Karnataka DCM: ತಪ್ಪಿದ ಸಿಎಂ ಸ್ಥಾನ; ಅಭಿಮಾನಿಗಳಿಂದ ಪ್ರತಿಭಟನೆ

DK Shivakumar: ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಮಾಡೋದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದು ಬಾಕಿ ಉಳಿದಿದೆ.

First published:

  • 17

    Karnataka DCM: ತಪ್ಪಿದ ಸಿಎಂ ಸ್ಥಾನ; ಅಭಿಮಾನಿಗಳಿಂದ ಪ್ರತಿಭಟನೆ

    ಇತ್ತ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದ ಡಿಕೆ ಶಿವಕುಮಾರ್ ಅವರಿಗೆ ಡಿಸಿಎಂ ಸ್ಥಾನ ಸಿಕ್ಕಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ಡಿಕೆ ಶಿವಕುಮಾರ್ ಅವರ ಮನವೊಲಿಸ್ತಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 27

    Karnataka DCM: ತಪ್ಪಿದ ಸಿಎಂ ಸ್ಥಾನ; ಅಭಿಮಾನಿಗಳಿಂದ ಪ್ರತಿಭಟನೆ

    ಡಿಸಿಎಂ ಸ್ಥಾನದ ಜೊತೆಯಲ್ಲಿ ಕೆಪಿಸಿಸಿ ಅಧ್ಯಕರಾಗಿ ಡಿಕೆ ಶಿವಕುಮಾರ್ ಮುಂದುವರಿಯಲಿದ್ದಾರೆ. ಡಿಕೆ ಶಿವಕುಮಾರ್​ ಅವರಿಗೆ ಅಧಿಕಾರ ಹಂಚಿಕೆ ಬಗ್ಗೆ ರಾಹುಲ್ ಗಾಂಧಿ ವಿವರವಾಗಿ ಹೇಳ್ತಿದ್ದಾರೆ ಎನ್ನಲಾಗಿದೆ.

    MORE
    GALLERIES

  • 37

    Karnataka DCM: ತಪ್ಪಿದ ಸಿಎಂ ಸ್ಥಾನ; ಅಭಿಮಾನಿಗಳಿಂದ ಪ್ರತಿಭಟನೆ

    ನಾಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನಕ್ಕೆ ಸಿದ್ಧತೆ ನಡೆಯಲಿದೆ. ನಾಳೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಾತ್ರ ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 47

    Karnataka DCM: ತಪ್ಪಿದ ಸಿಎಂ ಸ್ಥಾನ; ಅಭಿಮಾನಿಗಳಿಂದ ಪ್ರತಿಭಟನೆ

    ಗುರುವಾರ ಮಧ್ಯಾಹ್ನದ ಬಳಿಕ ಅಮವಾಸ್ಯೆ ಆರಂಭಗೊಳ್ಳಲಿದೆ. ಈ ಹಿನ್ನೆಲೆ ಮಧ್ಯಾಹ್ನ 12 ಗಂಟೆಯೊಳಗೆ ಪ್ರಮಾಣ ವಚನ ಸ್ವೀಕರಿಸಲು ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ.

    MORE
    GALLERIES

  • 57

    Karnataka DCM: ತಪ್ಪಿದ ಸಿಎಂ ಸ್ಥಾನ; ಅಭಿಮಾನಿಗಳಿಂದ ಪ್ರತಿಭಟನೆ

    ಸದ್ಯ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ದೆಹಲಿಯಲ್ಲಿದ್ರೂ ಪರಸ್ಪರ ಮುಖಾಮುಖಿಯಾಗಿಲ್ಲ. ಮಲ್ಲಿಕಾರ್ಜುನ ಖರ್ಗೆ ನಿವಾಸದಿಂದ ಸಿದ್ದರಾಮಯ್ಯ ಹೊರ ಬಂದ ನಂತರವೇ ಪಕ್ಷದ ಅಧ್ಯಕ್ಷರ ಭೇಟಿಗೆ ಡಿಕೆಶಿ ತೆರಳಿದ್ದರು.

    MORE
    GALLERIES

  • 67

    Karnataka DCM: ತಪ್ಪಿದ ಸಿಎಂ ಸ್ಥಾನ; ಅಭಿಮಾನಿಗಳಿಂದ ಪ್ರತಿಭಟನೆ

    ಇತ್ತ ಸೋನಿಯಾ ಗಾಂಧಿ ಅವರ ನಿವಾಸಕ್ಕೂ ಮೊದಲು ಸಿದ್ದರಾಮಯ್ಯ ಆಗಮಿಸಿದ್ದರು. ನಂತರ ಡಿಕೆ ಶಿವಕುಮಾರ್ ತೆರಳಿದ್ದರು.

    MORE
    GALLERIES

  • 77

    Karnataka DCM: ತಪ್ಪಿದ ಸಿಎಂ ಸ್ಥಾನ; ಅಭಿಮಾನಿಗಳಿಂದ ಪ್ರತಿಭಟನೆ

    ಮಾಧ್ಯಮಗಳಲ್ಲಿ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ವರದಿ ಆಗ್ತಿದ್ದಂತೆ  ಡಿಕೆ ಶಿವಕುಮಾರ್ ಬೆಂಬಲಿಗರು ಸೋನಿಯಾ ಗಾಂಧಿ ಅವರ ನಿವಾಸದ ಮುಂಭಾಗವೇ ಆಕ್ರೋಶ ಹೊರ ಹಾಕುತ್ತಿದ್ದಾರೆ.

    MORE
    GALLERIES