Congress ಅಹೋರಾತ್ರಿ ಧರಣಿ; ನಾಯಕರಿಗೆ ಭರ್ಜರಿ ಭೋಜನ, ಬೆಡ್ ವ್ಯವಸ್ಥೆ
ರಾಷ್ಟ್ರ ಧ್ವಜದ (National Flag) ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa ) ವಿರುದ್ಧ ಕಾಂಗ್ರೆಸ್ (Congress) ನಾಯಕರು ಪಟ್ಟು ಹಿಡುದಿದ್ದು, ಸದನದಲ್ಲಿ ಅಹೋರಾತ್ರಿ ಧರಣಿಗೆ (Day and night Protest) ಮುಂದಾಗಿದ್ದಾರೆ. ಧರಣಿ ಕೈ ಬಿಡುವಂತೆ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಮಾತುಕತೆ ವಿಫಲವಾಗಿದೆ.
ಕೆಎಸ್ ಈಶ್ವರಪ್ಪ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ನಾಯಕರು ವಿಧಾನ ಸಭೆ ಮತ್ತು ಪರಿಷತ್ನಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.
2/ 8
ಇಂದು ವಿಧಾನಸಭೆ ಮತ್ತು ಪರಿಷತ್ನಲ್ಲಿ ರಾತ್ರಿ ಕಾಂಗ್ರೆಸ್ ನಾಯಕರು ಧರಣಿ ನಡೆಸಲು ಮುಂದಾಗಿರುವ ಹಿನ್ನಲೆ ಅವರಿಗೆ ಊಟ ಸೇರಿದಂತೆ ಬೆಡ್ ವ್ಯವಸ್ಥೆ ಕಲ್ಪಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೂಚನೆ ನೀಡಿದ್ದಾರೆ.
3/ 8
ವಿಧಾನ ಪರಿಷತ್ ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಶಾಸಕರು ಸಭಾಪತಿ ಬಸರವಾಜ ಹೊರಟ್ಟಿ ಭೇಟಿಯಾಗಿ ಮಾತುಕತೆ ನಡೆಸಿದರು
4/ 8
ವಿಧಾನಸಭೆ ಸಚಿವಾಲಯದಿಂದ ಬೆಡ್ ವ್ಯವಸ್ಥೆಗೆ ಸ್ಪೀಕರ್ ಸೂಚಿಸಿದ ಹಿನ್ನಲೆ ಒಟ್ಟು ಎಂಬತ್ತು ಹೊಸ ಬೆಡ್, ದಿಂಬು, ಹೊದಿಕೆ ವ್ಯವಸ್ಥೆಮಾಡಲಾಗಿದೆ.
5/ 8
ಧರಣಿ ನಿರತ ಕಾಂಗ್ರೆಸ್ ನಾಯಕರಿಗೆ ಸ್ಪೀಕರ್ ಸೂಚನೆ ಮೇರೆಗೆ ವಿಧಾನಸಭೆ ಸಚಿವಾಲಯದಿಂದ ಊಟದ ವ್ಯವಸ್ಥೆ ನಡೆಸಲಾಗಿದ್ದು, ಎಲ್ಲರಿಗೂ ಶುದ್ಧ ಸಸ್ಯಹಾರ ಭರ್ಜರಿ ಭೋಜನ ನಡೆಸಲಾಗಿದೆ.
6/ 8
ಚಪಾತಿ, ಮುದ್ದೆ, ಫ್ರೂಟ್ ಸಲಾಡ್, ಅನ್ನ ರಸಂ, ಸಂಬಾರ್, ತರಕಾರಿ ಸಲಾಡ್, ಪಲ್ಯಾ, ರೈಸ್ ಬಾತ್, ಮೊಸರು, ಡ್ರೈ ಜಾಮ್ ಸೇರಿದಂತೆ ಒಟ್ಟು 15 ಬಗೆಯ ಪದಾರ್ಥಗಳ ಸಿದ್ದತೆ ಮಾಡಿದ್ದು, ಒಟ್ಟು 120 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ
7/ 8
ಕೆ.ಎಸ್.ಈಶ್ವರಪ್ಪನವರ ವಿರುದ್ಧ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಿ ಅವರನ್ನು ಗುರುವಾರ 11 ಗಂಟೆಯೊಳಗೆ ವಜಾಮಾಡದೆ ಇದ್ದರೆ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ
8/ 8
ಯಡಿಯೂರಪ್ಪ ಕೂಡ ವಿಪಕ್ಷ ನಾಯಕರಾಗಿದ್ದಾಗ ಬಹಳ ಆಗ್ರೆಸೀವ್ ಆಗಿದ್ದವರು. ಅವರು ವಿಪಕ್ಷ ನಾಯಕರಾಗಿದ್ದರು. ಅವರು ಈ ರೀತಿ ಬಂದು ಪ್ರತಿಭಟನೆ ವಾಪಸ್ ಪಡೆಯಿರಿ ಅಂತ ಹೇಳಬಾರದು. ನಮ್ಮ ಬೇಡಿಕೆ ಏನು ಅಂತ ಸದನದಲ್ಲೇ ಪ್ರಸ್ತಾಪ ಮಾಡಿದ್ದೇವೆ ಎಂದು ತಿಳಿಸಿದರು