Dharwad: ಆತ್ಮಹತ್ಯೆಗೆ ಶರಣಾದ ಲಾಡ್ಜ್ನಲ್ಲಿದ್ದ ಜೋಡಿ; ಮೂರು ದಿನದಿಂದ ವಾಸ್ತವ್ಯ
ಕಳೆದ ಮೂರು ದಿನಗಳಿಂದ ಲಾಡ್ಜ್ನಲ್ಲಿ ವಾಸವಾಗಿದ್ದ ಜೋಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನಡೆದಿದೆ.
1/ 7
ಮೂರು ದಿನಗಳಿಂದ ಈ ಜೋಡಿ ನವಲಗುಂದ ಪಟ್ಟಣದ ಅಶೋಕ ಲಾಡ್ಜ್ನಲ್ಲಿ ವಾಸವಾಗಿತ್ತು.
2/ 7
ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ 22 ವರ್ಷದ ಕುಮಾರ್ ತಳವಾರ ಹಾಗೂ ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದ 18 ವರ್ಷದ ದೀಪಾ ಎತ್ತಿನಗುಡ್ಡ ಆತ್ಮಹತ್ಯೆಗೆ ಶರಣಾದ ಜೋಡಿ.
3/ 7
ಕುಮಾರ್ ಮತ್ತು ದೀಪಾ ಕಳೆದ ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರು.
4/ 7
ಮೂರು ದಿನಗಳ ಹಿಂದೆ ಪಟ್ಟಣಕ್ಕೆ ಬಂದಿದ್ದ ದೀಪಾ ಮತ್ತು ಕುಮಾರ್ ಪರಿಚಯಸ್ಥರೊಬ್ಬರ ಮೂಲಕ ಲಾಡ್ಜ್ನಲ್ಲಿ ರೂಮ್ ಪಡೆದುಕೊಂಡಿದ್ದರು.
5/ 7
ವಿಷಯ ತಿಳಿದು ಘಟನಾ ಸ್ಥಳಕ್ಕೆ ನವಲಗುಂದ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಜೋಡಿಯ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
6/ 7
ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
7/ 7
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರೂಮ್ ಕೊಡಲು ಶಿಫಾರಸ್ಸು ಮಾಡಿದ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದಾರೆ.
First published: