ಮಾವು ಬೆಳೆಗೆ ಪ್ರತಿ ಹೆಕ್ಟೇರ್ಗೆ ಮಿಮೆ ಮೊತ್ತ 80,000 ರೈತರು ಪ್ರತಿ ಹೆಕ್ಟೇರ್ಗೆ 5 ಕಂತುಗಳಂತೆ 4000 ರೂಪಾಯಿಗಳು, ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್ಗೆ ಮಿಮೆ ಮೊತ್ತ 1,27,000 ರೈತರು ಪ್ರತಿ ಹೆಕ್ಟೇರ್ಗೆ 5 ಕಂತುಗಳಂತೆ 6350 ರೂಪಾಯಿಗಳು, ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್ಗೆ ಮಿಮೆ ಮೊತ್ತ 1,28,000 ರೈತರು ಪ್ರತಿ ಹೆಕ್ಟೇರ್ಗೆ 5 ಕಂತುಗಳಂತೆ 6400 ರೂಪಾಯಿಗಳನ್ನು ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು, ಹತ್ತಿರದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಚಿತ್ರದುರ್ಗ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ. ಇನ್ನೂ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2022-23ನೇ ಸಾಲಿನ ಚಿತ್ರದುರ್ಗ ಜಿಲ್ಲೆಯಲ್ಲಿ ವಾರ್ಷಿಕ ತೋಟಗಾರಿಕಾ ಬೆಳೆಗಳಾದ ಈರುಳ್ಳಿ (ಮಳೆಯಾಶ್ರಿತ,ನೀರಾವಾರಿ) ಟೊಮ್ಯಾಟೋ, ಕೆಂಪು ಮೆಣಸಿನಕಾಯಿ ಮಳೆಯಾಶ್ರಿತ ಬೆಳೆಗಳಿಗೆ ವಿಮೆ ನೊಂದಣಿ ಮಾಡಿಕೊಳ್ಳಬಹುದಾಗಿದೆ.
ಚಳ್ಳಕೆರೆ ತಾಲ್ಲೂಕಿನ ಕಸಬಾ, ನಾಯಕನಹಟ್ಟಿ, ಪರಶುರಾಮಪುರ, ತಳಕು ಹೋಬಳಿಗಳಲ್ಲಿ ನೀರಾವರಿ ಈರುಳ್ಳಿ, ಟೊಮೊಟೊ ಬೆಳೆ ವಿಮೆ ನೊಂದಣಿ ಮಾಡಿಕೊಳ್ಳಬಹುದಾಗಿದೆ.ಹಿರಿಯೂರು ತಾಲ್ಲೂಕಿನ ಕಸಬಾ, ಧರ್ಮಪುರ ಹೋಬಳಿಯಲ್ಲಿ ನೀರಾವರಿ ಈರುಳ್ಳಿ, ಜೆ.ಜಿ.ಹಳ್ಳಿ ಐಮಂಗಲ ಹೋಬಳಿಯಲ್ಲಿ ಈರುಳ್ಳಿ (ನೀರಾವರಿ, ಮಳೆಯಾಶ್ರಿತ) ಬೆಳೆಗಳಿಗೆ ವಿಮೆ ನೊಂದಣಿ ಮಾಡಿಕೊಳ್ಳಬಹುದಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಈರುಳ್ಳಿ (ನೀರಾವರಿ), ರಾಮಗಿರಿ, ತಾಳ್ಯದಲ್ಲಿ ಈರುಳ್ಳಿ, ಟೊಮೊಟೋ (ನೀರಾವರಿ, ಮಳೆಯಾಶ್ರಿತ) ಬೆಳೆಗಳಿಗೆ ವಿಮೆ ನೊಂದಣಿ ಮಾಡಿಕೊಳ್ಳಬಹುದಾಗಿದೆ.
ಈರುಳ್ಳಿ (ಮಳೆಯಾಶ್ರಿಯ) ಬೆಳೆಗೆ ಪ್ರತಿ ಹೆಕ್ಟೇರ್ಗೆ ಮಿಮೆ ಮೊತ್ತ 70,000 ರೈತರು ಪ್ರತಿ ಹೆಕ್ಟೇರ್ಗೆ 5 ಕಂತುಗಳಂತೆ 3500 ರೂಪಾಯಿಗಳು. ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ) ಬೆಳೆಗೆ ಪ್ರತಿ ಹೆಕ್ಟೇರ್ಗೆ ಮಿಮೆ ಮೊತ್ತ 72,000 ರೈತರು ಪ್ರತಿ ಹೆಕ್ಟೇರ್ಗೆ 5 ಕಂತುಗಳಂತೆ 3600 ರೂಪಾಯಿಗಳನ್ನು ಪಾವತಿಸಬೇಕಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.