ಟರ್ಮಿನಲ್ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಕಲಾಸಿಪಾಳ್ಯದಲ್ಲಿ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳ ಸಂಚಾರವಿದೆ. ಇದರಿಂದ ಗ್ರಾಮಾಂತರ ಭಾಗಗಳಿಂದ ಮಾರ್ಕೆಟ್ಗೆ ಜನರು ಬರುತ್ತಾರೆ. ಅತ್ಯಂತ ಸಂತೋಷದಿಂದ ಈ ಬಸ್ ನಿಲ್ದಾಣ ಉದ್ಘಾಟನೆ ಮಾಡಿದ್ದೇವೆ. ಮಾಸ್ ಟ್ರಾನ್ಸ್‌ಪೋರ್ಟ್ ಬಿಎಂಟಿಸಿಯಿಂದ ಟ್ರಾಫಿಕ್ ಸಮಸ್ಯೆ ಕಡಿಮೆ ಆಗುತ್ತೆ. ಕಳೆದ ಎರಡು ವರ್ಷಗಳಲ್ಲಿ 2,900 ಕೋಟಿ ರೂಪಾಯಿ ಅನುದಾನ ನೀಡಿದ್ದೇವೆ ಎಂದು ಹೇಳಿದರು.
ಅಂದಹಾಗೆ, 4.13 ಎಕರೆ ವಿಸ್ತೀರ್ಣದಲ್ಲಿ 63.17 ಕೋಟಿ ರೂಪಾಯಿ ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ಮೊದಲು ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳ ಕಾಲಮಿತಿ ನೀಡಲಾಗಿತ್ತು. ಇದರಂತೆ 2018ರ ಆಗಸ್ಟ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಅನುದಾನ ಬಿಡುಗಡೆ ವಿಳಂಬದಿಂದ ಕಾಮಗಾರಿ ವಿಳಂಬವಾಗಿತ್ತು. ಆ ಬಳಿಕ ಕೋವಿಡ್ ಲಾಕ್ಡೌನ್ನಿಂದಲೂ ಕಾಮಗಾರಿ ವಿಳಂಬ ಆಗಿತ್ತು.