ಚಿಕ್ಕಮಗಳೂರಿನಲ್ಲಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಮಲೆನಾಡಿಗರ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಾಲ್ಕು ದಿನದ ಮಳೆಗೆ ಸುಸ್ತಾಗಿರುವ ಮಲೆನಾಡಿಗರು ಪ್ರವಾಹದ ಭೀತಿಯಲ್ಲಿದ್ದಾರೆ. ನಿನ್ನೆ ರಾತ್ರಿಯೂ ಚಿಕ್ಕಮಗಳೂರಿನಲ್ಲಿ ಎಡಬಿಡದೆ ಮಳೆ ಸುರಿದಿದೆ. ಹಲವು ಕಡೆ ರಸ್ತೆಗಳಿಗೆ ನದಿ ನೀರು ನುಗ್ಗಿದೆ.