Shilpa Shetty: ತವರಿಗೆ ಬಂದ ಕರಾವಳಿ ಚೆಲುವೆ: ಮಂಗಳೂರಿನಲ್ಲಿ ತುಳು ಮಾತನಾಡಿ ಮನಗೆದ್ದ ಶಿಲ್ಪಾ ಶೆಟ್ಟಿ
Shilpa Shetty In Mangalore: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ಫಿಟ್ನೆಸ್ ಮಾಡೆಲ್ ಆಗಿಯೂ ಗುರುತಿಸಿಕೊಂಡವರು. ಮೂಲತಃ ಕರಾವಳಿಯವರಾದ ಇವರು ನಿನ್ನೆ ತಮ್ಮ ತವರೂರಾದ ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಕೇಂದ್ರವನ್ನು ಉದ್ಘಾಟಿಸಿದ ಶಿಲ್ಪಾ ಶೆಟ್ಟಿಯವರನ್ನು ನೋಡಲು ಅಭಿಮಾನಿಗಳ ದಂಡೇ ಸೇರಿತ್ತು.