ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಕಲಬುರ್ಗಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದರು. ಇದರೊಂದಿಗೆ ಕಲ್ಯಾಣ ಕರ್ನಾಟಕದ ಬಹುವರ್ಷದ ಕನಸು ನನಸಾಗಿದೆ.
2/ 8
ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ವೈ ಜೊತೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್, ಸಂಸದ ಉಮೇಶ್ ಜಾಧವ್ ಮತ್ತಿತರರು ಮತ್ತಿತರರು ಭಾಗಿಯಾಗಿದ್ದರು.
3/ 8
ಮಾ.27, 2007ರಂದು ಕಲಬುರ್ಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆ ನೀಡಿತ್ತು. ಜೂ.14, 2008 ರಂದು ಸಿಎಂ ಬಿಎಸ್ ಯಡಿಯೂರಪ್ಪ ಕಾಮಗಾರಿಗೆ ಅಡಿಗಲ್ಲು ಹಾಕಿದ್ದರು. ಈಗ ಅವರೇ ಏರ್ಪೋರ್ಟ್ ಉದ್ಘಾಟನೆ ಮಾಡಿರುವುದು ವಿಶೇಷ ಸಂಗತಿ.
4/ 8
ಕೇಂದ್ರದ ‘ಉಡಾನ್’ ಯೋಜನೆಯಡಿ ಕಲಬುರ್ಗಿ ಏರ್ಪೋರ್ಟ್ ನಿರ್ಮಾಣವಾಗಿದೆ. 742 ಎಕರೆ ಭೂ ಪ್ರದೇಶದಲ್ಲಿ 230 ಕೋಟಿ ರೂ. ಖರ್ಚಿನಲ್ಲಿ ಏರ್ಪೋರ್ಟ್ ನಿರ್ಮಾಣ ಆಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದಲೇ 175.57 ಕೋಟಿ ರೂ. ವೆಚ್ಚ ಮಾಡಲಾಗಿದೆ.
5/ 8
ಸ್ಟಾರ್ ಏರ್ಲೈನ್ಸ್ ಕಲಬುರ್ಗಿಗೆ ಬಂದಿಳಿದ ಮೊದಲ ವಿಮಾನವಾಗಿದೆ. ವಾರಕ್ಕೆ 3 ದಿನ ಸ್ಟಾರ್ ಏರ್ಲೈನ್ಸ್ನಿಂದ ವಿಮಾನ ಸೇವೆ ಇರಲಿದೆ. ಬೆಂಗಳೂರು, ತಿರುಪತಿ, ದೆಹಲಿ ಮಾರ್ಗದಲ್ಲಿ ವಿಮಾನ ಸೇವೆ ಇದೆ. ಕಲಬುರ್ಗಿ-ಬೆಂಗಳೂರಿಗೆ ಪ್ರಯಾಣ ದರ 2,850 ರೂ. ನಿಗದಿ ಮಾಡಲಾಗಿದೆ.
6/ 8
ರಾಜ್ಯದಲ್ಲಿ 2ನೇ ಅತಿ ಉದ್ದದ ರನ್ ವೇ ಹೊಂದಿದೆ. ದೇಶದಲ್ಲೇ 10ನೇ ಅತಿ ಉದ್ದದ ರನ್ ವೇ ಇದಾಗಿದೆ. ರಾಜ್ಯದ 6ನೇ ನಾಗರಿಕ ವಿಮಾನ ನಿಲ್ದಾಣ ಕಲಬುರ್ಗಿ ವಿಮಾನ ನಿಲ್ದಾಣವಾಗಿದೆ.
7/ 8
ಕಲಬುರ್ಗಿ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತಿತರರು
8/ 8
ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ ಬಿಎಸ್ ಯಡಿಯೂರಪ್ಪನವರನ್ನುಸ್ವಾಗತಿಸುತ್ತಿರುವ ಅಧಿಕಾರಿಗಳು