Charmadi Ghat: ಚಾನ್ಸ್ ಸಿಕ್ಕಿದ್ರೆ ಒಂದ್ಸಲ ಚಾರ್ಮಾಡಿ ಘಾಟ್ಗೆ ಹೋಗ್ಬನ್ನಿ; ಈ ಮುಂಗಾರು ಮಳೆಗೆ ಹೊಸ ಲೋಕವೇ ಸೃಷ್ಟಿಯಾಗಿದೆ..!
ಪ್ರಕೃತಿಯ ಸೊಬಗೇ ಹಾಗೆ, ಪ್ರಕೃತಿಗೆ ಮನಸೋಲದವರೇ ಇಲ್ಲ. ಸದ್ಯ ಕೊರೊನಾ, ಲಾಕ್ಡೌನ್ ಅಂತಾ ಜನರು ಮನೆಯಲ್ಲಿ ಕುಳಿತು ಮಂಕಾಗಿ ಹೋಗಿದ್ದಾರೆ. ಲಾಕ್ ಡೌನ್ನಿಂದ ಮನೆಯಲ್ಲೇ ಲಾಕ್ ಆಗಿರೋ ಜನ್ರು ಚಾನ್ಸ್ ಸಿಕ್ಕಿದ್ರೆ ಚಾರ್ಮಾಡಿ ಘಾಟ್ ಕಡೆ ಒಮ್ಮೆ ಪಯಣ ಬೆಳೆಸಿ. (ಫೋಟೋ ವರದಿ: ವೀರೇಶ್ ಹೆಚ್.ಜಿ. ಚಿಕ್ಕಮಗಳೂರು ವರದಿಗಾರ)
ಪ್ರಕೃತಿಯ ಸೊಬಗೇ ಹಾಗೆ, ಪ್ರಕೃತಿಗೆ ಮನಸೋಲದವರೇ ಇಲ್ಲ. ಸದ್ಯ ಕೊರೊನಾ, ಲಾಕ್ಡೌನ್ ಅಂತಾ ಜನರು ಮನೆಯಲ್ಲಿ ಕುಳಿತು ಮಂಕಾಗಿ ಹೋಗಿದ್ದಾರೆ. ಲಾಕ್ ಡೌನ್ನಿಂದ ಮನೆಯಲ್ಲೇ ಲಾಕ್ ಆಗಿರೋ ಜನ್ರು ಚಾನ್ಸ್ ಸಿಕ್ಕಿದ್ರೆ ಚಾರ್ಮಾಡಿ ಘಾಟ್ ಕಡೆ ಒಮ್ಮೆ ಪಯಣ ಬೆಳೆಸಿ.
ಹೌದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿಯ ಸೌಂದರ್ಯವನ್ನ ವರ್ಣಿಸಲು ಪದಗಳೇ ಸಾಲದು. ಮುಂಗಾರು ಮಳೆಯ ಸಿಂಚನದಿಂದ ಜಲಪಾತಗಳು ಜೀವ ಕಳೆಯನ್ನ ಪಡೆದುಕೊಂಡಿವೆ.
7/ 16
ಬಂಡೆಗಳ ಮೇಲಿನಿಂದ ಜುಳು-ಜುಳು ನಿನಾದ ಗೈಯುತ್ತಾ ಧುಮ್ಮಿಕ್ಕೋ ಜಲಧಾರೆಗಳು ಕ್ಷೀರಧಾರೆಯಂತೆ ಭಾಸವಾಗುತ್ತೆ. ನಿರಂತರ ಮಳೆಯ ಆಗಮನಕ್ಕೆ ಬೆಟ್ಟಗಳು ಸಾಲು ಹಸಿರೊದ್ದು ಝೇಂಕರಿಸುತ್ತಿದ್ರೆ, ಮಂಜಿನ ಕಣ್ಣಾಮುಚ್ಚಾಲೆ ಆಟ ನಿಸರ್ಗ ಪ್ರಿಯರ ಸ್ವರ್ಗವಾಗಿ ಮಾರ್ಪಟ್ಟಿದೆ.
8/ 16
ಸತತ ಮಳೆಯಿಂದ ಚಾರ್ಮಾಡಿ ಘಾಟ್ನ ರಸ್ತೆಯುದ್ದಕ್ಕೂ ಹತ್ತಾರು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸೋ ಪ್ರವಾಸಿಗರು ಚಾರ್ಮಾಡಿ ಒಡಲಿನಿಂದ ಹಾಲ್ನೊರೆಯಂತೆ ಸೂಸೋ ಫಾಲ್ಸ್ ಗಳನ್ನ ಕಣ್ತುಂಬಿಸಿಕೊಂಡು ಖುಷಿ ಪಡ್ತಿದ್ದಾರೆ.
9/ 16
ಬಾನೆತ್ತರದ ಶಿಖರಗಳಿಂದ ರಭಸವಾಗಿ ಚಿಮ್ಮೋ ಜಲಪಾತಗಳು ರಮಣೀಯ ನೋಟವನ್ನ ಸೃಷ್ಠಿಸಿದ್ರೆ, ದಟ್ಟ ಕಾನನದ ನಡುವಿನ ಜುಳು-ಜುಳು ನಿನಾದೊಂದಿಗೆ ಹರಿಯೋ ಝರಿಗಳು ಮನಕ್ಕೆ ಮುದ ನೀಡುತ್ವೆ.
10/ 16
ಮುಗಿಲು ಚುಂಬಿಸೋ ಹಸಿರು ಬೆಟ್ಟದ ಮೇಲೆಲ್ಲ ಹರಡಿರೋ ಹಿಮದ ರಾಶಿ. ಯಾವಾಗ್ಲೋ ಒಮ್ಮೊಮ್ಮೆ ಬೆಳ್ಮುಗಿಲ ಸಾಲಿಂದ ಬಂಗಾರದ ಕಿರಣಗಳನ್ನ ಹೊರಸೂಸೋ ದಿನಕರನ ಚಿತ್ತಾರ. ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ಸಾಗೋ ಜಲಧಾರೆಯ ಮಂಜುಳಗಾನ.
11/ 16
ಹಸಿರು ಬೆಟ್ಟಗಳ ನಡುವೆ ಧುಮ್ಮಿಕ್ಕಿ ಹರಿಯೋ ಜಲಧಾರೆಯ ಕವಲು. ನೆಲಕ್ಕೆ ಮುತ್ತಿಕ್ಕಿ ಪುಟಿಯುವ ನೀರ ಹನಿಗಳೊಳಗಿನ ಜಲಪಾತಗಳ ವೈಭವ. ಮುಂಗಾರಿನ ಸಿಂಚನಕ್ಕೆ ಚಾರ್ಮಾಡಿ ತುಂಬೆಲ್ಲಾ ಜಲಪಾತಗಳ ಚಿತ್ತಾರವೇ ಅನಾವರಣಗೊಂಡಿದೆ.
12/ 16
ಅಲೇಖಾನ್ ಬಳಿಯಿಂದ ಶುರುವಾಗುವ ಜಲಪಾತಗಳ ಚಿತ್ತಾರ ಚಾರ್ಮಾಡಿವರೆಗೂ ದಾರಿಯುದ್ದಕ್ಕೂ ಕಣ್ಣಿಗೆ ಹಬ್ಬ, ಮನಸಿಗೆ ಹಿತವನ್ನ ನೀಡುತ್ತೆ. ಅದರಲ್ಲೂ ಬಂಡೆಗಳ ಮೇಲಿಂದ ನೂರಾರು ಅಡಿಗಳ ಎತ್ತರದಿಂದ ಧುಮ್ಮಿಕ್ಕೋ ಜಲಪಾತಗಳನ್ನ ನೋಡೋದೇ ಪರಮಾನಂದ.
13/ 16
ದಟ್ಟವಾದ ಮಂಜು, ಚುಮು ಚುಮು ಚಳಿ, ಮಿಸ್ಸಾಗದೇ ಬರೋ ಮಳೆಯ ಮಧ್ಯೆ ಚಾರ್ಮಾಡಿಯ ಪಯಣ ಎಂಥವರಿಗೂ ರೋಮಾಂಚನ ತರಿಸುತ್ತೆ.
14/ 16
ಒಟ್ಟಾರೆ ಚಾರ್ಮಾಡಿ ಚಾರಣಿಗರ ಸ್ವರ್ಗ. ಹಸಿರು ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕೋ ಜಲಧಾರೆಯ ಕವಲು. ಪ್ರಕೃತಿ ಮಾತೆಯ ನಿಸರ್ಗ ಚೆಲುವು. ಈ ಬೆರಗು ಜಗತ್ತನ್ನ, ಕಣ್ಮನ ಸೆಳೆಯುವ ಜಲಪಾತಗಳನ್ನ ಕಣ್ತುಂಬಿಸಿಕೊಳ್ಳಲು ನೀವು ಮಲೆನಾಡಿಗೆ ಬರಬೇಕು.
15/ 16
ಆದ್ರೆ ಸದ್ಯ ಕೊರೊನಾದ ಕರಿನೆರಳು ಇರೋದ್ರಿಂದ ಸ್ವಲ್ಪ ದಿನಗಳ ನಂತರ ಬಂದ್ರೆ ಉತ್ತಮ, ಮಳೆಗಾಲ ಇನ್ನೂ ಎರಡ್ಮೂರು ತಿಂಗಳು ಇರೋದ್ರಿಂದ ಫಾಲ್ಸ್ಗಳ ಜೀವಕಳೆ ಅಲ್ಲಿವರೆಗೆ ಹಸಿರಾಗಿರುತ್ತದೆ.
16/ 16
ಪ್ರಶಾಂತತೆಯಲ್ಲೂ ಹಸಿರ ಹೊದ್ದು ಮಲಗಿರೋ ದಟ್ಟ ಕಾನನಗಳು ಮಲೆನಾಡಲ್ಲೊಂದು ಹೊಸ ಲೋಕವನ್ನೆ ಸೃಷ್ಠಿಸಿವೆ.