BS Yediyurappa: ಬಣ್ಣದ ಲೋಕಕ್ಕೆ ರಾಜಾಹುಲಿ ಎಂಟ್ರಿ: ಯಾವ ಪಾತ್ರ ಗೊತ್ತಾ?
ಬಿಜೆಪಿಗೆ (BJP) ದಕ್ಷಿಣ ಭಾರತದ ಬಾಗಿಲು ತೆಗೆದಿದ್ದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(Former CM BS Yediyurappa). ಸದ್ಯ ಇರೋ ಬಿಜೆಪಿ ಸರ್ಕಾರ (BJP Government) ರಚನೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರದ್ದು ಪ್ರಮುಖ ಪಾತ್ರ. ಹೈಕಮಾಂಡ್ (BJP Highcommond) ಸೂಚನೆ ಮೇರೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯಡಿಯೂರಪ್ಪ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇದೀಗ ಪಕ್ಷ ಸಂಘಟನೆಯ ಜೊತೆಯಲ್ಲಿ ಬಣ್ಣದ ಲೋಕಕ್ಕೂ ಯಡಿಯೂರಪ್ಪ ಪ್ರವೇಶ ಮಾಡಿದ್ದಾರೆ. ಹೌದು, ಮೊದಲ ಬಾರಿಗೆ ಬಿಜೆಪಿಯ ರಾಜಾಹುಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.
2/ 8
ನೈಜ ಘಟನೆಯಾಧಾರಿತ ಸಾಮಾಜಿಕ ಕಳಕಳಿ ತನುಜಾ (Tanuja – Kannada Film) ಚಿತ್ರದಲ್ಲಿ ಯಡಿಯೂರಪ್ಪ ನಟಿಸುತ್ತಿದ್ದಾರೆ. ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಹರೀಶ್ ಎಂಡಿ (Director Hareesh MD) ಆಕ್ಷನ್ ಕಟ್ ಹೇಳುತ್ತಿದ್ದಾರೆ.
3/ 8
ತನುಜಾ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಯಡಿಯೂರಪ್ಪ ನಟಿಸಲಿದ್ದಾರೆ ಎಂಬುದನ್ನು ಮಾತ್ರ ಚಿತ್ರತಂಡ ಹೇಳಿದೆ. ಆದ್ರೆ ಯಾವ ಪಾತ್ರ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದ್ರೆ ಚಿತ್ರದಲ್ಲಿ ಮುಖ್ಯಮಂತ್ರಿಗಳ ಪಾತ್ರದಲ್ಲಿ ಯಡಿಯೂರಪ್ಪ ಅವರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
4/ 8
ಸದ್ಯ ಚಿತ್ರೀಕರಣದಲ್ಲಿ ಯಡಿಯೂರಪ್ಪ ಅವರು ಭಾಗಿಯಾಗಿರುವ ಕೆಲ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಂತಸದಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ.
5/ 8
ಮೊದಲ ಬಾರಿಗೆ ಯಡಿಯೂರಪ್ಪನವರು ನವೆಂಬರ್ 12, 2017ರಂದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಮೂಲಕ ದಕ್ಷಿಣ ಭಾರತದ ಮೊದಲ ಬಿಜೆಪಿ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
6/ 8
ನವೆಂಬರ್ 12ರಂದು ಸಿಎಂ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ಅವರು ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಹೊರ ಬಂದು ನವೆಂಬರ್ 19ರಂದು ರಾಜೀನಾಮೆ ನೀಡಿದ್ದರು.
7/ 8
ಇದಾದ ಬಳಿಕ ರಾಜ್ಯಾದ್ಯಂತ ಮಿಂಚಿನ ಓಟ ನಡೆಸಿದ ಯಡಿಯೂರಪ್ಪ ಅವರು ಬಹುಮತದೊಂದಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು.
8/ 8
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಕರ್ನಾಟಕದ ಲೋಕಾಯುಕ್ತ ನೀಡಿದ ತನಿಖಾ ವರದಿಯಲ್ಲಿ ಯಡಿಯೂರಪ್ಪನವರ ಹೆಸರಿತ್ತು. ಈ ಹಿನ್ನೆಲೆ ಹೈಕಮಾಂಡ್ ಸೂಚನೆ ಮೇರೆಗೆ 2011ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯ್ತು.