ವಡ್ಡರಹಳ್ಳಿ ಗ್ರಾಮದ ಶೋಭಾ (40), ಮಗಳು ವರ್ಷಾ (8) ಮೃತಪಟ್ಟಿರುವ ದುರ್ದೈವಿಗಳು. ಶೋಭಾ ಅವರು ತನ್ನ ಇಬ್ಬರು ಮಕ್ಕಳಾದ ವರ್ಷ ಹಾಗೂ ಚೇತನ್ ಅವರೊಂದಿಗೆ ದನ ಮೇಯಿಸಲು ಹೋಗಿದ್ದರು.
2/ 7
ಈ ವೇಳೆ ಕೆರೆ ದಾಟುವ ವೇಳೆ ಮಗಳು ವರ್ಷಾ ಕೆರೆ ನೀರಿನಲ್ಲಿ ಸಿಲುಕಿಕೊಂಡಿದ್ದಾಳೆ. ತಾಯಿ ಶೋಭಾ ಮಗಳನ್ನು ರಕ್ಷಿಸಲು ಮುಂದಾಗಿದ್ದಾರೆ.
3/ 7
ಕೆರೆಯಿಂದ ಹೊರ ಬರಲು ಆಗದೇ ತಾಯಿ ಮಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಈ ವೇಳೆ ಜೊತೆಗಿದ್ದ ಮಗ ಚೇತನ್ ಅಪಾಯದಿಂದ ಪಾರಾಗಿದ್ದಾನೆ.
4/ 7
ಕೆರೆಯಲ್ಲಿ ನೀರು ಹೆಚ್ಚಿದ್ದ ಭಾಗದಲ್ಲೇ ಮಗಳು ಸಿಲುಕಿಕೊಂಡಿದ್ದು, ಮಗಳನ್ನು ರಕ್ಷಣೆ ಮಾಡಲು ಹೋಗಿ ತಾಯಿಯೂ ನೀರಿನಲ್ಲಿ ಸಿಲುಕಿಕೊಂಡಿದ್ದರಿಂದ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
5/ 7
ಎರಡೂ ಶವಗಳನ್ನು ಕೆರೆಯಿಂದ ಹೊರ ತೆಗೆದು, ಮರಣೋತ್ತರಶವ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
6/ 7
ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
7/ 7
ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.