ಸಿಎಂ ಬೊಮ್ಮಾಯಿ ಸದನದಲ್ಲಿ ನೀಡಿರುವ ಮಾಹಿತಿಯಂತೆ ಮೆಟ್ರೋ ರೈಲು ಯೋಜನೆಗೆ ಕಾಮಗಾರಿ ವೇಳೆ ಇದುವರೆಗೂ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 50 ಮಂದಿ ಹಾನಿಗೊಳಗಾಗಿದ್ದಾರೆ. ಇದರಲ್ಲಿ 38 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. 2023ರ ವರ್ಷದ ಆರಂಭ ಜನವರಿಯಲ್ಲೇ ನಾಗವಾರ ಬಳಿಯ ಹೊರವರ್ತುಲ ರಸ್ತೆಯ ಮೆಟ್ರೋ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಪಿಲ್ಲರ್ ಕುಸಿದು ಬಿದ್ದು ಮಹಿಳೆ ಮತ್ತು ಎರಡು ವರ್ಷದ ಮಗು ಸಾವನ್ನಪ್ಪಿದ್ದರು. (ಸಾಂದರ್ಭಿಕ ಚಿತ್ರ)
ದುರ್ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡಿದ್ದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ತಜ್ಞರು, ಪಿಲ್ಲರ್ ನಿರ್ಮಾಣಕ್ಕೆ ಅಳವಡಿಸಿದ್ದ ಕಬ್ಬಿಣದ ಪಿಲ್ಲರ್ ನಿಂತುಕೊಳ್ಳಲು ಅಗತ್ಯವಿದ್ದಷ್ಟು ಸಪೋರ್ಟ್ ನೀಡಿದೆ ಇದ್ದದ್ದು ದುರಂತಕ್ಕೆ ಕಾರಣ ಎಂದು ಹೇಳಿದ್ದರು. ಮೆಟ್ರೋ ಪಿಲ್ಲರ್ ನಿರ್ಮಾಣದ ವೇಳೆ 18 ಮೀಟರ್ ಎತ್ತರದ ಕಂಬಿ ಕಟ್ಟಲಾಗಿತ್ತು. ಇಷ್ಟು ಎತ್ತರದ ಪಿಲ್ಲರ್ಗೆ ಕಂಬಿ ಕಟ್ಟುವಾಗ ಮುಂಜಾಗೃತಾ ಕ್ರಮವಾಗಿ ಕಂಬಿಗೆ ಸರಿಯಾದ ಸಪೋರ್ಟ್ ನೀಡಬೇಕಿತ್ತು. ಆ ಕೆಲಸವನ್ನು ಮಾಡದಿರುವುದೇ ದುರಂತಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. (ಸಾಂದರ್ಭಿಕ ಚಿತ್ರ)
ಎಂಎಲ್ಸಿ ಶರವಣ ಅವರ ಪ್ರಶ್ನೆಗೆ ಉತ್ತರಿಸಿದ್ದ ಸಿಎಂ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಧ್ಯಯನದಲ್ಲಿ ತಿಳಿಸಿರುವ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಬಿಎಂಆರ್ ಸಿಎಲ್ ಎಂಜಿನಿಯರ್ ಗಳಿಗೆ ಹೊಸದಾಗಿ ಟ್ರೈನಿಂಗ್ ಕೊಡಲಾಗುತ್ತಿದೆ. ಮುಂದೆ ಇಂತಹ ದುರಂತಗಳು ನಡೆದಂತೆ ಏನೇಲ್ಲಾ ಕ್ರಮ ಕೈಗೊಳ್ಳಬೇಕು ಅನ್ನೋದರ ಬಗ್ಗೆ ಎಸ್ಒಪಿ ಬದಲಾವಣೆ ಮಾಡಲಾಗುತ್ತದೆ ಎಂದು ಐಐಎಸ್‌ಸಿ ವರದಿಯ ಬಳಿಕ ಮೆಟ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.