ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಏಕೆಂದರೆ ಹಾಲಿನ ದರ ಹೆಚ್ಚಳ ಮಾಡಲಿಲ್ಲ. ಇದರಿಂದ ಹಾಲು ಉತ್ಪಾದಕರು ಖಾಸಗಿ ಒಕ್ಕೂಟಗಳ ಕಡೆ ಮುಖ ಮಾಡಿದ್ದಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ. ನಾವು ರೈತರಿಗೆ ಅನುಕೂಲ ಆಗಲಿ ಅಂತ ಒಕ್ಕೂಟದಲ್ಲಿ ನಿರ್ಧಾರ ಮಾಡಿ ಖರೀದಿ ದರ ಹೆಚ್ಚಳ ಮಾಡುವ ನಿರ್ಧಾರ ಮಾಡಿದ್ದೇವು. ಈಗ ಆದರೂ ಸರ್ಕಾರ ಹಾಲಿನ ಎಂಆರ್ಪಿ ದರವನ್ನು ಹೆಚ್ಚಳ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯ ಮಾಡಿದರು.