Chandrashekhar Death: ಚಂದ್ರು ಸಾವಿನ ಪ್ರಕರಣ, ರೇಣುಕಾಚಾರ್ಯ ನಿವಾಸಕ್ಕೆ ಸಿಐಡಿ ತಂಡ
ಹೊನ್ನಾಳಿ ಶಾಸಕ ರೇಣುಕಾಚಾರ್ಯ (BJP MLA MP Renukacharya) ಸೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದೆ. ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ತಂಡ (CID Team) ಶಾಸಕ ರೇಣುಕಾಚಾರ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.
ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳ ಚಂದ್ರಶೇಖರ್ ಕೊನೆಯ ಬಾರಿ ಯಾರನ್ನು ಭೇಟಿಯಾಗಿದ್ದ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪೋಷಕರಿಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
2/ 7
ಬುಧವಾರ ರೇಣುಕಾಚಾರ್ಯ ಕುಟುಂಬಸ್ಥರ ವಿಚಾರಣೆ ಮಾಡಿದ ಸಿಐಡಿ ತಂಡ ಹಲವು ವಿಷಯಗಳ ಮಾಹಿತಿ ಪಡೆದುಕೊಂಡಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡ ಅಲ್ಲಿಯೂ ಸಹ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದೆ.
3/ 7
ಇನ್ನು ಚಂದ್ರಶೇಖರ್ ಆಪ್ತ ವಲಯದಲ್ಲಿ ಹಾಗೂ ಕೊನೆಯ ಬಾರಿ ನೋಡಿದ್ದ ಸ್ನೇಹಿತರಿಂದಲೂ ಮಾಹಿತಿ ಸಂಗ್ರಹಣೆ ಮಾಡಿದೆ. ಮನೆಯಿಂದ ಹೊರಗಡೆ ಹೋಗಿದ್ದರ ಬಗ್ಗೆ ಹಾಗೂ ಅಪಘಾತ ಯಾವ ರೀತಿ ಆಗಿದೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ.
4/ 7
ಚಂದ್ರು ಸಾವು ಅಲ್ಲ ಕೊಲೆ ಅವತ್ತು ಹೇಳಿದ್ದೆ ಇವತ್ತು ಹೇಳ್ತಿನಿ ಅದು ಕೊಲೆ. ಚಂದ್ರಶೇಖರ್ ನೆನೆದು ಇವತ್ತಿಗೂ ಕ್ಷೇತ್ರದ ಜನ ಕಣ್ಣೀರು ಹಾಕುತ್ತಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
5/ 7
ಚಂದ್ರುವಿನ ಸಾವಿನಲ್ಲಿ ನಾನು ಯಾವುದೇ ರಾಜಕೀಯ ಮಾಡುವುದಿಲ್ಲ. ಚಂದ್ರಶೇಖರ್ ಆತ್ಮಕ್ಕೆ ಶಾಂತಿ ಸಿಗಬೇಕು ನ್ಯಾಯ ಸಿಗಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು.
6/ 7
ಚಂದ್ರಶೇಖರ್ ಸಾವಿನ ತನಿಖೆ ವಿಳಂಬ ಆಗಿದ್ದರಿಂದ ನೋವಾಗಿದೆ. ಎಲ್ಲವನ್ನು ತಡೆದುಕೊಳ್ಳುವ ಶಕ್ತಿ ಭಗವಂತ ನೀಡಿದ್ದಾನೆ ಎಂದು ಶಾಸಕರು ಭಾವುಕರಾದರು.
7/ 7
ಚಂದ್ರು ಅಲಿಯಾಸ್ ಚಂದ್ರಶೇಖರ್ ಶವ ಪತ್ತೆಯಾದಾಗ ಆತನ ಒಳಉಡುಪು ಇರಲಿಲ್ಲ. ಆತನ ಕಿವಿ ಕಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಚಂದ್ರಶೇಖರ್ ಅವರ ತಂದೆಯ ಈ ಹೇಳಿಕೆ ಒಂದಿಷ್ಟು ಅನುಮಾನಗಳಿಗೆ ಕಾರಣವಾಗಬಹುದು.