Mekedatu Padayatra: ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ ಖರ್ಗೆ, ಸಿದ್ದರಾಮಯ್ಯ
ಕೊರೊನಾ ವೈರಸ್ (Corona Virus), ವೀಕೆಂಡ್ ಕರ್ಫ್ಯೂ (Weekend Curfew) ನಡುವೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ (Congress Mekedatu padayatra) ಚಾಲನೆ ನೀಡಿದೆ. ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಡೋಲು ಬಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಕನಕಪುರದ ಸಂಗಮ ಕ್ಷೇತ್ರದ ಕಾವೇರಿ ನದಿಯ ದಡದಲ್ಲಿಯೇ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಕಾರ್ಯಕ್ರಮ ಚಾಲನೆಗೂ ಮುನ್ನ ಡಿಕೆ ಶಿವಕುಮಾರ್ ಅವರು ತೆಪ್ಪದಲ್ಲಿ ನದಿಯ ಮಧ್ಯ ಭಾಗಕ್ಕೆ ತೆರಳಿ ಕಾವೇರಿ ತಾಯಿಗೆ ಪೂಜೆ ಸಲ್ಲಿಸಿದರು.
2/ 5
ಇತ್ತ ಕಾಂಗ್ರೆಸ್ ಮಹಿಳಾ ನಾಯಕಿಯರು ಶಿವನಿಗೆ ಪೂಜೆ ಸಲ್ಲಿಸಿದ್ರೆ, ವೇದಿಕೆ ಪಕ್ಕದಲ್ಲಿಯೇ ವಿಘ್ನ ನಿವಾರಕ ಗಣೇಶನಿಗೆ ವಿಶೇಷ ಪೂಜೆ ಮತ್ತು ಗಣ ಹೋಮ ಏರ್ಪಡಿಸಲಾಗಿತ್ತು. ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ನೇತೃತ್ವದ ತಂಡ ನಾಡಗೀತೆ, ರೈತಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಸಂಗೀತದ ಇಂಪು ನೀಡಿದರು.
3/ 5
ಕನಕಪುರ ಸಂಗಮದಿಂದ ಪ್ರಾರಂಭವಾಗುವ ಪಾದಯಾತ್ರೆ ಸಂಜೆ ವೇಳೆ ಡಿ.ಕೆ.ಶಿವಕುಮಾರ್ ಅವರ ಹುಟ್ಟೂರು ದೊಡ್ಡಾಲಳ್ಳಿಯನ್ನು ತಲುಪಲಿದೆ. ಅಲ್ಲಿಯೇ ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಲಿದ್ದಾರೆ, ಮರುದಿನ ಮತ್ತೆ ಪಾದಯಾತ್ರೆ ಮುಂದುವರಿಯಲಿದೆ.
4/ 5
ಮತ್ತೊಂದಡೆ ಕಾಂಗ್ರೆಸ್ ನಾಯಕರ ಪಾದಯಾತ್ರೆಯನ್ನು ದೊಡ್ಡಾಲಳ್ಳಿಯಲ್ಲಿಯೇ ಪೊಲೀಸರು ಸಜ್ಜಾಗಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಸೆಕ್ಷನ್ 144 ಹಾಕಲಾಗಿದ್ದು, ಸುಮಾರು 2 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
5/ 5
ಇತ್ತ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಕರೆಯ ಮೇರೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸುತ್ತಿದ್ದಾರೆ.