BS Yediyurappa: ಶಿಥಿಲಾವಸ್ಥೆ ತಲುಪಿದ ಬಿ ಎಸ್ ಯಡಿಯೂರಪ್ಪ ಓದಿದ ಶಾಲೆ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡ್ಡಿಯೂರಪ್ಪ ಅವರು ಓದಿದ ಶಾಲೆ ಮೂಲಭೂತ ಸೌಕರ್ಯದ ಕೊರತೆಯಿಂದ ಶಾಲೆ ಶಿಥಿಲಾವಸ್ಥೆ ತಲುಪಿದೆ.

First published:

  • 18

    BS Yediyurappa: ಶಿಥಿಲಾವಸ್ಥೆ ತಲುಪಿದ ಬಿ ಎಸ್ ಯಡಿಯೂರಪ್ಪ ಓದಿದ ಶಾಲೆ

    ಮಂಡ್ಯದ ಹಳೆ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡಿಯೂರಪ್ಪ ಅವರು ಓದಿದ ಮೊದಲ ಪಾಠ ಶಾಲೆ ಇದೆ. 1954 ರಲ್ಲಿ ಬಿಎಸ್ ಯಡ್ಡಿಯೂರಪ್ಪ 1 ನೇ ತರಗತಿಗೆ ಈ ಶಾಲೆಯಲ್ಲಿ ದಾಖಲಾಗಿದ್ರು.

    MORE
    GALLERIES

  • 28

    BS Yediyurappa: ಶಿಥಿಲಾವಸ್ಥೆ ತಲುಪಿದ ಬಿ ಎಸ್ ಯಡಿಯೂರಪ್ಪ ಓದಿದ ಶಾಲೆ

    ಬಳಿಕ 1 ರಿಂದ 3ನೇ ತರಗತಿವರೆಗೆ ಯಡ್ಡಿಯೂರಪ್ಪ ಈ ಶಾಲೆಯಲ್ಲಿ ವ್ಯಾಸಂಗಮಾಡಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ಈ ಶಾಲೆಯನ್ನ ಯಡ್ಡಿಯೂರಪ್ಪ ಓದಿದ ಶಾಲೆ ಎಂದೆ ಕರೆಯುತ್ತಾರೆ.

    MORE
    GALLERIES

  • 38

    BS Yediyurappa: ಶಿಥಿಲಾವಸ್ಥೆ ತಲುಪಿದ ಬಿ ಎಸ್ ಯಡಿಯೂರಪ್ಪ ಓದಿದ ಶಾಲೆ

    ಯಡ್ಡಿಯೂರಪ್ಪ ಅವರು ಓದಿದ ಈ ಶಾಲೆಗೆ ಮೂಲಭೂತ ಸೌಕರ್ಯದ ಕೊರತೆ ಇದೆ. ಮಳೆ ಬಂದ್ರೆ ಸಾಕು ಶಾಲೆಯ ಆವರಣ ಕೆರೆಯಾಗಿ ಮಾರ್ಪಾಡಾಗುತ್ತದೆ. ಶಾಲೆಗೆ ಮಕ್ಕಳು ಬರಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.
    ಯಡ್ಡಿಯೂರಪ್ಪ ಅವರು ಓದಿದ ಈ ಶಾಲೆಗೆ ಮೂಲಭೂತ ಸೌಕರ್ಯದ ಕೊರತೆ ಇದೆ. ಮಳೆ ಬಂದ್ರೆ ಸಾಕು ಶಾಲೆಯ ಆವರಣ ಕೆರೆಯಾಗಿ ಮಾರ್ಪಾಡಾಗುತ್ತದೆ. ಶಾಲೆಗೆ ಮಕ್ಕಳು ಬರಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.

    MORE
    GALLERIES

  • 48

    BS Yediyurappa: ಶಿಥಿಲಾವಸ್ಥೆ ತಲುಪಿದ ಬಿ ಎಸ್ ಯಡಿಯೂರಪ್ಪ ಓದಿದ ಶಾಲೆ

    ಮತ್ತೊಂದು ಕಡೆ ಹಳೆ ಶಾಲೆಯಾಗಿದ್ರಿಂದ ಶಾಲೆಯ ಗೋಡೆಗಳು ಕುಸಿಯುವ ಹಂತದಲ್ಲಿದೆ. ಅಷ್ಟೇ ಅಲ್ಲದೆ ಈಗಾಗಲೇ ಶಾಲೆಯ ಹಲವು ಭಾಗದ ಹೆಂಚುಗಳು ನೆಲಕ್ಕುರುಳಿವೆ.

    MORE
    GALLERIES

  • 58

    BS Yediyurappa: ಶಿಥಿಲಾವಸ್ಥೆ ತಲುಪಿದ ಬಿ ಎಸ್ ಯಡಿಯೂರಪ್ಪ ಓದಿದ ಶಾಲೆ

    ಇನ್ನು ಈ ಬಗ್ಗೆ ಶಾಲೆಯ ಶಿಕ್ಷಕ ನಾಗರಾಜು ಹೇಳುವ ಪ್ರಕಾರ, ಹಲವು ಬಾರಿ ದುರಸ್ತಿ ಕಾರ್ಯಕ್ಕೆ ಮನವಿ ಮಾಡಿದರೂ ಯಾರು ಕ್ರಮ ಕೈಗೊಳ್ತಿಲ್ಲ ಅಂತಿದ್ದಾರೆ.

    MORE
    GALLERIES

  • 68

    BS Yediyurappa: ಶಿಥಿಲಾವಸ್ಥೆ ತಲುಪಿದ ಬಿ ಎಸ್ ಯಡಿಯೂರಪ್ಪ ಓದಿದ ಶಾಲೆ

    ಶಾಲೆಯ ಆವರಣದಲ್ಲಿ ನೀರು ತುಂಬಿಕೊಳ್ಳುವ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದ್ರು ಏನು ಪ್ರಯೋಜನವಾಗ್ತಿಲ್ಲ.

    MORE
    GALLERIES

  • 78

    BS Yediyurappa: ಶಿಥಿಲಾವಸ್ಥೆ ತಲುಪಿದ ಬಿ ಎಸ್ ಯಡಿಯೂರಪ್ಪ ಓದಿದ ಶಾಲೆ

    ಆದ್ರೆ ಶಾಲಾ ಮಕ್ಕಳು ಮಾತ್ರ ಸಮಸ್ಯೆಯ ಜೊತೆಯಲ್ಲೇ ಪಾಠ ಕೇಳುವಂತಾಗಿದೆ ಎಂದಿದ್ದಾರೆ. ಅಲ್ಲದೆ ಈ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ 45 ವಿದ್ಯಾರ್ಥಿಗಳು ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಶಾಲೆಯ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆ.

    MORE
    GALLERIES

  • 88

    BS Yediyurappa: ಶಿಥಿಲಾವಸ್ಥೆ ತಲುಪಿದ ಬಿ ಎಸ್ ಯಡಿಯೂರಪ್ಪ ಓದಿದ ಶಾಲೆ

    ಒಟ್ಟಾರೆ ರಾಜ್ಯದಲ್ಲಿ ಒಬ್ಬ ಮುಖ್ಯಂತ್ರಿಯನ್ನ ಕೊಡುಗೆಯಾಗಿ ನೀಡಿದ ಈ ಶಾಲೆ ಇಂದು ಅಳಿವಿನಂಚಿನಲ್ಲಿ ಇರೋದು ವಿಪರ್ಯಾಸವಾಗಿದೆ. ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಯಡ್ಡಿಯೂರಪ್ಪ ಅವರ ನೆನಪಿನ ಬಾಲ್ಯದ ಶಾಲೆಯನ್ನ ಉಳಿಸುವಂತ ಕೆಲಸ ಮಾಡಬೇಕಿದೆ.

    MORE
    GALLERIES