ಆರ್ಆರ್ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ; ಸಂಭ್ರಮಾಚರಣೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ
RR Nagar and Shira By-Election 2020 Result: ಶಿರಾ ಹಾಗೂ ಆರ್ಆರ್ನಗರ ಎರಡು ಕ್ಷೇತ್ರದಲ್ಲಿಯೂ ಬಿಜೆಪಿ ಜಯಭೇರಿ ಭಾರಿಸಿದೆ. ಈ ಸಂಭ್ರಮವನ್ನು ಸಿಎಂ ಬಿಎಸ್ ಯಡಿಯೂರಪ್ಪ ಸಿಹಿ ತಿನ್ನುವ ಮೂಲಕ ಆಚರಿಸಿದ್ದಾರೆ. ಕ್ಷೇತ್ರದಲ್ಲಿ ಅಭ್ಯರ್ಥಿಗಳು ಗೆಲುವಿನತ್ತ ಸಾಗುತ್ತಿದ್ದಂತೆ ಸಚಿವರಾದ ಬಿ ಶ್ರೀರಾಮುಲು, ಆರ್ ಅಶೋಕ್, ಬಸವರಾಜ್ ಬೊಮ್ಮಾಯಿ ಮತ್ತಿತ್ತರ ನಾಯಕರು ಸಿಎಂ ನಿವಾಸಕ್ಕೆ ಆಗಮಿಸಿ ಸಂಭ್ರಮ ಆಚರಿಸಿದ್ದಾರೆ. (ಫೋಟೋ ಕೃಪೆ: ಆರ್ ಅಶೋಕ್, ಎಎನ್ಐ ಟ್ವಿಟರ್ ಖಾತೆ)