Wildfire: 3 ದಿನಗಳಿಂದ ಹೊತ್ತಿ ಉರಿಯುತ್ತಿರುವ ಚಾರ್ಮಾಡಿ ಘಾಟ್, ಪ್ರಾಣಿ-ಪಕ್ಷಿಗಳ ಮಾರಣಹೋಮ!

ಮೂಡಿಗೆರೆ ತಾಲೂಕು ವ್ಯಾಪ್ತಿಯ ಚಾರ್ಮಾಡಿ ಘಾಟ್​ ಅರಣ್ಯ ಪ್ರದೇಶದಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸಿದೆ. ಆಲೇಖಾನ್ ಹೊರಟ್ಟಿ ಗುಡ್ಡದಲ್ಲಿನ ಕಾಡ್ಗಿಚ್ಚಿಗೆ ಗುಡ್ಡದ ತುದಿಭಾಗ ಭಸ್ಮವಾಗಿದೆ. ಮೂಕ ಪ್ರಾಣಿಗಳು ಬೆಂಕಿಯ ತಾಪಕ್ಕೆ ಬೆಂದು ಹೋಗಿವೆ.

First published:

 • 17

  Wildfire: 3 ದಿನಗಳಿಂದ ಹೊತ್ತಿ ಉರಿಯುತ್ತಿರುವ ಚಾರ್ಮಾಡಿ ಘಾಟ್, ಪ್ರಾಣಿ-ಪಕ್ಷಿಗಳ ಮಾರಣಹೋಮ!

  ಚಾರ್ಮಾಡಿ ಘಾಟಿಗೆ ಹೊಂದಿಕೊಂಡಿರುವ ಎತ್ತರ ಪ್ರದೇಶದ ಗುಡ್ಡದಲ್ಲಿ ಹೊತ್ತಿ ಉರಿಯುತ್ತಿದ್ದು ಬೆಂಕಿಯ ಜ್ವಾಲೆ ಎಲ್ಲೆಡೆ ಹರಡುತ್ತಿದೆ. ಕಾಡ್ಗಿಚ್ಚಿನಿಂದ ಉಂಟಾದ ಬೆಂಕಿಯಿಂದಾಗಿ ಅಪಾರ ಪ್ರಮಾಣದ ಅರಣ್ಯ ಬೆಂಕಿಗಾಹುತಿಯಾಗಿದೆ.

  MORE
  GALLERIES

 • 27

  Wildfire: 3 ದಿನಗಳಿಂದ ಹೊತ್ತಿ ಉರಿಯುತ್ತಿರುವ ಚಾರ್ಮಾಡಿ ಘಾಟ್, ಪ್ರಾಣಿ-ಪಕ್ಷಿಗಳ ಮಾರಣಹೋಮ!

  ಹೌದು ಕಳೆದ 3 ದಿನದಿಂದ ಚಾರ್ಮಾಡಿ ಘಾಟ್ ನಿರಂತರವಾಗಿ ಉರಿಯುತ್ತಿದ್ದು, ಅರಣ್ಯಾಧಿಕಾರಿಗಳು ಎಷ್ಟೇ ಯತ್ನ ನಡೆಸಿದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ.

  MORE
  GALLERIES

 • 37

  Wildfire: 3 ದಿನಗಳಿಂದ ಹೊತ್ತಿ ಉರಿಯುತ್ತಿರುವ ಚಾರ್ಮಾಡಿ ಘಾಟ್, ಪ್ರಾಣಿ-ಪಕ್ಷಿಗಳ ಮಾರಣಹೋಮ!

  ಬೆಂಕಿ ನಂದಿಸಲು ಅಧಿಕಾರಿಗಳಿಗೆ ಸ್ಥಳಿಯರು ಸಾಥ್ ನೀಡಿದ್ದಾರೆ. ಎತ್ತರ ಪ್ರದೇಶವಾದ್ದರಿಂದ ಅಗ್ನಿ ಶಾಮಕ ವಾಹನ ಹೋಗಲು ಕಷ್ಟವಾಗಿದ್ದು ಕಾಡು ಸೊಪ್ಪನ್ನು ಬಳಸಿಯೇ ಬೆಂಕಿ ನಂದಿಸುತ್ತಿದ್ದಾರೆ.

  MORE
  GALLERIES

 • 47

  Wildfire: 3 ದಿನಗಳಿಂದ ಹೊತ್ತಿ ಉರಿಯುತ್ತಿರುವ ಚಾರ್ಮಾಡಿ ಘಾಟ್, ಪ್ರಾಣಿ-ಪಕ್ಷಿಗಳ ಮಾರಣಹೋಮ!

  ನಿನ್ನೆಯಷ್ಟೇ ಬೆಂಕಿ ನಂದಿಸಲು ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿಯ ಬೈಕ್​ಗೆ ಬೆಂಕಿ ಹತ್ತಿಕೊಂಡಿದ್ದು, 3 ಬೈಕ್ ಗಳು ಸುಟ್ಟು ಭಸ್ಮವಾಗಿದೆ. ಗಾಳಿಯಲ್ಲಿ ಬಂದ ಕಿಡಿಯಿಂದ ಬೈಕ್ ಗಳಿಗೆ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ.

  MORE
  GALLERIES

 • 57

  Wildfire: 3 ದಿನಗಳಿಂದ ಹೊತ್ತಿ ಉರಿಯುತ್ತಿರುವ ಚಾರ್ಮಾಡಿ ಘಾಟ್, ಪ್ರಾಣಿ-ಪಕ್ಷಿಗಳ ಮಾರಣಹೋಮ!

  ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್​ನಲ್ಲಿ ಸಂಭವಿಸಿರುವ ಈ ದುರಂತ ಜನರನ್ನು ಬೆಚ್ಚಿ ಬೀಳಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ನೂರಾರು ಪ್ರಾಣಿಪಕ್ಷಿಗಳು ಪ್ರಾಣ ಕಳೆದುಕೊಂಡಿವೆ,

  MORE
  GALLERIES

 • 67

  Wildfire: 3 ದಿನಗಳಿಂದ ಹೊತ್ತಿ ಉರಿಯುತ್ತಿರುವ ಚಾರ್ಮಾಡಿ ಘಾಟ್, ಪ್ರಾಣಿ-ಪಕ್ಷಿಗಳ ಮಾರಣಹೋಮ!

  ಇನ್ನು ಬೆಂಕಿ ಕೆನ್ನಾಲಿಗೆಯಿಂದ ತಾಪ ಹೆಚ್ಚಾಗಿ ಕಾಳಿಂಗ ಸರ್ಪ ನಾಡಿನತ್ತ ಲಗ್ಗೆ ಇಟ್ಟಿವೆ. ಕಾಡಂಚಿನ ಗ್ರಾಮ ತರುವೆಯಲ್ಲಿ ಬೃಹತ್ ಕಾಳಿಂಗ ಸರ್ಪ ಸೆರೆಯಾಗಿದೆ.

  MORE
  GALLERIES

 • 77

  Wildfire: 3 ದಿನಗಳಿಂದ ಹೊತ್ತಿ ಉರಿಯುತ್ತಿರುವ ಚಾರ್ಮಾಡಿ ಘಾಟ್, ಪ್ರಾಣಿ-ಪಕ್ಷಿಗಳ ಮಾರಣಹೋಮ!

  ದೈತ್ಯಾಕಾರದ ಕಾಳಿಂಗನನ್ನ ನೋಡಿ ಗ್ರಾಮಸ್ಥರು ಮತ್ತಷ್ಟು ಭಯಭೀತರಾಗಿದ್ದಾರೆ. ಹಾವಾಡಿಗೆ ಆರೀಫ್ ದೈತ್ಯಾಕಾರವಾಗಿದ್ದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಚಾರ್ಮಾಡಿ ಘಾಟಿಯ ಬೆಂಕಿ ಬೀಳದ ಪ್ರದೇಶಕ್ಕೆ ಬಿಟ್ಟಿದ್ದಾರೆ.

  MORE
  GALLERIES