ಇಂದು ಉಡುಪಿಗೆ ಸಿಎಂ ಭೇಟಿ ನೀಡಿದ್ದು, ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದ ನೆರೆ ಹಾನಿಗೆ ತುರ್ತಾಗಿ 500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುತ್ತದೆ ಎಂದರು.
2/ 7
ಭೂಕಂಪನ ಮತ್ತಯ ಭೂಕುಸಿತದ ಬಗ್ಗೆ ಅಮೃತ ವಿವಿಯವರು ಅಧ್ಯಯನ ಮಾಡುತ್ತಾರೆ. ವರದಿ ಬಂದಕೂಡಲೇ ಪರಿಹಾರಕ್ಕೆ ಸರಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.
3/ 7
ಕಡಲ್ಕೊರೆತಕ್ಕೆ ಎಡಿಬಿ ಮೂಲಕ 300 ಕೋಟಿ ಖರ್ಚಾಗಿದೆ. ಕೇರಳ ಮಾದರಿಯಲ್ಲಿ ಒಂದು ಕಿಲೋಮೀಟರ್ ಕಡಲಿಗೆ ತಡೆಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.
4/ 7
ತಡೆಗೋಡೆ ನಿರ್ಮಾಣ ಸಂಬಂಧ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುವುದು. ಸರಿಯಾದ ಅಧ್ಯಯನ ಮಾಡಿ ಅನುಷ್ಟಾನ ಮಾಡಲು ತೀರ್ಮಾನ ಮಾಡಲಾಗುವುದು.ಶಾಶ್ವತ ಪರಿಹಾರಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
5/ 7
ಜಿಲ್ಲಾಮಟ್ಟದಲ್ಲೇ ತಕ್ಷಣ ಕಡಲ್ಕೊರೆತ ತಡೆಗೆ ಕ್ರಮಕ್ಕೆ ಸೂಚಿಸಲಾಗಿದೆ. ಬೆಳಗಾವಿ, ಉತ್ತರ ಕರ್ನಾಟಕ, ಉ.ಕ ಜಿಲ್ಲೆಗೆ ಮುಂದಿನ ವಾರ ಪ್ರವಾಸ ಮಾಡುತ್ತೇನೆ ಎಂದರು.
6/ 7
ನೆರೆಯ ಕುರಿತು ಎಲ್ಲಾ ಜಿಲ್ಲೆಯ ವರದಿ ಬಂದ ನಂತರ ಕೇಂದ್ರಕ್ಕೆ ಮನವಿ ಮಾಡಲಾಗುತ್ತದೆ. ಇದೇ ವೇಳೆ ಕರ್ನಾಟಕ ಆರ್ಥಿಕ ಶಿಸ್ತು ಕಾಪಾಡಿಕೊಂಡು ಬಂದಿದೆ ಎಂದರು.
7/ 7
ಮಂಗಳವಾರ ಮಡಿಕೇರಿಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳ ಮಾಲೀಕರಿಗೆ ಸಿಎಂ ಬೊಮ್ಮಾಯಿ ಚೆಕ್ ವಿತರಿಸಿದ್ರು.
First published:
17
Karnataka Flood: ರಾಜ್ಯದ ನೆರೆ ಹಾನಿಗೆ ತುರ್ತು 500 ಕೋಟಿ ರೂ ಬಿಡುಗಡೆ: ಸಿಎಂ ಬೊಮ್ಮಾಯಿ ಘೋಷಣೆ