ಬೆಳಗಾವಿಯಿಂದಲೇ ಯಾಕೆ ಪ್ರಜಾಧ್ವನಿ ಬಸ್ ಯಾತ್ರೆ ಆರಂಭ?
ಸ್ವಾತಂತ್ರ್ಯ ಪೂರ್ವದಲ್ಲಿ 1924 ಡಿಸೆಂಬರ್ 26, 27 ರಂದು ಎರಡು ದಿನಗಳ ಕಾಲ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಕಾಂಗ್ರೆಸ್ ನ 39 ನೇ ಅಧಿವೇಶನ ಬೆಳಗಾವಿ ನಗರದಲ್ಲಿ ನಡೆದಿತ್ತು. ಮಹಾತ್ಮಾ ಗಾಂಧಿ ಅವರು ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದ ಅಧ್ಯಕ್ಷರಾಗಿದ್ದರು. ಹೀಗಾಗಿ ಕಾಂಗ್ರೆಸ್ ಬೆಳಗಾವಿಯ ವೀರಸೌಧ ಐತಿಹಾಸಿಕ ಸ್ಥಳವಾಗಿದೆ.