UT Khader: ನೂತನ ಸ್ಪೀಕರ್​ ಆಗಿ ಆಯ್ಕೆಯಾದ ಯು ಟಿ ಖಾದರ್

Karnataka Assembly: ನೂತನ ಕಾಂಗ್ರೆಸ್ ಸರ್ಕಾರಕ್ಕೆ ಸ್ಪೀಕರ್ ಆಯ್ಕೆ ಗೊಂದಲ ಆಗಿತ್ತು. ಮಾಜಿ ಸಚಿವ ಯುಟಿ ಖಾದರ್​ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ.

  • News18
  • |
  •   | Karnataka, India
First published:

  • 17

    UT Khader: ನೂತನ ಸ್ಪೀಕರ್​ ಆಗಿ ಆಯ್ಕೆಯಾದ ಯು ಟಿ ಖಾದರ್

    ಕಳೆದ ರಾತ್ರಿ ಸ್ಪೀಕರ್ ಹುದ್ದೆ ಅಲಂಕರಿಸುವಂತೆ ರಣ್​ದೀಪ್ ಸುರ್ಜೇವಾಲಾ ಸೂಚಿಸಿದ್ದರಂತೆ. ಈ ಹಿನ್ನೆಲೆ ಯುಟಿ ಖಾದರ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 27

    UT Khader: ನೂತನ ಸ್ಪೀಕರ್​ ಆಗಿ ಆಯ್ಕೆಯಾದ ಯು ಟಿ ಖಾದರ್

    ನಿನ್ನೆ ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದ್ರೆ ಸ್ಪೀಕರ್ ಆಗಿ ಮುಂದುವರಿಯಲು ಆರ್ ವಿ ದೇಶಪಾಂಡೆ ಹಿಂದೇಟು ಹಾಕಿದ್ದರು.

    MORE
    GALLERIES

  • 37

    UT Khader: ನೂತನ ಸ್ಪೀಕರ್​ ಆಗಿ ಆಯ್ಕೆಯಾದ ಯು ಟಿ ಖಾದರ್

    ಇನ್ನು ಅನೇಕ ಕಾಂಗ್ರೆಸ್ ಹಿರಿಯ ಶಾಸಕರು ಇದು ನಮ್ಮ ಕೊನೆಯ ಚುನಾವಣೆ ಆಗಿದ್ದು, ನಾವು ಕ್ಷೇತ್ರದ ಜನತೆಯೊಂದಿಗೆ ಇರಬೇಕು. ಆದ್ದರಿಂದ ಸ್ಪೀಕರ್ ಸ್ಥಾನ ನಮಗೆ ಬೇಡ ಎಂದು ಹಿರಿಯ ಶಾಸಕರು ಹೇಳಿದ್ದರು ಎಂದು ತಿಳಿದು ಬಂದಿತ್ತು.

    MORE
    GALLERIES

  • 47

    UT Khader: ನೂತನ ಸ್ಪೀಕರ್​ ಆಗಿ ಆಯ್ಕೆಯಾದ ಯು ಟಿ ಖಾದರ್

    ಇದೀಗ ಹೈಕಮಾಂಡ್ ಸೂಚನೆ ಮೇರೆಗೆ ಸ್ಪೀಕರ್ ಆಗಲು ಯುಟಿ ಖಾದರ್ ಸಮ್ಮತಿಸಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ 11.30ಕ್ಕೆ ಸ್ಪೀಕರ್ ಸ್ಥಾನಕ್ಕೆ ಯುಟಿ ಖಾದರ್ ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 57

    UT Khader: ನೂತನ ಸ್ಪೀಕರ್​ ಆಗಿ ಆಯ್ಕೆಯಾದ ಯು ಟಿ ಖಾದರ್

    2018ರ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿಯಲ್ಲಿ ಗೆದ್ದಿರುವ ಏಕೈಕ ಕಾಂಗ್ರೆಸ್ ಪ್ರತಿನಿಧಿ ಯು.ಟಿ. ಖಾದರ್. ಅಂದಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ (2018-19) ಖಾದರ್ ಅವರು ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

    MORE
    GALLERIES

  • 67

    UT Khader: ನೂತನ ಸ್ಪೀಕರ್​ ಆಗಿ ಆಯ್ಕೆಯಾದ ಯು ಟಿ ಖಾದರ್

    ತಮ್ಮ ಸರಳ ವ್ಯಕ್ತಿತ್ವದಿಂದಾಗಿ ವಿರೋಧ ಪಕ್ಷದವರಿಂದಲೂ ಹೊಗಳಿಸಿಕೊಳ್ಳುವ ರಾಜಕಾರಣಿ ಖಾದರ್, ಮುಖ್ಯಮಂತ್ರಿ ಮತ್ತು ಸಚಿವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಮೂಲಕ ತಮ್ಮ ಕ್ಷೇತ್ರಕ್ಕೆ ಕೆಲಸ ಮಾಡಿಸಿಕೊಳ್ಳುವಲ್ಲಿ ನಿಪುಣರಾಗಿದ್ದಾರೆ.

    MORE
    GALLERIES

  • 77

    UT Khader: ನೂತನ ಸ್ಪೀಕರ್​ ಆಗಿ ಆಯ್ಕೆಯಾದ ಯು ಟಿ ಖಾದರ್

    ಯು. ಟಿ. ಖಾದರ್ ಜಾತಿ, ಧರ್ಮ ಮೀರಿ ಬೆಳೆದ ರಾಜಕಾರಣಿಯಾಗಿದ್ದು, ತಮ್ಮ ಸರಳತೆ ಮೂಲಕವೇ ಜನ ಸಾಮಾನ್ಯರಿಗೆ ಹತ್ತಿರವಾಗಿದ್ದಾರೆ.

    MORE
    GALLERIES