ಮೈಸೂರಿನ ಸಂಸ್ಕೃತಿ ಬಿಂಬಕದಂತಿರುವ ನೂತನ ಕಮಿಷನರ್ ಕಚೇರಿ ಉದ್ಘಾಟಿಸಿದ ಸಿಎಂ
ಮೈಸೂರಿನ ನೂತನ ಕಮೀಷನರ್ ಕಚೇರಿಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಉದ್ಘಾಟಿಸಿದರು. ಸಾಂಸ್ಕೃತಿಕ ನಗರಿಯ ಭವ್ಯ ಪರಂಪರೆಗೆ ತಕ್ಕಂತೆ ಕಚೇರಿ ನಿರ್ಮಿಸಿರುವ ಕುರಿತು ಸಿಎಂ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಯಿ ಶ್ಲಾಘಿಸಿದರು.
News18 Kannada | November 24, 2020, 8:51 PM IST
1/ 8
ಒಟ್ಟು 19.36 ಕೋಟಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಲಾಗಿದ್ದು, ಬರೋಬ್ಬರಿ 6 ವರ್ಷಗಳ ನಂತರ ಕಚೇರಿ ಕಟ್ಟಡ ಉದ್ಘಾಟನೆ ಮಾಡಲಾಗಿದೆ
2/ 8
ಸಾಂಸ್ಕೃತಿಕ ನಗರಿಯ ಭವ್ಯ ಪರಂಪರೆಗೆ ತಕ್ಕಂತೆ ಕಚೇರಿ ನಿರ್ಮಿಸಿರುವ ಕುರಿತು ಸಿಎಂ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಯಿ ಶ್ಲಾಘಿಸಿದರು.
3/ 8
ದೊಡ್ಡ ಕಚೇರಿ ಅಂತಾ ಕೆಲಸ ನಿಧಾನ ಮಾಡಬೇಡಿ. ಕರ್ನಾಟಕದಲ್ಲಿ ಕ್ರೈಂ ರೇಟ್ ಕಡಿಮೆಯಾಗಿದೆ. ಇನ್ನಷ್ಟು ಕಡಿಮೆ ಮಾಡುವ ಗುರಿ ನಮ್ಮದಾಗಿದೆ. ಮೈಸೂರು ಪೊಲೀಸರು ಮಾದರಿ ಪೊಲೀಸರಾಗಿದ್ದಾರೆ. ಇದೆ ಮಾದರಿ ಇಡೀ ರಾಜ್ಯದ್ಯಾಂತ ಇರುವಂತವರಾಗಬೇಕು ಎಂದರು
4/ 8
ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ನಗರ. ಶಾಂತಿಯಿಂದ ನೆಲೆಸಲು ಉತ್ತಮ ಕಾನೂನು ಸುವ್ಯವಸ್ಥೆ ಸರ್ಕಾರದ ಜವಾಬ್ದಾರಿ. ಪೊಲೀಸ್ ಇಲಾಖೆ ಪಾತ್ರ ಪ್ರಮುಖವಾದದ್ದು ಎಂದು ಸಿಎಂ ತಿಳಿಸಿದರು.
5/ 8
ಕೊರೋನಾ ಸಂದಿಗ್ಧತೆಯಲ್ಲಿ ಎಲ್ಲರೂ ಅಂತರ ಕಾಯ್ದುಕೊಳ್ಳಿ ಮಾಸ್ಕ್ ಧರಿಸಿ. ಮೈ ಮರೆಯದೆ ಹೆಚ್ಚಿನ ಎಚ್ಚರಿಕೆ ನಿರ್ವಹಿಸಿ. ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು
6/ 8
ಇದೇ ವೇಳೆ ಪೊಲೀಸ್ ಗೃಹ-2020 ಯೋಜನೆಯಡಿ 108 ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಉದ್ಘಾಟನೆ ನೆರವೇರಿಸಿದರು