ಕಳೆದ ವಾರ ನಟಿ ಶೃತಿ ಹಿರೇಕೆರೂರಿನಲ್ಲಿ ಸಚಿವ ಬಿ.ಸಿ.ಪಾಟೀಲ್ ಪರ ಪ್ರಚಾರ ನಡೆಸಿದ್ದರು. ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಶೃತಿ ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
2/ 7
ಪಕ್ಷ ಪಕ್ಷಗಳ ನಡುವೆ ವೈರತ್ವ, ದ್ವೇಷ, ಹಾಗೂ ಭಯ ಭೀತಿಯನ್ನುಂಟು ಮಾಡಿದ ಆರೋಪದ ಹಿನ್ನೆಲೆ ಕಲಂ 505 ರಡಿ ಹಿರೆಕೇರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3/ 7
ಹಿರೇಕೆರೂರು ನೋಡಲ್ ಅಧಿಕಾರಿ ಪಂಪಾಪತಿ ಎಂಬವರು ನಟಿ ಶೃತಿ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
4/ 7
ಶೃತಿ ಹೇಳಿದ್ದೇನು?
ಮೇಜರ್ ಆಗಿ ರಾಜ್ಯದಲ್ಲಿ ಮೂರು ಪಕ್ಷಗಳಿವೆ. ಯಾವುದೇ ಬೇರೆ ಪಕ್ಷದ ಬಗ್ಗೆ ನಾನು ಜಾಸ್ತಿ ಮಾತನಾಡಲ್ಲ. ಆದರೆ ಒಂದೆ ಮಾತಿನಲ್ಲಿ ಹೇಳಿ ಮುಗಿಸಿ ಬಿಡುತ್ತೇನೆ ಎಂದಿದ್ದರು.
5/ 7
ನಿಮ್ಮ ವಂಶ ಬಿಟ್ಟು ಬೇರೆಯವರ ವಂಶ ಅಭಿವೃದ್ದಿ ಆಗಬೇಕಾದ್ರೆ ಜೆಡಿಎಸ್ಗೆ ಮತ ಹಾಕಿ. ನಿಮ್ಮ ವಂಶ ಬಿಟ್ಟು ಹೊರದೇಶದ ವಂಶ ಅಭಿವೃದ್ಧಿ ಆಗಬೇಕಾದ್ರೆ ಕಾಂಗ್ರೆಸ್ಗೆ ಮತ ಹಾಕಿ. ನಿಮ್ಮ ವಂಶದ ಜೊತೆಗೆ ದೇಶದ ಅಭಿವೃದ್ಧಿ ಆಗಬೇಕಾದ್ರೆ ಬಿಜೆಪಿಗೆ ಮತ ಹಾಕಿ ಎಂದು ಹೇಳಿದ್ದರು.
6/ 7
ಸಮಾವೇಶದಲ್ಲಿ ಕೈ- ದಳ ಪಕ್ಷದ ಕುಟುಂಬ ರಾಜಕಾರಣ ಕುರಿತು ಅಪಹಾಸ್ಯ ಮಾಡಿ ವ್ಯಂಗ್ಯವಾಡಿದ್ದರು. ಶೃತಿ ಅವರ ಮಾತಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
7/ 7
ಬಿ.ಸಿ.ಪಾಟೀಲ್ ಪರವಾಗಿ ನಟಿ ಪ್ರೇಮಾ ಸಹ ಪ್ರಚಾರ ಮಾಡಿದ್ದರು. ಚಿತ್ರರಂಗದಲ್ಲಿದ್ದ ಕಾರಣ ಬಿ.ಸಿ.ಪಾಟೀಲ್ ಸ್ಟಾರ್ ಗಳನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.
First published:
17
Actress Shruti ವಿರುದ್ಧ ದಾಖಲಾಯ್ತು ದೂರು; ಭಾಷಣದಲ್ಲಿ ಹೇಳಿದ್ದೇನು?