Laxmi Hebbalkar: ಸಿದ್ದರಾಮಯ್ಯ ಸರ್ಕಾರದ ಏಕೈಕ ಸಚಿವೆಗೆ ಡಬಲ್‌ ಧಮಾಕಾ; ಮಂತ್ರಿಗಿರಿ ಜೊತೆಗೆ ಅಜ್ಜಿ ಆಗೋದ್ರು ಹೆಬ್ಬಾಳ್ಕರ್‌

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಡಬಲ್‌ ಧಮಾಕಾ ಹೊಡೆದಿದ್ದಾರೆ. ಇದೇ ಮೊದಲ ಬಾರಿಗೆ ಮಂತ್ರಿಗಿರಿ ಸಿಗುವುದರ ಜೊತೆಗೆ ಹೆಬ್ಬಾಳ್ಕರ್‌ ನಿವಾಸದಲ್ಲಿ ಮತ್ತೊಂದು ಸಂತಸದ ಸುದ್ದಿ ಮನೆ ಮಾಡಿದೆ.

First published:

  • 18

    Laxmi Hebbalkar: ಸಿದ್ದರಾಮಯ್ಯ ಸರ್ಕಾರದ ಏಕೈಕ ಸಚಿವೆಗೆ ಡಬಲ್‌ ಧಮಾಕಾ; ಮಂತ್ರಿಗಿರಿ ಜೊತೆಗೆ ಅಜ್ಜಿ ಆಗೋದ್ರು ಹೆಬ್ಬಾಳ್ಕರ್‌

    ಹೌದು. ನೂತನ ಸಿದ್ದರಾಮಯ್ಯ ಸರ್ಕಾರದ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಸಂತಸವನ್ನು ಆನಂದಿಸುವುದರ ಜೊತೆಜೊತೆಗೆ ನೂತನ ಸಚಿವೆಯ ಕಿವಿಗೆ ಮತ್ತೊಂದು ಸಂತಸದ ಸುದ್ದಿ ಆಲಿಸಲ್ಪಟ್ಟಿದೆ.

    MORE
    GALLERIES

  • 28

    Laxmi Hebbalkar: ಸಿದ್ದರಾಮಯ್ಯ ಸರ್ಕಾರದ ಏಕೈಕ ಸಚಿವೆಗೆ ಡಬಲ್‌ ಧಮಾಕಾ; ಮಂತ್ರಿಗಿರಿ ಜೊತೆಗೆ ಅಜ್ಜಿ ಆಗೋದ್ರು ಹೆಬ್ಬಾಳ್ಕರ್‌

    ಅಂದ ಹಾಗೆ ಶಾಸಕಿ ಹಾಗೂ ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಜ್ಜಿಯಾಗಿದ್ದಾರೆ. ತನ್ನ ಮಗನ ಹೆಂಡತಿಗೆ ಹೆಣ್ಣು ಮಗು ಹುಟ್ಟಿದ್ದು, ಮನೆಯಲ್ಲಿ ಪುಟ್ಟ ಕಂದಮ್ಮ ಆಗಮಿಸಿರುವ ಹಿನ್ನೆಲೆ ಹೆಬ್ಬಾಳ್ಕರ್‌ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

    MORE
    GALLERIES

  • 38

    Laxmi Hebbalkar: ಸಿದ್ದರಾಮಯ್ಯ ಸರ್ಕಾರದ ಏಕೈಕ ಸಚಿವೆಗೆ ಡಬಲ್‌ ಧಮಾಕಾ; ಮಂತ್ರಿಗಿರಿ ಜೊತೆಗೆ ಅಜ್ಜಿ ಆಗೋದ್ರು ಹೆಬ್ಬಾಳ್ಕರ್‌

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್‌, ನನಗೆ ಈದಿನ ಡಬಲ್ ಧಮಾಕ ಹೊಡೆದಿದೆ. ಇಂದು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸ್ತೇನೆ. ಅದರ ಜೊತೆಗೆ ನನಗೆ ಮೊಮ್ಮಗಳು ಹುಟ್ಟಿದ್ದಾಳೆ, ನಮ್ಮ ಮನೆಗೆ ಲಕ್ಷ್ಮಿ ಬಂದಿದ್ದಾಳೆ ಎಂದು ಖುಷಿ ಖುಷಿಯಿಂದ ಹೇಳಿಕೊಂಡಿದ್ದಾರೆ.

    MORE
    GALLERIES

  • 48

    Laxmi Hebbalkar: ಸಿದ್ದರಾಮಯ್ಯ ಸರ್ಕಾರದ ಏಕೈಕ ಸಚಿವೆಗೆ ಡಬಲ್‌ ಧಮಾಕಾ; ಮಂತ್ರಿಗಿರಿ ಜೊತೆಗೆ ಅಜ್ಜಿ ಆಗೋದ್ರು ಹೆಬ್ಬಾಳ್ಕರ್‌

    ಇಂದು ಕಾಂಗ್ರೆಸ್ ನೂತನ ಸಚಿವರ ಪ್ರಮಾಣ ವಚನ ಹಿನ್ನೆಲೆ ಬೆಂಗಳೂರಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದಾಗ ತಾನು ಅಜ್ಜಿ ಆದ ವಿಚಾರವನ್ನು ಬಹಿರಂಗಪಡಿಸಿದರು.

    MORE
    GALLERIES

  • 58

    Laxmi Hebbalkar: ಸಿದ್ದರಾಮಯ್ಯ ಸರ್ಕಾರದ ಏಕೈಕ ಸಚಿವೆಗೆ ಡಬಲ್‌ ಧಮಾಕಾ; ಮಂತ್ರಿಗಿರಿ ಜೊತೆಗೆ ಅಜ್ಜಿ ಆಗೋದ್ರು ಹೆಬ್ಬಾಳ್ಕರ್‌

    ನೂತನವಾಗಿ ಸಚಿವೆ ಸ್ಥಾನ ಅಲಂಕರಿಸುತ್ತಿರುವ ಬಗ್ಗೆಯೂ ಮಾತನಾಡಿದ ಹೆಬ್ಬಾಳ್ಕರ್‌, ಮೊದಲನೇ ಬಾರಿಗೆ ಸಚಿವೆಯಾಗ್ತಿರೋದು ಬಹಳ ಖುಷಿಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

    MORE
    GALLERIES

  • 68

    Laxmi Hebbalkar: ಸಿದ್ದರಾಮಯ್ಯ ಸರ್ಕಾರದ ಏಕೈಕ ಸಚಿವೆಗೆ ಡಬಲ್‌ ಧಮಾಕಾ; ಮಂತ್ರಿಗಿರಿ ಜೊತೆಗೆ ಅಜ್ಜಿ ಆಗೋದ್ರು ಹೆಬ್ಬಾಳ್ಕರ್‌

    ಅಲ್ಲದೇ, ನಾನು ಸಿದ್ದರಾಮಯ್ಯ ಸರ್ಕಾರದ ಏಕೈಕ ಸಚಿವೆ. ನನ್ನ ಮೇಲೆ ಮಹತ್ವದ ಜವಾಬ್ದಾರಿ ಇದೆ, ಯಾವುದೇ ಖಾತೆ ಕೊಟ್ಟರೂ ನಾನು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದರು.

    MORE
    GALLERIES

  • 78

    Laxmi Hebbalkar: ಸಿದ್ದರಾಮಯ್ಯ ಸರ್ಕಾರದ ಏಕೈಕ ಸಚಿವೆಗೆ ಡಬಲ್‌ ಧಮಾಕಾ; ಮಂತ್ರಿಗಿರಿ ಜೊತೆಗೆ ಅಜ್ಜಿ ಆಗೋದ್ರು ಹೆಬ್ಬಾಳ್ಕರ್‌

    ಇನ್ನು, ನಾನು ರಾಜ್ಯದ ಮಹಿಳೆಯರ ಪ್ರತಿನಿಧಿಯಾಗಿ ಕೆಲಸ ಮಾಡುತ್ತೇನೆ. ನಾನು ಯಾರಿಗೂ ಠಕ್ಕರ್ ಕೊಡಲ್ಲ, ಸಚಿವೆಯಾಗಿ ಕೆಲಸ ಮಾಡ್ಬೇಕು ಎಂದು ಹೇಳಿದರು.

    MORE
    GALLERIES

  • 88

    Laxmi Hebbalkar: ಸಿದ್ದರಾಮಯ್ಯ ಸರ್ಕಾರದ ಏಕೈಕ ಸಚಿವೆಗೆ ಡಬಲ್‌ ಧಮಾಕಾ; ಮಂತ್ರಿಗಿರಿ ಜೊತೆಗೆ ಅಜ್ಜಿ ಆಗೋದ್ರು ಹೆಬ್ಬಾಳ್ಕರ್‌

    ನಮ್ಮ ಸರ್ಕಾರ ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದ ಹೆಬ್ಬಾಳ್ಕರ್‌, ಮುಖ್ಯವಾಗಿ ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡಬೇಕು. ಮಹಿಳೆಯರ ಸ್ವಾಭಿಮಾನಕ್ಕಾಗಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.

    MORE
    GALLERIES