Photos: ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ಮನೆಗೆ ಭೇಟಿ ನೀಡಿದ ಸಿಎಂ ಬಿಎಸ್​ವೈಗೆ ರಾಜಾತಿಥ್ಯ

ಉಪಚುನಾವಣೆಯಲ್ಲಿ ಸೋಲುಂಡ ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್​ ಮನೆಗೆ ಇಂದು ಸಿಎಂ ಯಡಿಯೂರಪ್ಪ ಭೇಟಿ ನೀಡಿದರು. ಸೋಲಿನಿಂದ ಕಂಗೆಟ್ಟ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನದ ಭರವಸೆಯನ್ನು ಅವರು ನೀಡಿದ್ದಾರೆ. ಅಲ್ಲದೇ ಹಿಂದೆ ಸಚಿವರಾಗಿ ಸೇವೆ ಮಾಡಿದ ನಿಮಗೆ ಮುಂದೆಯೂ ಅದೇ ಸ್ಥಾನಮಾನ ನೀಡುವ ಭರವಸೆಯನ್ನು ನೀಡಿದ್ದಾರೆ. ಈ ವೇಳೆ ಸಿಎಂ ಅವರಿಗೆ ಬೆಳ್ಳಿ ತಟ್ಟೆಯಲ್ಲಿ ಭೋಜನ ವ್ಯವಸ್ಥೆ ನೀಡುವ ಮೂಲಕ ರಾಜಾತಿಥ್ಯ ನೀಡಿದ್ದಾರೆ.

First published: