ಸರ್ಕಾರವಾಗಿ ಇಂತಹ ಹಲವಾರು ಸವಾಲುಗಳನ್ನು ಹಿಂದೆ ಕೂಡ ಎದುರಿಸಲಾಗಿದ್ದು, ಹೊಗೆನಕಲ್ 2ನೇ ಯೋಜನೆಯಾಗಲಿ ಅಥವಾ ನದಿ ಜೋಡಣೆಯ ಯೋಜನೆಯಾಗಲಿ ಈಗಾಗಲೇ ಕರ್ನಾಟಕ ಸರ್ವೋಚ್ಛ ನ್ಯಾಯಾಲಯದಲ್ಲಿ ವಿರೋಧ ವ್ಯಕ್ತಪಡಿಸಿ ದಾವೆ ಹೂಡಲಾಗಿದೆ. ಹೋಗೆನಕಲ್ ಯೋಜನೆಗೂ ಕೇಂದ್ರ ಜಲ ಆಯೋಗವು ಇದಕ್ಕೆ ಒಪ್ಪಿಗೆ ನೀಡಬಾರದು ಎಂದು ಮನವಿ ಮಾಡಲಾಗಿದೆ ಹಾಗೂ ಕಾನೂನಾತ್ಮಕ ಹೋರಾಟವನ್ನು ಪ್ರಬಲವಾಗಿ ಮಾಡಲಾಗುತ್ತಿದೆ ಎಂದರು.