ಈಕೆ ಹೆಸರು ಕೃಪಾ ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದ ನಿವಾಸಿ. ವಯಸ್ಸು 13. ಓದುತ್ತಿರುವುದು 8 ನೇ ತರಗತಿ ಏಳೆಂಟು ವರ್ಷದಿಂದ ಯೋಗ ಮಾಡ್ತಿದ್ರು, ಯೋಗ ಭಾರತದ ಪ್ರತೀಕ ಎಂದು ಪ್ರಧಾನಿ ಮೋದಿ ಹೇಳಿದ ಮಾತಿನಿಂದ ಯೋಗದಲ್ಲಿ ಮತ್ತಷ್ಟು ತಲ್ಲೀನಳಾದಳು. ಪ್ರಧಾನಿ ನರೇಂದ್ರ ಮೋದಿ ಮಾತಿನಿಂದ ಯೋಗಕ್ಕೆ ಪ್ರೇರಿಪಿತಳಾದ ಈಕೆ ಇಂದು ಇಂದು ಅಂತರಾಷ್ಟ್ರೀಯ ಮಟ್ಟದ ಯೋಗಾ ಸ್ಪರ್ಧೆಗೆ ದೇಶವನ್ನ ಪ್ರತಿನಿಧಿಸಲಿದ್ದಾಳೆ. ಇದೇ ತಿಂಗಳ ಕೊನೆ ವಾರದಲ್ಲಿ ಮಲೆಷ್ಯಾದಲ್ಲಿ ನಡೆಯಲಿರೋ ಅಂತರಾಷ್ಟ್ರೀಯ ಮಟ್ಟದ ಯೋಗದಲ್ಲಿ ಭಾಗವಹಿಸಲಿದ್ದಾಳೆ.
ಈಕೆ ಹೆಸರು ಕೃಪಾ ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದ ನಿವಾಸಿ. ವಯಸ್ಸು 13. ಓದುತ್ತಿರುವುದು 8 ನೇ ತರಗತಿ ಏಳೆಂಟು ವರ್ಷದಿಂದ ಯೋಗ ಮಾಡ್ತಿದ್ರು, ಯೋಗ ಭಾರತದ ಪ್ರತೀಕ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತಿನಿಂದ ಯೋಗದಲ್ಲಿ ಮತ್ತಷ್ಟು ತಲ್ಲೀನಳಾದಳು.
2/ 10
ಈಕೆ ಇಂದು ಇಂದು ಅಂತರಾಷ್ಟ್ರೀಯ ಮಟ್ಟದ ಯೋಗಾ ಸ್ಪರ್ಧೆಗೆ ದೇಶವನ್ನ ಪ್ರತಿನಿಧಿಸಲಿದ್ದಾಳೆ. ಇದೇ ತಿಂಗಳ ಕೊನೆ ವಾರದಲ್ಲಿ ಮಲೆಷ್ಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಯೋಗದಲ್ಲಿ ಭಾಗವಹಿಸಲಿದ್ದಾಳೆ.
3/ 10
ಯೋಗ ಎಂಬುದು ಆಧ್ಯಾತ್ಮಿಕವೂ ಹೌದು, ವೈಜ್ಞಾನಿಕವೂ ಹೌದು. ದೇಹ ಮತ್ತು ಮನಸ್ಸು ಎರಡನ್ನು ನಿಯಂತ್ರನದಲ್ಲಿಟ್ಟುಕೊಳ್ಳಲು ಯೋಗ ಅತ್ಯಂತ ಸಹಕಾರಿ ಎಂದು ತನ್ನ ಸಾಧನೆಯ ಯೋಗದ ಬಗ್ಗೆ ತಾನೇ ಮೆಚ್ಚುಗೆ ಮಾತನಾಡ್ತಾಳೆ.
4/ 10
ಅಂದು ಈಕೆಯ ಹಠ ಹಾಗೂ ಕಾಟವನ್ನ ತಡೆಯಲಾಗ್ದೆ ಯೋಗಕ್ಕೆ ಸೇರಿಸಿದ್ದ ಅಪ್ಪ ಇಂದು ಮಗಳ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
5/ 10
ಅಂದು ಯೋಗಕ್ಕೆ ಸೇರಿಸಿದಾಗ ಶ್ರೀಧರ್ ಮಗಳು ಕೃಪಾ ಎನ್ನುತ್ತಿದ್ದ ಕಡೂರಿಗರು ಇಂದು ಕೃಪಾ ತಂದೆ ಶ್ರೀಧರ್ ಎನ್ನುವಂತೆ ಮಾಡಿದ್ದಾಳೆ. ಮಗಳ ಸಾಧನೆಗೆ ಹೆತ್ತವರು ಖುಷಿ ಪಟ್ಟಿದ್ದಾರೆ.
6/ 10
7 ವರ್ಷಗಳಿಂದ ಕಡೂರಿನ ಗಿರೀಶ್ ಎಂಬುವರ ಬಳಿ ಯೋಗ ಕಲಿತ ಕೃಪಾ ಹಲವು ಪ್ರಶಸ್ತಿ ಗಳಿಸಿದ್ದಾಳೆ.
7/ 10
2012ರಿಂದ ರಾಜ್ಯಾದ್ಯಂತ ನಡೆದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿರೋ ಈ ಹುಡುಗಿ 2012ರಲ್ಲಿ ಪ್ರಥಮ, 2013ರಲ್ಲಿ ತೃತೀಯ, 2014ರಲ್ಲಿ ದ್ವಿತೀಯ ಹಾಗೂ 2015ರಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
8/ 10
ಇದೀಗ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರೋದ್ರಿಂದ ತನ್ನ ಯೋಗಾಭ್ಯಾಸವನ್ನ ಗುರು ಗಿರೀಶ್ ಮಾರ್ಗದರ್ಶನದಲ್ಲಿ ಮತ್ತಷ್ಟು ಕಠಿಣಗೊಳಿಸಿದ್ದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾಳೆ.
9/ 10
ಮಹಿಳಾ ಕ್ರಿಕೆಟ್ನಲ್ಲಿ ಕಡೂರಿನ ವೇದಾ ಕೃಷ್ಣಮೂರ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ರೆ,ಯೋಗದಲ್ಲಿ ಶಾಲಿನಿ ಕೂಡ ಖ್ಯಾತಿಯಾಗಿದ್ದಾರೆ.
10/ 10
ಈಗ 13ರ ಹರೆಯದ ಕೃಪಾ ಕೂಡ ಅದೇ ಸಾಲಿಗೆ ಸೇರಲಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲೂ ಗೆದ್ದು ಬೀಗಿ ಭಾರತಕ್ಕೆ ಹೆಸರು ತರಲೆಂಬುದು ನಮ್ಮ ಆಶಯ.