PHOTOS ವೇದಾವತಿ ನದಿಯ ಅಬ್ಬರಕ್ಕೆ ಅನ್ನದಾತರು ಕಂಗಾಲು..!

ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ಕಡೂರು ತಾಲೂಕಿನ ಮಲ್ಲಿದೇವರಹಳ್ಳಿ, ಹಡಗಲು, ಆಸಂದಿ, ಹಿರೇನಲ್ಲೂರು, ಬಾಸೂರು ಗ್ರಾಮಗಳಲ್ಲಿ ವೇದಾವತಿ ನದಿ ಪ್ರವಾಹಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಮಲ್ಲಿದೇವರಹಳ್ಳಿಯಲ್ಲಿ ಉಕ್ಕಿ ಹರಿಯುತ್ತಿರುವ ನದಿ ನೀರನ್ನ ನೋಡಲು ಹೋದ ವೃದ್ಧೆ ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ. ಮತ್ತೊಂದು ಕಡೆ ರಾತ್ರೋ ರಾತ್ರಿ ಸಾವಿರಾರು ಎಕರೆ ತೆಂಗಿನ ತೋಟಗಳು ಮಳುಗಡೆಯಾಗಿ ಅಲ್ಲಿ ಬೆಳೆದಿದ್ದ ಈರುಳ್ಳಿ, ಜೋಳ, ನವಣೆ, ಸೇರಿದಂತೆ ಹತ್ತಾರು ಬೆಳೆಗಳು ರೈತರ ಕಣ್ಣೆದುರೆ ಕೊಚ್ಚಿ ಹೋಗಿವೆ. ಹಡಗಲು ಹಾಗೂ ಆಸಂದಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸೋ ಪ್ರಮುಖ ಎರಡು ಸೇತುವೆ ವೇದಾವತಿಯ ಅಬ್ಬರಕ್ಕೆ ಕೊಚ್ಚಿ ಹೋಗಿದ್ದು ಸೇತುವೆಗೆ ಅಳವಡಿಸಿದ್ದ ದೊಡ್ಡ-ದೊಡ್ಡ ಪೈಪ್​​ಗಳು ಕಿಲೋ ಮೀಟರ್​ ಗಟ್ಟಲೇ ತೇಲಿ ಹೋಗಿವೆ.​

First published: