Belagavi Politics: ಇಂದು ಕಾಂಗ್ರೆಸ್​​ನಿಂದ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

Credit Politics: ಬೆಳಗಾವಿಯಲ್ಲಿ ಕಾಂಗ್ರೆಸ್​​ ಹಾಗೂ ಬಿಜೆಪಿ ನಡುವೆ ಪ್ರತಿಮೆ ಪಾಲಿಟಿಕ್ಸ್ ಮುಂದುವರಿದಿದೆ​. ಇಂದು ರಾಜಹಂಸಗಡದಲ್ಲಿರುವ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ ಆಗಲಿದೆ.

First published:

  • 19

    Belagavi Politics: ಇಂದು ಕಾಂಗ್ರೆಸ್​​ನಿಂದ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

    ಮಾರ್ಚ್​​ 2ರಂದು ಬಿಜೆಪಿ ಸರ್ಕಾರ ಪ್ರತಿಮೆ ಅನಾವರಣ ಮಾಡಿತ್ತು. ಆದ್ರೆ ಇಂದು ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ‌ನೇತೃತ್ವದಲ್ಲಿ ಮತ್ತೆ ಪ್ರತಿಮೆ ಅನಾವರಣ ಆಗ್ತಿದೆ. (Photo Credit: Facebook)

    MORE
    GALLERIES

  • 29

    Belagavi Politics: ಇಂದು ಕಾಂಗ್ರೆಸ್​​ನಿಂದ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

    ರಾಜಹಂಸಗಢದಲ್ಲಿ ಈಗಾಗಲೇ ವಿವಿಧ ಧಾರ್ಮಿಕ ಕೆಲಸಗಳು ಆರಂಭವಾಗಿವೆ. ಮೂರ್ತಿಗೆ ಬಣ್ಣ ಬಳಿದು ಹೊಳಪು ಬರುವಂತೆ ರೆಡಿ ಮಾಡಿದ್ದಾರೆ. 50 ಅಡಿ ಎತ್ತರದ ಶಿವಾಜಿ ಪ್ರತಿಮೆಗೆ ಅಲಂಕಾರ ಮಾಡಲಾಗಿದ್ದು, ತುಳಜಾಪುರದ ಅರ್ಚಕ ಸಂತೋಷ ಜೋಶಿ ‌ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕೆಲಸ ನಡೆಯುತ್ತಿದೆ.  (Photo Credit: Facebook)

    MORE
    GALLERIES

  • 39

    Belagavi Politics: ಇಂದು ಕಾಂಗ್ರೆಸ್​​ನಿಂದ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

    ಇಂದು  ಬೆಳಗ್ಗೆ 9 ಗಂಟೆಯಿಂದ 10 ಗಂಟೆಯವರೆಗೆ ಪಲ್ಲಕ್ಕಿ ಉತ್ಸವ, ಸಾಂಪ್ರದಾಯಿಕ ಹಾಲಗಿ ಕಾರ್ಯಕ್ರಮಗಳು ನಡೆಯಲಿವೆ.  (Photo Credit: Facebook)

    MORE
    GALLERIES

  • 49

    Belagavi Politics: ಇಂದು ಕಾಂಗ್ರೆಸ್​​ನಿಂದ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

    ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಯುವರಾಜ ಸಂಭಾಜಿರಾಜೇ ಛತ್ರಪತಿ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಸತೇಜ್ ಪಾಟೀಲ, ಬಾಲಿವುಡ್​ ನಟ ರಿತೇಶ್​ ದೇಶಮುಖ್ ಮರಾಠಿ ನಟ ಹಾಗೂ ಲೋಕಸಭಾ ಸದಸ್ಯ ಡಾ. ಅಮೋಲ್ ಕೊಲ್ಲೆ, ಲಾತೂರು ಗ್ರಾಮೀಣ ಶಾಸಕ ಧೀರಜ್ ದೇಶಮುಖ್ ಸೇರಿದಂತೆ ಹಲವಾರು ಗಣ್ಯರಿಗೆ ಆಹ್ವಾನ ನೀಡಲಾಗಿದೆ.  (Photo Credit: Facebook)

    MORE
    GALLERIES

  • 59

    Belagavi Politics: ಇಂದು ಕಾಂಗ್ರೆಸ್​​ನಿಂದ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

    ಸಂಜೆ 5.30ರಿಂದ 6.30ರ ವರೆಗೆ ಪೋವಾಡಾ, 6.30ರಿಂದ 7.30ರವರೆಗೆ ಡೋಲ್ ತಾಶಾ, 7.30ರಿಂದ ಲೇಸರ್ ಶೋ ಮತ್ತು ಕ್ರ್ಯಾಕರ್ ಶೋ ನಡೆಯಲಿದೆ.  (Photo Credit: Facebook)

    MORE
    GALLERIES

  • 69

    Belagavi Politics: ಇಂದು ಕಾಂಗ್ರೆಸ್​​ನಿಂದ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

    ಮಾರ್ಚ್ 2ರಂದು ನಡೆದ ಕಾರ್ಯಕ್ರಮಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ನೀಡಲಾಗಿತ್ತು. ಆದರೆ ಶಾಸಕಿ ಹೆಬ್ಬಾಳ್ಕರ್ ಗೈರಾಗಿದ್ದರು.  (Photo Credit: Facebook)

    MORE
    GALLERIES

  • 79

    Belagavi Politics: ಇಂದು ಕಾಂಗ್ರೆಸ್​​ನಿಂದ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

    ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಜನರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.  (Photo Credit: Facebook)

    MORE
    GALLERIES

  • 89

    Belagavi Politics: ಇಂದು ಕಾಂಗ್ರೆಸ್​​ನಿಂದ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

    ಬೆಳಗಾವಿ ಗ್ರಾಮೀಣ ಕ್ಷೇತ್ರದ ಐತಿಹಾಸಿಕ ಕೇಂದ್ರಬಿಂದು ರಾಜಹಂಸಗಡ್ ಕೋಟೆಯ ಆವರಣದಲ್ಲಿ ಮಾರ್ಚ್ 5 ರಂದು ಬೆಳಗ್ಗೆ 10 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿಯ ಲೋಕಾರ್ಪಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೇಸ್​ಬುಕ್​ನಲ್ಲಿ ಹೆಬ್ಬಾಳ್ಕರ್ ಬರೆದುಕೊಂಡಿದ್ದಾರೆ.  (Photo Credit: Facebook)

    MORE
    GALLERIES

  • 99

    Belagavi Politics: ಇಂದು ಕಾಂಗ್ರೆಸ್​​ನಿಂದ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ

    ತಾವೆಲ್ಲರೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶೋಭೆಯನ್ನು ತಂದು ಕೊಟ್ಟು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿರಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿಕೊಂಡಿದ್ದಾರೆ.  (Photo Credit: Facebook)

    MORE
    GALLERIES