CM Basavaraj Bommai: ಪ್ಯಾಕೇಜ್ ಪದ್ಧತಿ ರದ್ದುಗೊಳಿಸಲು ಕ್ರಮ: ಸಿಎಂ ಬೊಮ್ಮಾಯಿ ಭರವಸೆ
ಸರ್ಕಾರಿ ಕಾಮಗಾರಿಗಳ ಗುತ್ತಿಗೆ ನೀಡುವ ಸಂದರ್ಭದಲ್ಲಿ ಅನುಸರಿಸುವ ಪ್ಯಾಕೇಜ್ ಪದ್ಧತಿ ರದ್ದುಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಸೋಮವಾರ ಸಿಎಂ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಗಳನ್ನು ಗುತ್ತಿಗೆದಾರರ ನಿಯೋಗ ಭೇಟಿ ಮಾಡಿ ತನ್ನ ಮನವಿಯನ್ನು ಸಲ್ಲಿಸಿತ್ತು.
2/ 8
ಸರ್ಕಾರ ಪ್ಯಾಕೇಜ್ ಪದ್ಧತಿ ರದ್ದು ಮಾಡಬೇಕು. ಈ ಟೆಂಡರ್ ತೆಗೆದುಕೊಳ್ಳಲು ಗುತ್ತಿಗೆದಾರರರಿಗೆ ಕಷ್ಟವಾಗ್ತಿದೆ. ಸದ್ಯ 50 ಲಕ್ಷ ರೂ. ವರೆಗೆ ಟೆಂಟರ್ ಪಡೆಯಲು ಗುತ್ತಿಗೆದಾರರು ಯಾವುದೇ ಯಂತ್ರೋಪಕರಣ ಹೊಂದಬೇಕಿಲ್ಲ ಎಂಬ ನಿಯಮ ಇದೆ. ಈ ನಿಯಮವನ್ನು 5 ಕೋಟಿವರೆಗೆ ವಿಸ್ತರಿಸಬೇಕು ಎಂದು ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
3/ 8
ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಬಿಬಿಎಂಪಿ ಮತ್ತು ಜಲಸಂಪನ್ಮೂಲ ಸೇರಿದಂತೆ ಹಲವು ಇಲಾಖೆಗಳಲ್ಲಿ 20 ಸಾವಿರ ಕೋಟಿಗೂ ಅಧಿಕ ಅನುದಾನ ಬಿಡುಗಡೆ ಆಗಬೇಕಿದೆ.
4/ 8
ಅನುದಾನ ಬಿಡುಗಡೆಗೆ ಜನಪ್ರತಿನಿಧಿಗಳ ಒತ್ತಡ ಹೆಚ್ಚಾಗುತ್ತಿದೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ಹಿರಿತನದ ಆಧಾರದ ಮೇಲೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.
5/ 8
ಟೆಂಡರ್ ಗಳಲ್ಲಿ ಭ್ರಷ್ಟಾಚರ ವ್ಯಾಪಕವಾಗಿದೆ ಎಂದು ಗುತ್ತಿಗೆದಾರರ ನಿಯೋಗ ಆರೋಪಿಸಿದೆ. ಟೆಂಡರ್ ಪ್ರಕ್ರಿಯೆ ಆರಂಭವಾಗುವ ಮೊದಲು ಮತ್ತು ನಂತರ ಶೇ.30 ರಿಂದ ಶೇ.40 ಕಮಿಷನ್ ಪಡೆಯಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದೆ.
6/ 8
50 ಕೋಟಿಗೂ ಅಧಿಕ ಕಾಮಗಾರಿಗಳ ಮೇಲೆ ನಿಗಾ ಇಡಲು ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಈ ಮಿತಿಯನ್ನು 5 ಕೋಟಿಗೆ ಇಳಿಕೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.
7/ 8
ಸರ್ಕಾರಕ್ಕೆ ಪ್ಯಾಕೇಜ್ ಪದ್ಧತಿ ರದ್ದುಗೊಳಿಸಬೇಕು ಮತ್ತು ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದರು.
8/ 8
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಸೆರ್ಕಾರಕ್ಕೆ ನೀಡಿಲ್ಲ. ಬೇಡಿಕೆ ಈಡೇರದಿದ್ರೆ ದಾಖಲೆ ಬಿಡುಗಡೆ ಮಾಡೋದಾಗಿ ಹೇಳಿದ್ದರು.