ರಾಜಾಜಿನಗರ ಮತ್ತು ಕಾರ್ಡ್ ರಸ್ತೆಯ ಪಶ್ಚಿಮದಲ್ಲಿರುವ ಫ್ಲೈಓವರ್ ಪಿಲ್ಲರ್ ನಲ್ಲಿ ಈ ಬಿರುಕು ಕಾಣಿಸಿದೆ. ಸ್ಥಳೀಯ ನಿವಾಸಿಗಳು ಹಾಗೂ ಕಾರ್ಯಕರ್ತರು ಬಿರುಕು ಗಮನಿಸಿ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
2/ 8
ಫ್ಲೈಓವರ್ ಬಿರುಕಿನ ಬಗ್ಗೆ ದೂರು ಕೊಟ್ರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
3/ 8
ಫ್ಲೈಓವರ್ಗಳನ್ನು ಮೂರು ಭಾಗಗಳ ಯೋಜನೆಯಲ್ಲಿ ಸೇರಿಸಲಾಗಿದೆ. ಅದರಲ್ಲಿ ಎರಡು ಹಂತಗಳು ಪೂರ್ಣಗೊಂಡಿವೆ ಮತ್ತು ಮೂರನೆಯದು ಮುಂದಿನ ವರ್ಷ ಮಾರ್ಚ್ಗೆ ಪೂರ್ಣಗೊಳ್ಳಲಿದೆ.
4/ 8
ಮಂಜುನಾಥ ನಗರ ಮತ್ತು ಶಿವನಗರ ಜಂಕ್ಷನ್ಗಳಲ್ಲಿರುವ ಪಿಲ್ಲರ್ ನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವು ತಿಂಗಳ ಹಿಂದೆ ಫ್ಲೈಓವರ್ ಗಳಲ್ಲಿ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿದ್ದು ಅದನ್ನು ದುರಸ್ತಿ ಮಾಡಲಾಗಿದೆ ಎಂದು ವರದಿಯಾಗಿದೆ.
5/ 8
ಆದರೂ ಸಮಸ್ಯೆ ಮತ್ತೆ ಕಾಣಿಸಿಕೊಂಡಿದೆ. RTIಕಾರ್ಯಕರ್ತರೊಬ್ಬರು ನೀಡಿದ ದೂರಿನ ಪ್ರಕಾರ, ಮೇಲ್ಸೇತುವೆಗಳನ್ನು ನಿರ್ಮಿಸುವ ಗುತ್ತಿಗೆದಾರರು ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದು, ಇದೀಗ ಪ್ರಯಾಣಿಕರಿಗೆ ಅಪಾಯವಾಗಿದೆ.
6/ 8
ಪಿಲ್ಲರ್ಗೆ ವಾಹನಗಳ ಭಾರ ತಡೆದುಕೊಳ್ಳುವ ಸಾಮರ್ಥ್ಯದ ಕಡಿಮೆ ಇದ್ದು, ಹೆಚ್ಚಿನ ಒತ್ತಡದಿಂದ ಬಿರುಕುಗಳುಂಟಾಗಿವೆ. ಬಿರುಕುಗಳಿಂದ ಬೀಳುವ ಜಲ್ಲಿಕಲ್ಲುಗಳು ಪಿಲ್ಲರ್ಗಳು ಕುಸಿಯುವ ಭೀತಿ ಎದುರಾಗಿದೆ.
7/ 8
ಭ್ರಷ್ಟಾಚಾರವನ್ನು ಬಯಲಿಗೆಳೆಯುವಂತೆ ಲೋಕಾಯುಕ್ತಕ್ಕೆ ಮನವಿ ಸಲ್ಲಿಸುವುದಾಗಿ ಬಿಬಿಎಂಪಿ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.
8/ 8
ಅಧಿಕಾರಿಗಳು ಪರಿಶೀಲನೆ ನಡೆಸಿ ಸಮಸ್ಯೆ ಇರುವ ಪ್ರದೇಶಗಳನ್ನು ಸರಿಪಡಿಸಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ತಿಳಿಸಿದ್ದಾರೆ. ಈ ಬಗ್ಗೆ ಪಾಲಿಕೆಗೆ ಸಾರ್ವಜನಿಕರಿಂದ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ.