನೀರು ಅಥವಾ ಸೂಪ್ ಕುಡಿಯುವುದು, ಜೀರ್ಣವಾಗುವ ಆಹಾರ ಅಥವಾ ತಾಜಾ ಆಹಾರವನ್ನು ಸೇವಿಸೋದು. ಮನೆಯ ಹೊರಗೂ ಒಳಗೂ ಸ್ವೆಟರ್ ಹಾಗೂ ಕಿವಿ ಮುಚ್ಚಿಕೊಂಡು ಓಡಾಡುವುದು.
8/ 8
ಸ್ನಾನಕ್ಕೆ ಬೆಚ್ಚಗಿನ ನೀರನ್ನೇ ಬಳಸುವುದು. ಅನಗತ್ಯವಾಗಿ ಹೊರಗಿನ ಓಡಾಟ ತಪ್ಪಿಸುವುದು. ನೆಗಡಿ, ಕೆಮ್ಮು ಹಾಗೂ ಜ್ವರ ಇರುವವರಿಂದ ಅಂತರ ಕಾಯ್ದುಕೊಳ್ಳುವುದು. ಕೈಕಾಲುಗಳನ್ನು ಅಗಾಗ್ಗೆ ಸೋಪು ಬಳಸಿ ತೊಳೆಯುವುದು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.